ಮಿಮ್ಸ್ ಗಳಲ್ಲಿ ವೈರಲ್ ಆಗಿರುವ ಇವರು ನೈಜಿರಿಯಾ ಸಿನಿಮಾ ರಂಗದ ಖ್ಯಾತ ಸೆಲೆಬ್ರೆಟಿಗಳು..!

ಮಕ್ಕಳ ಹಾಗೆ ಕಾಣುವ ಇವರ ವಯಸ್ಸು ಕೇಳಿದ್ರೆ ಬೆರಗಾಗ್ತೀರ..

Team Udayavani, Jul 8, 2020, 6:16 PM IST

web-tdy-02

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಫೋಟೋ ಅಥವಾ ವಿಡಿಯೋಗಳು ನಾನಾ ಮಿಮ್ಸ್ ಹಾಗೂ ಟ್ರೋಲ್ ಪೇಜ್ ಗಳಲ್ಲಿ ಒಂದಿಷ್ಟು ದಿನ ರಾರಾಜಿಸುತ್ತವೆ. ಯಾವ ಸನ್ನಿವೇಶ ಸಂದರ್ಭವೇ ಇರಲಿ ಅದರೊಂದಿಗೆ ವೈರಲ್ ಆಗಿರುವ ವ್ಯಕ್ತಿಯ ಫೋಟೋ ಅಥವಾ ವಿಡಿಯೋವನ್ನು ಅಂಟಿಸಿ ಜನರಿಗೆ ಟೈಮ್ ಪಾಸ್ ಮಾಡಿಸುತ್ತವೆ ಮಿಮ್ಸ್ ಗಳು.

ಇತ್ತೀಚಿನ ದಿನಗಳಲ್ಲಿ ಆಫ್ರಿಕಾದ ಎರಡು ಮಕ್ಕಳ ವಿಡಿಯೋಗಳು ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ. ಮೇಲ್ನೋಟಕ್ಕೆ ಮಕ್ಕಳ ಹಾಗೆ  ಕಾಣುವ ಇವರ ತಮಾಷೆಯ ಸಂಗತಿ ಹಾಗೂ ತುಂಟಾಟ ನೋಡುಗರಿಗೆ ನಗೆ ತರಿಸದೆ ಇರದು. ಈ ಇಬ್ಬರು ನಗಿಸುವುದರಲ್ಲಿ ಪಂಟರುಗಳು ಬಿಡಿ. ಆದ್ರೆ ಇವರು ನಾವು ನೀವೂ ಅಂದುಕೊಂಡಿರುವಾಗೆ ಪುಟ್ಟ ಮಕ್ಕಳು ಅಲ್ಲ. ಸಾಮಾನ್ಯ ಜನರು ಅಲ್ಲ. ಇವರಿಬ್ಬರು ನೈಜೀರಿಯಾ ಸಿನಿಮಾ ರಂಗದ ಸ್ಟಾರ್ ನಟರು.!

ಹೌದು. ನಾಲಿವುಡ್ ( Nollywood) ಅಂದರೆ ನೈಜೀರಿಯಾ ಸಿನಿಮಾ ರಂಗದ ಸ್ಟಾರ್ ನಟರ ಸಾಲಿನಲ್ಲಿ ಮಿಮ್ಸ್ ಗಳಲ್ಲಿ ವೈರಲ್ ಆಗಿರುವ ಈ ಇಬ್ಬರು ಸೇರಿದ್ದಾರೆ.  ಮಕ್ಕಳ ಹಾಗೆ ಕಾಣುವ ಇವರ ವಯಸ್ಸು ಒಬ್ಬರದು 38 ಹಾಗೂ ಇನ್ನೊಬ್ಬರ ವಯಸ್ಸು 43.  ನಾಲಿವುಡ್ ಸಿನಿಮಾ ರಂಗದಲ್ಲಿ ಚಿನೆಡು ಇಕೆಡೀಜ್ ಮತ್ತು ಒಸಿಥಾ ಐಹೆಮ್ 2001 ರಿಂದ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರು ಹೆಚ್ಚಾಗಿ ಹಾಸ್ಯದ ಪಾತ್ರಗಳನ್ನು ಮಾಡಿದ್ದಾರೆ. ಅದರಿಂದಲೇ ಇವರು ಮಿಮ್ಸ್ ಗಳಲ್ಲಿ ಖ್ಯಾತಿಯಾಗಿರುವುದು.

