1016ಕ್ಕೆ ಏರಿದ ಸೋಂಕಿತರ ಸಂಖ್ಯೆ
Team Udayavani, Jul 8, 2020, 9:47 AM IST
ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರವೂ ಮತ್ತೆ 10 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1016ಕ್ಕೆ ಏರಿಕೆಯಾಗಿದೆ.
ಸೋಂಕಿತರ ಸಂಕರ್ಪದಿಂದ ಸಮುದಾಯದಲ್ಲಿ ಸೋಂಕು ಹರಡುತ್ತಿದ್ದು, ಇದೀಗ ಜೂನ್ 21ರಂದು ಸೋಂಕು ಪತ್ತೆಯಾಗಿದ್ದ ಶಹಾಪುರ ತಾಲೂಕು ಮದ್ರಿಕಿ ಗ್ರಾಮದ 69 ವರ್ಷದ ಮಹಿಳೆ (ಪಿ-9105)ರ ಸಂಕರ್ಪದಿಂದ ಅದೇ ಗ್ರಾಮದ ಮೂರು ಜನ 35 ವರ್ಷದ ಮಹಿಳೆ ಪಿ-26804, 70 ವರ್ಷದ ಪುರುಷ ಪಿ-26805, 75 ವರ್ಷದ ಪುರುಷ ಪಿ-26806ಗೆ ಸೋಂಕು ದೃಢವಾಗಿದೆ.
ಇನ್ನು ಕೆಮ್ಮು, ನೆಗಡಿ, ಜ್ವರ ಗುಣಲಕ್ಷಣಗಳಿರುವ (ಐಎಲ್‌ಐ) ಐವರು ದೇವಿನಗರ ಶಹಾಪುರನ 22 ವರ್ಷದ ಪುರುಷ ಪಿ-26807, ಸಗರದ 18 ವರ್ಷದ ಬಾಲಕ ಪಿ-26808, ಯಾದಗಿರಿ ಹಳೆ ಜಿಲ್ಲಾಸ್ಪತ್ರೆ ವಸತಿ ಬಡಾವಣೆಯ 18 ವರ್ಷದ ಯುವತಿ ಪಿ-26809 ಮತ್ತು ಹಯ್ನಾಳ ಬಿ ಗ್ರಾಮದ 29 ವರ್ಷದ ಪುರುಷ ಪಿ-26810 ಹಾಗೂ ಯಾದಗಿರಿ ಶಿವನಗರದ 40 ವರ್ಷದ ಪಿ-26811 ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೇ ಮಹಾರಾಷ್ಟ್ರದಿಂದ ಆಗಮಿಸಿದ್ದ ಯಾದಗಿರಿಯ 28 ವರ್ಷದ ಪುರುಷ ಪಿ-26802, ತೆಲಂಗಾಣದಿಂದ ಆಗಮಿಸಿರುವ ಗುಂಜನೂರಿನ 15 ವರ್ಷದ ಬಾಲಕ ಪಿ-26803ಗೆ ಸೋಕು ಹರಡಿದೆ.
ಮಂಗಳವಾರ 325 ಜನರ ಮಾದರಿ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದಿನ 280 ವರದಿ ಸೇರಿ ಈವರೆಗೆ 26153 ಜನರ ವರದಿ ನೆಗೆಟಿವ್ ಬಂದಿದೆ. 1016 ಸೋಂಕಿತರಲ್ಲಿ ಈವರೆಗೆ 871 ಜನ ಗುಣಮುಖವಾಗಿದ್ದಾರೆ. 1987 ಜನ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರು ಪತ್ತೆ ಯಾಗಿದ್ದು, ಇನ್ನು 3276 ಜನ ದ್ವಿತೀಯ ಸಂಪರ್ಕದಲ್ಲಿರುವವರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯ 12 ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ 487 ಜನರನ್ನು ಇರಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.