ಐಪಿಎಲ್ ಇಲ್ಲದೆ 2020 ಮುಗಿಯದು: ಗಂಗೂಲಿ
Team Udayavani, Jul 9, 2020, 6:48 AM IST
ಹೊಸದಿಲ್ಲಿ: ಪ್ರಸಕ್ತ ಋತುವಿನಲ್ಲಿ ಐಪಿಎಲ್ ನಡೆಸುವುದೇ ತಮ್ಮ ಪ್ರಮುಖ ಆದ್ಯತೆ ಆಗಿರುತ್ತದೆ, ಕೋವಿಡ್-19 ಕಂಟಕದ ಹೊರತಾಗಿಯೂ ಐಪಿಎಲ್ ಇಲ್ಲದೆ 2020ನೇ ಇಸವಿ ಮುಗಿಯದು ಎಂದು ಖಚಿತ ಧ್ವನಿಯಲ್ಲಿ ಹೇಳಿದ್ದಾರೆ .
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ. “ಐಪಿಎಲ್ ಇಲ್ಲದೇ 2020ರ ಋತುವನ್ನು ಮುಗಿ ಸಲು ನಮಗೆ ಇಷ್ಟವಿಲ್ಲ. ಆದರೆ ಟಿ20 ವಿಶ್ವಕಪ್ ಬಗ್ಗೆ ಐಸಿಸಿ ಖಚಿತ ನಿರ್ಧಾರ ತೆಗೆದುಕೊಳ್ಳದ ಹೊರತು ಐಪಿಎಲ್ ಆಯೋಜನೆ ಕುರಿತು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ’ ಎಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ದಾದಾ ಹೇಳಿದರು.
“ಐಪಿಎಲ್ ಪಂದ್ಯಾವಳಿಯನ್ನು ಭಾರತದಲ್ಲೇ ನಡೆಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಲಿದೆ. ಕನಿಷ್ಠ 35ರಿಂದ 40 ದಿನಗಳ ಅವಧಿ ಲಭಿಸಿದರೂ ಸಾಕು, ನಾವು ಕೂಟವನ್ನು ನಡೆಸಲಿದ್ದೇವೆ. ಆದರೆ ಎಲ್ಲಿ ಎಂಬುದು ಮಾತ್ರ ಗೊತ್ತಿಲ್ಲ…’ ಎಂದು “ಇನ್ಸ್ ಪಿರೇಶನ್ ಶೋ’ದಲ್ಲಿ ಗಂಗೂಲಿ ಹೇಳಿದರು.
ಮೊದಲ ಆದ್ಯತೆ ಭಾರತ
“ಪಂದ್ಯಾವಳಿಯನ್ನು ನಡೆಸಲು ಈಗಾಗಲೇ ಯುಎಇ, ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ಆಸಕ್ತಿ ವಹಿಸಿರುವುದು ನಿಜ. ಆದರೆ ಈ ಕೊರೊನಾ ಸ್ಥಿತಿಯಲ್ಲಿ ಕ್ರಿಕೆಟ್ ಕೂಟವನ್ನು ವಿದೇಶಗಳಲ್ಲಿ ನಡೆಸಿದರೆ ಖರ್ಚು ವಿಪರೀತವಾಗುತ್ತದೆ. ಹೀಗಾಗಿ ಇದು ಭಾರತದಲ್ಲೇ ನಡೆಯುವಂತಿದ್ದರೆ ಒಳ್ಳೆಯದು…’ ಎಂದರು.
“ಐಸಿಸಿ ಈವರೆಗೆ ಟಿ20 ವಿಶ್ವಕಪ್ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮಾಧ್ಯಮಗಳಿಂದ ಬೇರೆ ಬೇರೆ ರೀತಿಯ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಯಾವುದೂ ಅಧಿಕೃತವಲ್ಲ. ಹೀಗಾಗಿ ಐಪಿಎಲ್ ನಿರ್ಧಾರದಲ್ಲೂ ವಿಳಂಬ ಸಹಜ’ ಎಂಬುದಾಗಿ ಗಂಗೂಲಿ ಹೇಳಿದರು.
“ಮುಂಬಯಿ, ಹೊಸದಿಲ್ಲಿ, ಕೋಲ್ಕತಾ, ಚೆನ್ನೈ, ಬೆಂಗಳೂರೆಲ್ಲ ಐಪಿಎಲ್‌ನ ದೊಡ್ಡ ಐಪಿಎಲ್ ತಂಡಗಳನ್ನು ಹೊಂದಿವೆ. ಆದರೆ ಇಲ್ಲೆಲ್ಲ ಕೋವಿಡ್-19 ತೀವ್ರಗೊಂಡಿದೆ. ಹೀಗಾಗಿ ಈ ಕೇಂದ್ರಗಳಲ್ಲಿ ಐಪಿಎಲ್ ಆಡಿಸಬಹುದೆಂಬ ಧೈರ್ಯ ಯಾರಲ್ಲೂ ಇಲ್ಲ. ಒಟ್ಟಾರೆ ಹಳಿ ತಪ್ಪಿದ ಬದುಕು ಸಹಜ ಸ್ಥಿತಿಗೆ ಮರಳಬೇಕು, ಇದರೊಂದಿಗೆ ಕ್ರಿಕೆಟ್ ಕೂಡ…’ ಎಂಬ ಆಶಯ ವ್ಯಕ್ತಪಡಿಸಿದರು ಗಂಗೂಲಿ.
ಏಶ್ಯ ಕಪ್ ಕ್ರಿಕೆಟ್ ರದ್ದು
ಹೊಸದಿಲ್ಲಿ: ಸೆಪ್ಟಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ರದ್ದುಗೊಂಡಿದೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
“ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ರದ್ದುಗೊಂಡಿದೆ. ಇದು ಸೆಪ್ಟಂಬರ್‌ನಲ್ಲಿ ನಡೆಯಬೇಕಿತ್ತು’ ಎಂದು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮೂಡಿಬಂದ “ಸ್ಪೋರ್ಟ್ಸ್ ಟಾಕ್’ ಕಾರ್ಯಕ್ರಮದಲ್ಲಿ ಗಂಗೂಲಿ ಹೇಳಿದರು. ಆದರೆ ಈ ಪಂದ್ಯಾವಳಿಯ ಆತಿಥೇಯ ರಾಷ್ಟ್ರದ ಕುರಿತು ಅವರು ಯಾವುದೇ ಪ್ರಸ್ತಾವ ಮಾಡಲಿಲ್ಲ.
6 ರಾಷ್ಟ್ರಗಳ ನಡುವಿನ ಈ ಪಂದ್ಯಾವಳಿ ಪಾಕಿಸ್ಥಾನದ ಆತಿಥ್ಯದಲ್ಲಿ ನಡೆಯಬೇಕಿತ್ತು. ಆದರೆ ಭಾರತ ಇದರಲ್ಲಿ ಪಾಲ್ಗೊಳ್ಳದ ಕಾರಣ ಕೂಟವನ್ನು ಯುಎಇಯಲ್ಲಿ ನಡೆಸುವ ಕುರಿತು ಮಾತುಕತೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.