ಭತ್ತದ ಗದ್ದೆಯಲ್ಲಿ ಲೀಚರ್ ಹುಳು ಶಮನಕ್ಕೆ ಉಪಕ್ರಮ
ಗದ್ದೆಗೆ ತೆರಳುವ ಕಾರ್ಮಿಕರಿಗೆ ಸಮಸ್ಯೆ
Team Udayavani, Jul 9, 2020, 5:56 AM IST
ಉಡುಪಿ: ಭತ್ತ ಬೇಸಾಯದ ಗದ್ದೆಗಳಲ್ಲಿ ಕಾಣಿಸಿಕೊಳ್ಳುವ ಲೀಚರ್ ಹುಳುವಿನ ನಿಯಂತ್ರಣಕ್ಕೆ ಸ್ವಯಂ-ಸುರಕ್ಷತೆಯ ಜತೆಗೆ ಅವುಗಳ ನಿಯಂತ್ರಣಕ್ಕೆ ಕೆವಿಕೆ ಬ್ರಹ್ಮಾವರ ಕೆಲವು ಉಪಕ್ರಮಗಳನ್ನು ತಿಳಿಸಿದ್ದು, ಈ ಪ್ರಕಾರ ಕಾರ್ಯನಿರ್ವಹಿಸುವಂತೆ ಭತ್ತ ಬೇಸಾಯಗಾರರಿಗೆ ಸೂಚಿಸಿದೆ.
ಭತ್ತ ಬೇಸಾಯದ ಗದ್ದೆಯಲ್ಲಿ ಲೀಚರ್ ಕೀಟಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಪಶ್ಚಿಮ ಘಟ್ಟ ಪ್ರದೇಶದ ತಪ್ಪಲು ಪ್ರದೇಶಗಳ ಗದ್ದೆಗಳಲ್ಲಿ ಹೆಚ್ಚು ಕಾಡು ಪ್ರಾಣಿಗಳಿರುವ ಕಾಡಂಚಿನ ಕೃಷಿ ಭೂಮಿಗಳ ಮಳೆಯಾಶ್ರಿತ ಮತ್ತು ನೀರಾವರಿ ಒದ್ದೆ ಭೂಮಿಯಲ್ಲಿ ಇವುಗಳು ಹೆಚ್ಚು ಕಂಡು ಬರುತ್ತವೆ. ತೋಡು, ಹಳ್ಳ, ಕೊಳ್ಳಗಳಿರುವ ಜಾಗಗಳಿಂದ ನೀರಿನಲ್ಲಿ ಉತ್ಪತ್ತಿಗೊಂಡು ಕೀಟಗಳು ಪಕ್ಕದ ಗದ್ದೆಗೆ ಬರುತ್ತವೆ.
ಜಿಗಣೆಯಂತೆ ರಕ್ತ ಹೀರುತ್ತವೆ
ಲೀಚರ್ ಹುಳುಗಳಿಂದ ಭತ್ತದ ಮೇಲೆ ಯಾವುದೇ ಪರಿಣಾಮಗಳು ಇರುವುದಿಲ್ಲ. ಬದಲಾಗಿ ಗದ್ದೆಗೆ ತೆರಳುವ ಕಾರ್ಮಿಕರ ರಕ್ತವನ್ನು ಅವುಗಳು ಜಿಗಣೆಗಳ ತರಹವೇ ಹೀರುತ್ತವೆ.
ಸುಲಭವಾಗಿ ಕಾಣಿಸದ ಲೀಚರ್ ಕೀಟ ಮನುಷ್ಯನ ದೇಹವನ್ನು ಕಚ್ಚಿ, ರಕ್ತ ಹೀರಿ ಪರಾರಿಯಾಗುತ್ತದೆ. ಅದು ಕಚ್ಚಿದ ಭಾಗದಲ್ಲಿ ಉರಿ ಉಂಟಾಗುತ್ತದೆ. ಇದರ ಕಡಿತದಿಂದ ಮಾರಕವಲ್ಲದಿದ್ದರೂ ಸ್ವಾಸ್ಥ್ಯ ಕೆಡಿಸುವ ಕೆಲವು ಕಾಯಿಲೆಗಳು ಹರಡುತ್ತವೆ. ಇವುಗಳ ದಾಳಿಗೆ ಹೆದರಿ ಕಾರ್ಮಿಕರು ನಾಟಿ, ಕಳೆ ತೆಗೆಯುವ ಕಾರ್ಯಗಳಿಗೆ ಬರಲು ಹಿಂದೇಟು ಹಾಕುತ್ತಾರೆ.
