ಚಿನ್ನದ ಕಳಂಕ CBI ತನಿಖೆ? ಕಸ್ಟಮ್ಸ್ ಕಚೇರಿಯಿಂದ ಮಾಹಿತಿ ಸಂಗ್ರಹ ; NIAಯಿಂದಲೂ ಅನ್ವೇಷಣೆ
Team Udayavani, Jul 9, 2020, 6:30 AM IST
ತಿರುವನಂತಪುರ/ಕೊಚ್ಚಿ: ಕೇರಳದಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ಸಿಬಿಐಗೆ ವಹಿಸುವ ಸಾಧ್ಯತೆಗಳು ಅಧಿಕವಾಗಿವೆ.
ಅದಕ್ಕೆ ಪೂರಕವಾಗಿ ಕೊಚ್ಚಿಯಲ್ಲಿರುವ ಕಸ್ಟಮ್ಸ್ ಇಲಾಖೆಯ ಕಚೇರಿಗೆ ಬುಧವಾರ ಭೇಟಿ ನೀಡಿ ತನಿಖಾ ಸಂಸ್ಥೆ ಮಾಹಿತಿ ಸಂಗ್ರಹಿಸಿದೆ.
ಕೇರಳ ಮಾಹಿತಿ ತಂತ್ರಜ್ಞಾನ ಇಲಾಖೆಯ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್, ಆಕೆಯ ಸ್ನೇಹಿತ ಸರಿತ್ ಕುಮಾರ್ ಜತೆಗೆ ಕೇಂದ್ರ ಸರಕಾರದ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಿದೆ. ಅಂಥ ಅನುಮಾನಗಳು ನಿಜವಾದರೆ ಸಿಬಿಐ ರಂಗಕ್ಕೆ ಇಳಿಯಲಿದೆ. ಮಂಗಳವಾರವಷ್ಟೇ ಪ್ರತಿಪಕ್ಷ ಗಳು ಸಿಬಿಐ ತನಿಖೆಗೆ ಒತ್ತಾಯಿಸಿದ್ದವು.
ಈ ಹೈಪ್ರೊಫೈಲ್ ಪ್ರಕರಣಕ್ಕೆ ಅಂತಾರಾಷ್ಟ್ರೀಯ ಲಿಂಕ್ ಇರುವುದರಿಂದ ಎನ್‌ಐಎ, ಇಂಟೆಲಿಜೆನ್ಸ್ ಬ್ಯೂರೋ ಕೂಡ ತನಿಖೆ ಶುರು ಮಾಡಿವೆ. ಪ್ರಕರಣದಲ್ಲಿ ದೇಶದ ಭದ್ರತೆ, ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆಯೇ ಎಂಬ ಅಂಶದ ಬಗ್ಗೆ ಕೂಡ ಎನ್‌ಐಎ ತನಿಖೆ ನಡೆಸಲಿದೆ.
ದೊಡ್ಡವರ ಜತೆಗೆ ಲಿಂಕ್?
ಸ್ವಪ್ನಾ ಅವರ ದೂರವಾಣಿ ಕರೆಗಳ ವಿವರಗಳನ್ನು ಕಲೆ ಹಾಕುತ್ತಿರುವ ತನಿಖಾಧಿಕಾರಿಗಳಿಗೆ ಅನೇಕ ಮಾಹಿತಿಗಳು ಸಿಗಲಾರಂಭಿಸಿವೆ. ಯುಎಇ ದೂತಾವಾಸ ಕಚೇರಿಯಲ್ಲಿ, ಕೇರಳ ಸರಕಾರದಲ್ಲಿ ಉನ್ನತ ಅಧಿಕಾರಿಗಳ ಜತೆಗೆ ಆಕೆ ಟೆಲಿಫೋನ್ ಸಂಪರ್ಕ ಹೊಂದಿರುವಂಥ ಮಾಹಿತಿಗಳು ಲಭ್ಯವಾಗಿವೆ. ಆಕೆಯ ಮೊಬೈಲ್‌ನಿಂದ ಅಧಿಕಾರಿಗಳಿಗೆ ಕೆಲವು ನಿರ್ದಿಷ್ಟ ದಿನಗಳಲ್ಲಿ 10ಕ್ಕಿಂತ ಹೆಚ್ಚು ಕರೆಗಳು ಹೋಗಿರುವುದನ್ನೂ ಅಧಿಕಾರಿಗಳು ಗಮನಿಸಿದ್ದು, ಆ ಕುರಿತಂತೆ ತನಿಖೆ ಆರಂಭಿಸಿದ್ದಾರೆ.
ಯುಎಇಯಿಂದಲೂ ತನಿಖೆ
ಪ್ರಕರಣದ ಬಗ್ಗೆ ಯುಎಇ ಸರಕಾರ ಕೂಡ ತನಿಖೆ ನಡೆಸಲಾರಂಭಿಸಿದೆ. ತಿರುವನಂತಪುರದಲ್ಲಿರುವ ದೂತಾವಾಸ ಕಚೇರಿಗೆ ಚಿನ್ನ ಕಳುಹಿಸಿದ್ದು ಯಾರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಭಾರತದಲ್ಲಿ ಯುಎಇ
ಮರ್ಯಾದೆಗೆ ಕುಂದುಂಟು ಮಾಡಿದವರನ್ನು ಸುಮ್ಮನೆ ಬಿಡಲಾಗದು ಎಂದು ಹೊಸದಿಲ್ಲಿಯಲ್ಲಿರುವ ಯುಎಇ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.