ವೈರಲ್ ಆಗಿತ್ತು ಹೇಗೆ..? : ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ವಿಡಿಯೋ ಕ್ಲಿಪಿಂಗ್ ಗಳು ಎಲ್ಲೆಡೆ ವೈರಲ್ ಆಗಿದೆ. ಅವು ಎಲ್ಲಾ ಬಹಳ ಹಳೆಯ ತುಣುಕುಗಳು. 2002, 2005 ಹಾಗೂ 2007 ರ ವಿಡಿಯೋಗಳು ಮಿಮ್ಸ್ ಗಳಾಗಿ ವೈರಲ್ ಆಗಿವೆ. ಹೆಚ್ಚು ಪ್ರಸಿದ್ಧಿ ಆಗಿರುವ ವಿಡಿಯೋ ‘ಅಕಿ ನಾ ಉಕ್ವಾ’ ಎನ್ನುವ ನೈಜೀರಿಯಾದ ಕಾಮಿಡಿ ಚಿತ್ರದ್ದು. ಟ್ವಿಟರ್ ನಲ್ಲಿ ನಾಲಿವುಡ್ ಟ್ರೋಲ್ ಎನ್ನುವ ಪೇಜ್ ವೊಂದರಲ್ಲಿ ಇವರ ಸಣ್ಣ ಸಣ್ಣ ತುಣುಕುಗಳು ವೈರಲ್ ಆದವು. ಇವತ್ತು ಆ ಪೇಜ್ ನಲ್ಲಿ ಇವರ ನಟನೆಯನ್ನು ನೋಡಲು ಎರಡು ಲಕ್ಷಕ್ಕೂ ಹೆಚ್ಚು ಜನ ಹಿಂಬಾಲಕರು ಇದ್ದಾರೆ.

2007 ರಲ್ಲಿ ಒಸಿಥಾ ಅವರನ್ನು  ಆಫ್ರಿಕಾದ ಫಿಲ್ಮ್ ಅಕಾಡೆಮಿ ಇವರ ಪ್ರತಿಭೆಗೆ ಲೈಫ್ ಟೈಮ್ ಆ್ಯಚೀವ್ ಮೆಂಟ್ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಅವರು ಅಲ್ಲಿಯ ಜನಪ್ರಿಯ ನಟರಲ್ಲಿ ಒಬ್ಬರು ಮಾತ್ರವಲ್ಲದೆ Inspired Moment ಎನ್ನುವ ಸಂಸ್ಥೆಯ ಸ್ಥಾಪಕ ಕೂಡ ಹೌದು. ಈ ಸಂಸ್ಥೆ ಸ್ಪೂರ್ತಿದಾಯಕ ಮಾತುಗಳಲ್ಲಿ ಯುವ ಜನರಲ್ಲಿ ಜೀವನ ಪ್ರೀತಿ ತುಂಬುವ ಕೆಲಸ ಮಾಡುತ್ತದೆ. ಒಸಿಥಾ ಅವರು ಸ್ಟಾರ್ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಕಷ್ಟಪಟ್ಟು ಅಡಿಷನ್ ನಲ್ಲಿ ಆಯ್ಕೆಯಾಗಿ ಮೇಲೆ ಬಂದವರು. ನಟ,ಬರಹಗಾರ ಮಾತ್ರವಲ್ಲದೆ ಇವರು ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಒಡೆತನದಲ್ಲಿ ಸಾರಿಗೆ ಸಂಸ್ಥೆಯೂ ಇದೆ. ಇವರ ಕನಸು ಮುಂದೆ ರಾಜಕರಣಿಯಾಗಬೇಕೆನ್ನುವುದು.

ಇವರು ಇಬ್ಬರು ಸುಮಾರು 50 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

 

– ಸುಹಾನ್ ಶೇಕ್

ಟಾಪ್ ನ್ಯೂಸ್

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

kuladalli keelyavudo kannada movie

Kannada Cinema: ಕ್ಲೈಮ್ಯಾಕ್ಸ್‌ ನತ್ತ ʼಕುಲದಲ್ಲಿ ಕೀಳ್ಯಾವುದೋʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.