ಬೆಂಗಳೂರಿಗೆ ಸಂಚರಿಸಲು ಬಸ್‌ಗಳ ಹಿಂದೇಟು

ಕೋವಿಡ್‌ ಭೀತಿ - ಪ್ರಯಾಣಿಕರ ಸಂಖ್ಯೆ ಇಳಿಮುಖ

Team Udayavani, Jul 10, 2020, 5:50 AM IST

ಬೆಂಗಳೂರಿಗೆ ಸಂಚರಿಸಲು ಬಸ್‌ಗಳ ಹಿಂದೇಟು

ಸಾಂದರ್ಭಿಕ ಚಿತ್ರ

ಕುಂದಾಪುರ: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರುತ್ತಿದ್ದು, ಇದರಿಂದ ಕರಾವಳಿಯಿಂದ ಬೆಂಗಳೂರಿಗೆ ಸಂಚರಿಸಲು ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಹಿಂದೇಟು ಹಾಕುತ್ತಿದೆ. ಸರಕಾರಿ ಬಸ್‌ಗಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಇಳಿಮುಖಗೊಂಡಿದೆ.

ಲಾಕ್‌ಡೌನ್‌ಗಿಂತ ಮೊದಲು ಕುಂದಾಪುರ, ಬೈಂದೂರು ಕಡೆಯಿಂದ 50-60 ಖಾಸಗಿ ಬಸ್‌ಗಳು ಪ್ರತಿ ನಿತ್ಯ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದವು. ಲಾಕ್‌ಡೌನ್‌ ಸಡಿಲಿಕೆ ಆದ ಆರಂಭದಲ್ಲಿ 10-12 ಖಾಸಗಿ ಬಸ್‌ಗಳು ಆದರೆ ಈಗ ದಿನಕ್ಕೆ 4-5 ಬಸ್‌ಗಳಷ್ಟೇ ಸಂಚರಿಸುತ್ತಿದೆ. ಇದು ಕುಂದಾಪುರ ಮಾತ್ರವಲ್ಲ ಉಡುಪಿ, ಕಾರ್ಕಳ, ಮಂಗಳೂರಿನಿಂದ ಹೊರಡುವ ಬಸ್‌ಗಳ ಸ್ಥಿತಿಯೂ ಬಹುತೇಕ ಹೀಗೆ ಇದೆ. ಕೆಲ ಸಂಸ್ಥೆಗಳು ಸಂಪೂರ್ಣ ಸ್ಥಗಿತಗೊಳಿಸಿದ್ದರೆ, ಮತ್ತೆ ಕೆಲವು ಸಂಸೆ§ಗಳ ಒಂದೆರಡು ಬಸ್‌ಗಳಷ್ಟೇ ಸಂಚರಿಸುತ್ತಿದೆ. ಮತ್ತೆ ಕೆಲವು ಇದುವರೆಗೂ ಸಂಚಾರವನ್ನೇ ಆರಂಭಿಸಿಲ್ಲ.

ಕೆಎಸ್‌ಆರ್‌ಟಿಸಿಯೂ ಇಳಿಕೆ
ಖಾಸಗಿ ಮಾತ್ರವಲ್ಲ ಬೆಂಗಳೂರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆಯೂ ಕಡಿಮೆಯಾಗಿದೆ. ಮೊದಲು ಕುಂದಾಪುರದಿಂದ ರಾಜಧಾನಿಗೆ ನಿತ್ಯ ರಾತ್ರಿ 10 ಬಸ್‌ಗಳು ಸಂಚರಿಸುತ್ತಿದ್ದವು. ಲಾಕ್‌ಡೌನ್‌ ಸಡಿಲಿಕೆಯಾದ ಅನಂತರ 5 -6 ಬಸ್‌ ಸಂಚರಿಸುತ್ತಿದ್ದರೆ ಈಗ ಕೇವಲ 3 ಬಸ್‌ಗಳು ಮಾತ್ರ ಸಂಚರಿಸುತ್ತಿವೆ.

