ಕಾಣಿಯೂರು ಶ್ರೀಗಳಿಂದ ಗೋಮಾತೆಗೆ ಅಭಿವಾದನ
Team Udayavani, Jul 10, 2020, 6:17 AM IST
ಉಡುಪಿ: ಸನ್ಯಾಸಿಗಳು ದೇವರು, ತಾಯಿ, ಗುರು ಹಾಗೂ ಗೋವು ಹೊರತು ಇತರರಿಗೆ ನಮಸ್ಕರಿಸುವ ಪದ್ಧತಿಯಿಲ್ಲ. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮಠದ ಹಸುವಿಗೆ ಗೋಗ್ರಾಸ ನೀಡಿ ಸಾಷ್ಟಾಂಗ ನಮಸ್ಕರಿಸಿದ್ದರು. ಇದನ್ನು ಸುಧೀರ್ ಭಟ್ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಜಾಲತಾಣಗಳ ಧಾರ್ಮಿಕ ಗ್ರೂಪ್ ಗಳಲ್ಲಿ ವೈರಲ್ ಆಗಿದೆ.
ಮಠದ ಪಟ್ಟದ ದೇವರಾದ ಯೋಗನೃಸಿಂಹ ಮತ್ತು ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿದ ಅನಂತರ ಗೋಪೂಜೆ ಮಾಡಿ ಗೋವಿನ ಕಾಲಿಗೆರಗಿ ಸಾಷ್ಟಾಂಗ ನಮಸ್ಕಾರ ಮಾಡುವುದು ಶ್ರೀಪಾದರ ನಿತ್ಯ ದಿನಚರಿ. ಗೋವಿನ ಬಗ್ಗೆ ಅದಮ್ಯ ಪ್ರೀತಿ ಹೊಂದಿರುವ ಶ್ರೀಪಾದರು ಮಠದ ಗೋಶಾಲೆಯಲ್ಲಿ ಸಾಹಿವಾಲ್, ಗೀರ್, ಓಂಗೋರ್, ಹಳ್ಳಿಕಾರ್, ಮಲೆನಾಡು ಗಿಡ್ಡ ಮೊದಲಾದ ದೇಸಿ ತಳಿಯ ಗೋವುಗಳನ್ನು ಪೋಷಿಸುತ್ತಿದ್ದಾರೆ. ಹಿಂದಿನ ಕೃಷ್ಣ ಪೂಜಾ ಪರ್ಯಾಯ ಅವಧಿಯಲ್ಲಿ ದೇಸಿ ಗೋವುಗಳ ಸಂರಕ್ಷಣೆ, ಸಂವರ್ಧನೆ ಧ್ಯೇಯವಾಗಿರಿಸಿಕೊಂಡು ಕೃಷ್ಣಮಠದಲ್ಲಿ ಪ್ರಥಮ ಗೋ ಸಮ್ಮೇಳನವನ್ನೂ ಆಯೋಜಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.