ಕಿಚ್ಚ ಸುದೀಪ್ ಟ್ವೀಟ್ಗೆ ಬೆರಗಾದ ಅಭಿಮಾನಿಗಳು!
Team Udayavani, Jul 9, 2020, 8:45 AM IST
ಕಿಚ್ಚ ಸುದೀಪ್ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ತಮ್ಮ ಚಿತ್ರಗಳು ಹಾಗೂ ಲೈಫ್ಸ್ಟೈಲ್ನ ಬಗ್ಗೆ ಅಭಿಮಾನಿಗಳ ಬಳಿ ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೇ ನಟ ನಟಿಯರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿರುತ್ತಾರೆ. ಈ ನಡುವೆ ಇತ್ತಿಚೆಗಷ್ಟೇ ಸುದೀಪ್ ಟ್ವೀಟರ್ನಲ್ಲಿ ಪೋಟೋವೊಂದನ್ನು ಪೋಸ್ಟ್ ಮಾಡಿದ್ದು, ಅದನ್ನು ನೋಡಿದವರು ಒಂದು ಕ್ಷಣ ಬೆರಗಾಗಿದ್ದಾರೆ.
ಫೋಟೋದಲ್ಲಿ ಸುದೀಪ್ ಜೊತೆ ಇರುವ ಈ ಸುಂದರ ಬಾಲಕ ಯಾರು ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಫೋಟೋದಲ್ಲಿ ಇರುವ ಹುಡುಗ ಬೇರೆ ಯಾರೂ ಅಲ್ಲ.. ಅದು ಸುದೀಪ್ರದ್ದೇ. ಹೌದು! ಕಿಚ್ಚ ಸುದೀಪ್ ಹುಡುಗರಾಗಿದ್ದಾಗಿನ ಫೋಟೋವನ್ನು ಅಭಿಮಾನಿಯೊಬ್ಬ ತನ್ನ ಕಲ್ಪನೆಯಂತೆ ಎಡಿಟ್ ಮಾಡಿದ್ದಾನೆ. ಈ ಫೋಟೋದಲ್ಲಿ ಸುದೀಪ್ ತಾವು ಸಣ್ಣವರಾಗಿದ್ದಾಗಿನ ಅವರದೇ ಹೆಗಲ ಮೇಲೆಯೇ ಕೈ ಹಾಕಿದ್ದಾರೆ ಅಲ್ಲದೇ ಆ ಬಾಲಕ ಸುದೀಪ್ ಕೈಯಲ್ಲಿ ಒಂದು ಫೋಟೋ ಫ್ರೇಮ್ ಇದ್ದು, ಅದರಲ್ಲೂ ಕೂಡಾ ಇದೇ ಮಾದರಿ ಫೋಟೋ ಇದೆ. ಈ ಎಡಿಟಿಂಗ್ಗೆ ಸ್ವತಃ ಸುದೀಪ್ ಕೂಡ ಫಿದಾ ಆಗಿ ಯಾರೋ ಒಬ್ಬರು ಇದನ್ನು ಮಾಡಿದ್ದಾರೆ. ವಾವ್ ಎಂಥ ಅದ್ಭುತವಾಗಿದೆ.. ಯಾರು ಇದನ್ನು ಮಾಡಿದ್ದಾರೋ ಅವರಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
Someone made this..
Jus wowwwwww…
Whoever it isssss,,,,,
Thank uuuuuu.
?? pic.twitter.com/1gdDp1Sr2b— Kichcha Sudeepa (@KicchaSudeep) July 7, 2020
ಇನ್ನು ಸ್ಯಾಂಡಲ್ವುಡ್ನ ಬಾದ್ಶಾ, ಕಿಚ್ಚ ಸುದೀಪ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದು, ಅವರ ಅಭಿನಯದ “ಕೋಟಿಗೊಬ್ಬ 3ʼ ತೆರೆಗೆ ಬರಲು ಸಿದ್ಧವಾಗಿದೆ. “ರಂಗಿತರಂಗ’ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ “ಫ್ಯಾಂಟಮ್ʼ ಚಿತ್ರದಲ್ಲಿಯೂ ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
Darshan; ಭರ್ಜರಿ ಓಪನಿಂಗ್ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್ ಚಿತ್ರದಲ್ಲಿ ದರ್ಶನ್ ಹವಾ
Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಆದ ಹನುಮಂತು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.