ಅಡಿಕೆ ಕೊಳೆ ರೋಗ: ಔಷಧ ಸಿಂಪಡಿಸಲು ತೋಟಗಾರಿಕೆ ಇಲಾಖೆ ಸೂಚನೆ
Team Udayavani, Jul 9, 2020, 5:27 AM IST
ಮಹಾನಗರ: ಅಡಿಕೆ ಎಲೆ ಚುಕ್ಕೆ ರೋಗವು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಶಿಲೀಂಧ್ರ ರೋಗವಾಗಿದ್ದು, ಎಲೆಗಳ ಮೇಲೆ ತೇವಾಂಶ ಇದ್ದಾಗ ಈ ರೋಗ ಕಂಡು ಬರುತ್ತದೆ. ಇದಕ್ಕಾಗಿ ಔಷಧ ಸಿಂಪಡಿಸುವುದು ಅಗತ್ಯ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ಮೊದಲು ತಳಭಾಗದ ಎಲೆಗಳ ಮೇಲೆ ಕಂದುಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಕಂಡು ಬಂದು ಅನಂತರ ಒಂದು ರೂ. ನಾಣ್ಯದಷ್ಟು ಅಗಲವಾಗುತ್ತವೆ. ಬಳಿಕ ಇಡೀ ಎಲೆಗಳಿಗೆ ಹರಡಿ ಎಲೆಗಳು ಒಣಗುತ್ತವೆ. ಇದರಿಂದ ಆಹಾರ ತಯಾರಿಕೆ ಕಡಿಮೆಯಾಗಿ ಅಡಿಕೆ ಕಾಯಿ ಗಾತ್ರ, ಗುಣಮಟ್ಟ ಮತ್ತು ಇಳುವರಿ ಕಡಿಮೆಯಾಗುತ್ತದೆ. ರೋಗ ಹೆಚ್ಚಾಗಿ ತಳಭಾಗದ 4ರಿಂದ 5 ಸೋಗೆಗಳು ಒಣಗುತ್ತವೆ. ಇದರಿಂದ ಶೇ. 50ರಷ್ಟು ಇಳುವರಿ ಕಡಿಮೆಯಾಗುತ್ತದೆ.
ರೋಗದ ನಿರ್ವಹಣೆಗೆ ರೋಗಪೀಡಿತ ಸತ್ತ ಎಲೆಗಳನ್ನು ತೆಗೆದು ಸುಡಬೇಕು, ತೋಟದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಹಾಗೂ 3 ಗ್ರಾಂ. ಕಾಪರ್ ಆಕ್ಸಿಕ್ಲೋರೈಡ್ ಅಥವಾ ಶೇ. 1ರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು.
ಗಾಳಿಯಲ್ಲಿ ಹರಡುವ ಸಾಧ್ಯತೆ
ಅಡಿಕೆ ಕೊಳೆರೋಗವು ಜೂನ್‌ನಿಂದ ಸೆಪ್ಟಂಬರ್ ತಿಂಗಳವರೆಗೆ ಕಾಣಿಸಿಕೊಳ್ಳುವುದರಿಂದ ಬೆಳೆಯಲ್ಲಿ ಹೆಚ್ಚಿನ ನಷ್ಟವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಕಳೆದ ವರ್ಷ ಕೊಳೆರೋಗ ಬಂದ ತೋಟಗಳಲ್ಲಿ ರೋಗಾಣು ಸುಪ್ತಾವಸ್ಥೆಯಲ್ಲಿದ್ದು, ಈಗ ಪೂರಕ ವಾತಾವರಣ ಇರುವುದರಿಂದ ಒಮ್ಮೆಲೆ ತೀವ್ರವಾಗುತ್ತದೆ. ಈ ರೋಗವು ಗಾಳಿ ಮುಖಾಂತರ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮಂಗಳೂರು ತೋಟಗಾರಿಕೆ ವಿಷಯ ತಜ್ಞರಾದ ರಿಶಲ್ ಡಿ’ಸೋಜಾ ಅವರನ್ನು ಸಂಪರ್ಕಿಸ
ಬಹುದು ಎಂದು ಮಂಗಳೂರು ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.
ನಿರ್ವಹಣೆ ಕ್ರಮ
ಅಡಿಕೆ ಕೊಳೆರೋಗ ನಿವಾರಣೆಗೆ ಶೇ. 1ರ ಬೋಡೋì ದ್ರಾವಣ ಸಿಂಪಡಣೆಯನ್ನು ಮಳೆಗಾಲ ಪ್ರಾರಂಭವಾಗುವುದಕ್ಕೆ ಮೊದಲು ಮತ್ತು 30ರಿಂದ 45 ದಿನಗಳ ಅನಂತರ ಇನ್ನೊಮ್ಮೆ ಸಿಂಪಡಿಸಬೇಕು. ಮಳೆ ಬಿಡುವಿದ್ದಾಗ 2ನೇ ಹಂತದ ಬೋರ್ಡೋ ದ್ರಾವಣ ಸಿಂಪಡನೆಗೆ ಈಗ ಸೂಕ್ತ ಕಾಲವಾಗಿದೆ.
ಕಾಳುಮೆಣಸು ಸೊರಗು ರೋಗಗಳು ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಬಾಧಿಸುತ್ತವೆ. ಈ ಸೊರಗು ರೋಗ ನಿಯಂತ್ರಿಸಲು ಶೇ. 1ರ ಬೋರ್ಡೋ ದ್ರಾವಣವನ್ನು ಬಳ್ಳಿಗಳ ಎಲ್ಲ ಎಲೆಗಳಿಗೆ ಬೀಳುವಂತೆ ಸೂಕ್ಷ್ಮವಾಗಿ ಸಿಂಪಡಿಸಿದ ಅನಂತರ ಅದೇ ದ್ರಾವಣವನ್ನು ಬಳ್ಳಿಗಳ ಬುಡಕ್ಕೂ ಸಿಂಪಡಿಸಬೇಕು. ಈ ಸಿಂಪಡಣೆಯನ್ನು 30-40 ದಿನಗಳ ಅಂತರದಲ್ಲಿ ಪುನರಾವರ್ತಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
Sulya: ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ; ಜಖಂ
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.