ಕೀಟದಿಂದ ಮುಕ್ತಿ ಹೇಗೆ?
ಕೀಟಗಳು ಗದ್ದೆಯ ಸಂಧಿಗಳಲ್ಲಿ ರುತ್ತವೆ. ಇವುಗಳನ್ನು ಹೊಡೆದೋಡಿಸಿ, ನಾಶಪಡಿಸಲು ಸಾಧ್ಯವಿಲ್ಲ. ಕಚ್ಚುವು ದರಿಂದ ಪಾರಾಗಲು ದೇಹದ ಭಾಗಗಳಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳ ಬೇಕು. ನಾಶಕ್ಕೆ ನಿರ್ದಿಷ್ಟ ಯಾವುದೇ ಕೀಟನಾಶಕ ಔಷಧಗಳಿಲ್ಲ. ಗದ್ದೆಗೆ ಸುಣ್ಣ ಅಥವಾ ಮೆಟಾಲೀಡ್ ಸಿಂಪಡಿಸಿ ನಾಶಪಡಿಸಬಹುದು. ಸುರಕ್ಷತೆ ದೃಷ್ಟಿಯಿಂದ ಗದ್ದೆಗೆ ಇಳಿಯುವ ಸಂದರ್ಭ ದೇಹಕ್ಕೆR ಹರಳೆಣ್ಣೆ ಇತ್ಯಾದಿ ಹಚ್ಚಿಕೊಂಡು ಇಳಿಯುವುದು, ದೇಹದ ಭಾಗಗಳಿಗೆ ಪ್ಲಾಸ್ಟಿಕ್ ಇನ್ನಿತರ ಸುರಕ್ಷತೆಗೆ ಸಾಧನಗಳನ್ನು ಸುತ್ತಿಕೊಂಡು ಇಳಿಯಬೇಕು ಇವುಗಳಷ್ಟೆ ಉಪಶಮನಕ್ಕೆ ಇರುವ ಮಾರ್ಗವಾಗಿದೆ.
ಸಾವಯವ ಗೊಬ್ಬರ ತಿಂದು ಜೀವನ
ಲೀಚರ್ ಗದ್ದೆಯಲ್ಲಿ ನಿಂತ ನೀರಿನಲ್ಲಿ ಈಜಾಡುತ್ತದೆ. ಸಾವಯವ ಗೊಬ್ಬರವನ್ನು ಅದು ತಿನ್ನುತ್ತದೆ. ರಕ್ತ ಹೀರಿ ಅದು ಬೆಳೆಯುತ್ತದೆ. ಗದ್ದೆಯಲ್ಲಿ ನೀರು ಆರಿಕೊಂಡು ಬರುವಾಗ ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡು ತೊಂದರೆ ಕೊಡುತ್ತವೆ.
ಕೀಟದಲ್ಲಿ ಆಯುರ್ವೇದ ಗುಣ
ಈದು ಗ್ರಾಮದ ಭತ್ತದ ಗದ್ದೆಯಲ್ಲಿ ಕೀಟ ಸಮಸ್ಯೆ ಈ ಹಿಂದೆ ಕಾಣಿಸಿ ಕೊಂಡಿತ್ತು. ಅಲ್ಲಿಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು ತೆರಳಿದ್ದರು. ಕೀಟವನ್ನು ಪತ್ತೆಹಚ್ಚಿ ಪ್ರಯೋಗಾಲಯಕ್ಕೆ ಕಳಿಸಿದ್ದರು. ಈ ವೇಳೆ ಈ ಕೀಟದಲ್ಲಿ ರೋಗ ನಿರೋಧಕ ಶಕ್ತಿ ಇರುವ ಬಗ್ಗೆ ಸಂಶೋಧನೆ ಯಲ್ಲಿ ಕಂಡು ಬಂದಿತ್ತು. ಮನುಷ್ಯನ ದೇಹದಲ್ಲಿರುವ ರಕ್ತದ ಕೇಡು (ನಂಜು) ರಕ್ತವನ್ನು ಅದು ಹೀರಿ ಕೊಳ್ಳುತ್ತದೆ. ರಕ್ತವನ್ನು ಶುದ್ಧೀಕರಣ ಗೊಳಿಸುತ್ತದೆ ಎನ್ನುವ ಅಂಶ ಬೆಳಕಿಗೆ ಬಂದಿತ್ತು. ಆಯುರ್ವೇದ ಪದ್ಧತಿ ಯಲ್ಲಿ ಈ ಕೀಟ ಔಷಧವಾಗಿ, ಚಿಕಿತ್ಸೆಗೂ ಬಳಸುತ್ತಿರುವ ಅಂಶ ಕೂಡ ಕಂಡು ಬಂದಿತ್ತು. ಆಯುರ್ವೇದ ಸಂಶೋಧನೆ ಕಾಲೇಜುಗಳಿಂದ ಕೂಡ ಈ ಕೀಟಕ್ಕೆ ಬೇಡಿಕೆ ಇದೆ.
