ದೇಗುಲಕ್ಕೆ ಅಳವಡಿಸಿರುವ ಗೇಟ್ ಬದಲಿಸಿ
Team Udayavani, Jul 9, 2020, 5:16 AM IST
ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದ ಹೊರಬಾಗಿಲಿಗೆ ಅಳವಡಿಸಿರುವ ಗೇಟ್ ಅವೈಜ್ಞಾನಿವಾಗಿದ್ದು, ಕೂಡಲೇ ಬದಲಿಸುವಂತೆ ತಾಪಂ ಉಪಾಧ್ಯಕ್ಷ ಗೋವಿಂದರಾಜು ಆಗ್ರಹಿಸಿದರು. ಪಟ್ಟಣದ ತಾಪಂ ಕಚೇರಿಯಲ್ಲಿ ಅಧ್ಯಕ್ಷ ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ದೇವಾಲಯದಲ್ಲಿ ಒಂದು ಮೊಳೆ ಹೊಡೆಯಬೇಕೆಂದರೂ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅನುಮತಿ ಪಡೆಯಬೇಕು ಎನ್ನುವ ನೀವು ಯಾರನ್ನು ಕೇಳಿ, ಈ ಅವೈಜ್ಞಾನಿಕವಾದ ಗೇಟ್ ಅಳವಡಿಸಿ ದೇವಾಲಯದ ಅಂದ ಹಾಳು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಗೇಟ್ ಅಳವಡಿಕೆಗೆ ಅನುಮತಿ ಪತ್ರ, ಅದಕ್ಕಾದ ಖರ್ಚು ವೆಚ್ಚಗಳ ಬಗ್ಗೆಯೂ ಸಭೆಗೆ ತೋರಿಸಬೇಕೆಂದು ದೇವಾಲಯದ ಆಡಳಿತ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಉಪಾಧ್ಯಕ್ಷರ ಮಾತಿಗೆ ತಡಬಡಿಸಿದ ದೇವಾಲಯದ ಅಧಿಕಾರಿ ರವಿಕುಮಾರ್, ನಾಳೆಯೇ ಅದನ್ನು ತೆರವುಗೊಳಿಸುತ್ತೇನೆ ಎಂದು ತಿಳಿಸಿದರು. ಅಧ್ಯಕ್ಷ ಮಹದೇವಪ್ಪ ಮಾತನಾಡಿ, ಹೆಡೆ ಯಾಲದಲ್ಲಿ ಹಾಗೂ ಹೆಜ್ಜಿಗೆಯಲ್ಲಿ ಸುಸ್ಥಿಯಲ್ಲಿದ್ದ ರಸ್ತೆ ಹಾಗೂ ಚರಂಡಿಯನ್ನು ಕಿತ್ತು 4 ವರ್ಷವಾಯಿತು. ಇದುವರೆಗೂ ದುರಸ್ತಿ ಮಾಡಿಲ್ಲ. ಸರಿಪಡಿಸಲು ಇನ್ನೆಷ್ಟು ವರ್ಷಗಳು ಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಅಧಿಕಾರಿ ಮುತ್ತುರಾಜ್, ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡುತ್ತಿದ್ದು, 15 ದಿನದಲ್ಲಿ ಹೆಡೆಯಾಲದ ರಸ್ತೆ ಚರಂಡಿ ದುರಸ್ತಿ ಮಾಡಿಸುವ ಭರವಸೆ ನೀಡಿದರು. ಮಳೆಗಾಲ ಆರಂಭವಾಗಿದೆ. ಕಬಿನಿ ಜಲಾಶಯದಲ್ಲಿ ದಿನದಿನಕ್ಕೂ ನೀರಿನ ಪ್ರಮಾಣ ಏರುತ್ತಿದೆ. ನೀರು ಈಗಾಗಲೇ ತಮಿಳುನಾಡಿನತ್ತ ಸಾಗಿದೆ. ನಮ್ಮ ನಾಲೆಗಳಿಗೆ ಯಾವಾಗ ನೀರು ಬಿಡುವುದು ಎಂಬ ಪ್ರಶ್ನೆಗೆ ಉತ್ತರಿಸಿದ ನೀರಾವರಿ ಅಧಿಕಾರಿಗಳು, ಆಗಸ್ಟ್ ಮೊದಲ ವಾರದಲ್ಲಿ ನಾಲೆಗಳಿಗೆ ನೀರು ಬಿಡಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.