ಮದುವೆ ರದ್ದತಿ ವಿರುದ್ಧ ವಧುಗಳ ಆಕ್ರೋಶ
Team Udayavani, Jul 9, 2020, 12:32 PM IST
ಲಾಕ್‌ಡೌನ್ ಹಿಂತೆಗೆದು ಮದುವೆ ಕಾರ್ಯಕ್ರಮಕ್ಕೆ ಅನುಮತಿ ನೀಡಲು ವಧುಗಳು ಆಗ್ರಹಿಸಿದರು
ರೋಮ್: ವಿದೇಶಗಳಲ್ಲಿ ಸೋಂಕು ನಿಯಂತ್ರಣಕ್ಕಾಗಿ ಜಾರಿ ಮಾಡಿದ ಲಾಕ್‌ಡೌನ್ ನಿಯಮಗಳಿಂದ ಜೀವನೋಪಾಯಕ್ಕಾಗಿ ಕಷ್ಟಸಾಧ್ಯವಾಗಿದ್ದು, ದೇಶಾದ್ಯಂತ ಜಾರಿ ಇರುವ ಲಾಕ್‌ಡೌನ್ ನಿಯಮಗಳನ್ನು ಹಿಂತೆಗೆದುಕೊಳ್ಳುವಂತೆ ಪ್ರತಿಭಟನೆ ನಡೆದಿವೆ. ಆದರೆ ದೂರಾದ ಇಟಲಿಯ ರೋಮ್ ರಾಜ್ಯದಲ್ಲಿ ಸರಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆದಿದ್ದು, ಅಲ್ಲಿನ ವಧುಗಳು ಲಾಕ್‌ಡೌನ್ ನಿರ್ಬಂಧ ವಿರುದ್ಧ ಹುಸಿಮುನಿಸು ತೋರಿಸಿದ್ದಾರೆ.
ಮದುವೆ ಕಾರ್ಯಕ್ರಮಗಳ ಆಯೋಜನೆಗೆ ಅನುಮತಿ ಕೊಡದ ಕಾರಣಕ್ಕೆ ಕೋಪಗೊಂಡ ಮಹಿಳೆಯರು ಗುಂಪುಗಟ್ಟಿ ಅದ್ದೂರಿ ವಿವಾಹದ ಉಡುಗೆ ಧರಿಸಿ, ದೇಶದಲ್ಲಿ ಜಾರಿ ಇರುವ ಲಾಕ್‌ಡೌನ್ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸೋಂಕು ಹರಡುವುದನ್ನು ತಡೆಗಟ್ಟಲು ಇಟಲಿಯಲ್ಲಿ ಎರಡು ತಿಂಗಳು ವಿವಾಹ ಮಹೋತ್ಸವ ಸೇರಿದಂತೆ ಅನಗತ್ಯ ವ್ಯವಹಾರಗಳು ಮತ್ತು ಚಟುವಟಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಅತಿಥಿಗಳ ಸಂಖ್ಯೆಯನ್ನು ಕೇವಲ ಇಬ್ಬರಿಗೆ ಸೀಮಿತಗೊಳಿಸಲಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 15ಮಂದಿ ಮಹಿಳೆಯರು ಬಿಳಿ ಮಾಸ್ಕ್ ಮತ್ತು ಬಿಳಿ ನಿಲುವಂಗಿಗಳನ್ನು (ಗೌನ್) ಧರಿಸಿ, ಕೈಯಲ್ಲಿ ಪ್ರತಿಭಟನೆ ಫಲಕಗಳನ್ನು ಹಿಡಿದು ಟ್ರೆವಿ ಕಾರಂಜಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಇಟಲಿಯ ವಿವಾಹ ಸಂಘಟನೆ ಅವಿವಾಹಿತರ ಹಠಾತ್ ಪ್ರತಿಭಟನೆ ಎಂಬ ಹೆಸರಿನಲ್ಲಿ ಈ ಪ್ರತಿಭಟನೆಯನ್ನು ಆಯೋಜಿಸಿದ್ದು,. “ನಿರ್ಬಂಧಗಳಿಲ್ಲದ ವಿವಾಹಗಳು’, “ನೀವು ನಮ್ಮ ಮದುವೆಗಳನ್ನು ಮುರಿದಿದ್ದೀರಿ’, “ಮದುವೆಗಳಿಗೆ ಚರ್ಚ್ ಬಾಗಿಲುಗಳನ್ನು ಮುಚ್ಚಲಾಗಿದೆ’ ಎಂಬ ಸಂದೇಶಗಳಿರುವ ಫಲಕಗಳನ್ನು ಹಿಡಿದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.