ನಿರ್ದಿಷ್ಟ ಪರಿಹಾರ ಇಲ್ಲ
ಭತ್ತದ ಗದ್ದೆಯಲ್ಲಿ ಕಂಡು ಬರುವ ಲೀಚರ್ ಕೀಟ ನಾಶಕ್ಕೆ ನಿರ್ದಿಷ್ಟ ಪರಿಹಾರ ಇಲ್ಲ . ದೇಹದ ಭಾಗಗಳಿಗೆ ಸುರಕ್ಷತೆ ಕವಚಗಳು ಮತ್ತು ಹರಳೆಣ್ಣೆ ಹಚ್ಚಿಕೊಂಡು ಕಾರ್ಮಿಕರು ಗದ್ದೆಗೆ ಇಳಿಯಬೇಕು. ಪಶ್ಚಿಮ ಘಟ್ಟ ಪ್ರದೇಶದ ಕಾಡಂಚಿನ ಜಾಗಗಳ ಬದಿಯ ಗದ್ದೆಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ.
-ಡಾ| ಧನಂಜಯ,
ಕೃಷಿ ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ
ರೈತಸೇತು ಸಹಾಯವಾಣಿ
ಕೃಷಿ ಸಮಸ್ಯೆಗಳಿದ್ದರೆ ತಿಳಿಸಿ
ರೈತರು ತಮ್ಮಲ್ಲಿದ್ದ ಹೆಚ್ಚಿನ ಬೆಳೆಗಳನ್ನು ಮಾರಾಟ ಮಾಡಿ ಈಗ ಮುಂಗಾರು ಮಳೆಯೊಂದಿಗೆ ಮತ್ತೆ ಕೃಷಿ ಕಾಯಕಕ್ಕೆ ಮರಳಿದ್ದಾರೆ. ಆದುದರಿಂದ ಇನ್ನು ಕೆಲವು ಸಮಯ ರೈತ ಸೇತು ಅಂಕಣದಲ್ಲಿ ಕೃಷಿ ಉತ್ಪನ್ನಗಳ ವಿವರ ಪ್ರಕಟವಾಗುವುದಿಲ್ಲ. ಆದರೆ ಪ್ರತಿ ಗುರುವಾರ ರೈತಸೇತು ಅಂಕಣದಲ್ಲಿ ಕೃಷಿ ಪೂರಕ ಮಾಹಿತಿ ಪ್ರಕಟವಾಗುತ್ತದೆ. ನಿಮ್ಮಲ್ಲಿಯೂ ಯಾವುದಾದರೂ ಸಂಶಯಗಳಿದ್ದರೆ, ಪರಿಣತರ ಅಭಿಪ್ರಾಯ ಅಗತ್ಯವಿದ್ದರೆ ಅದನ್ನು ಬರೆದು ಕಳುಹಿಸಬಹುದು. ತಜ್ಞರ ಬಳಿ ಸಮಾಲೋಚಿಸಿ ಅದಕ್ಕೆ ಪರಿಹಾರ ಸೂಚಿಸಲಾಗುವುದು. ಈ ರೀತಿ ಕಳುಹಿಸುವಾಗ ನಿಮ್ಮ ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಿ.
ವಾಟ್ಸಪ್ ಸಂಖ್ಯೆ: 76187 74529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.