ಯಾಕೆ?
ಬೆಂಗಳೂರಿನಲ್ಲಿ ಕೋವಿಡ್‌ ಜಾಸ್ತಿಯಾಗುತ್ತಿದ್ದು, ಇದರಿಂದ ಅಲ್ಲಿಗೆ ಹೋಗಲು ಚಾಲಕ – ನಿರ್ವಾಹಕರು ಹಿಂದೇಟು ಹಾಕ ು ತ್ತಿ ದ್ದಾರೆ. ಹೋದರೂ ಅಲ್ಲಿ ಊಟ, ತಿಂಡಿಗೆಲ್ಲ ಸರಿಯಾದ ವ್ಯವಸ್ಥೆ ಇರುವುದಿಲ್ಲ ಎನ್ನುವ ಅಳಲು ಇವರದ್ದಾಗಿದೆ. ಇದ ಲ್ಲದೆ ಲಾಕ್‌ಡೌನ್‌ ಸಡಿಲಿಕೆಯಾದ ಆರಂಭ ದಲ್ಲಿ ಕುಂದಾಪುರ, ಬೈಂದೂರು, ಉಡುಪಿ, ಮಂಗಳೂರು ಕಡೆ ಯಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾ ಣಿಕರ ಸಂಖ್ಯೆ ಜಾಸ್ತಿಯಾಗಿತ್ತು. ಆದರೆ ಈಗ ಇಲ್ಲಿಂದ ಆ ಕಡೆಗೆ ತೆರಳುವವರ ಸಂಖ್ಯೆ ಇಳಿಮುಖಗೊಂಡಿದೆ.

ಬರುವ ಬಸ್‌ಗೆ ಬೇಡಿಕೆ
ಕೋವಿಡ್ ‌ಭೀತಿಯಿಂದಾಗಿ ಬೆಂಗಳೂರಿ ನಲ್ಲಿರುವವರು ಬಹುತೇಕ ಮಂದಿ ಊರಿಗೆ ತೆರಳುತ್ತಿದ್ದು, ಹಾಗಾಗಿ ಅಲ್ಲಿಂದ ಕರಾವಳಿ ಕಡೆಗೆ ಬರುವ ಬಸ್‌ಗಳಲ್ಲಿ ಬೇಡಿಕೆಯಿದೆ. ಆನ್‌ಲೈನ್‌ ಬುಕ್ಕಿಂಗ್‌ನಲ್ಲಿಯೇ ಟಿಕೇಟುಗಳು ಬಹುತೇಕ ಖಾಲಿಯಾಗುತ್ತವೆ.

ನಷ್ಟದ ಸಂಚಾರ
ಈಗ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಇಳಿಮುಖಗೊಂಡಿದ್ದು, ಇದರಿಂದ ಬಹುತೇಕ ಬಸ್‌ಗಳು ನಷ್ಟದಲ್ಲಿಯೇ ಸಂಚರಿಸುತ್ತಿವೆ. ಒಂದು ಬಸ್‌ಗೆ ಕುಂದಾಪುರದಿಂದ ಬೆಂಗಳೂರಿಗೆ ಹೋಗಿ ಬರಲು ಕನಿಷ್ಠ 16 ಸಾವಿರ ರೂ. ಖರ್ಚಾಗುತ್ತದೆ. ಬೆರಳೆಣಿಕೆಯ ಪ್ರಯಾಣಿಕರಿದ್ದರೆ ಹೇಗೆ ಹೋಗುವುದು ಎಂದು ಪ್ರಶ್ನಿಸುತ್ತಾರೆ ಖಾಸಗಿ ಬಸ್‌ನ ಮಾಲಕರೊಬ್ಬರು.

8 ಬಸ್‌ ಕೆಎಸ್‌ಆರ್‌ಟಿಸಿ ಬಸ್‌
ಕೋವಿಡ್‌ಗಿಂತ ಮುಂಚೆ ಉಡುಪಿ, ಕುಂದಾಪುರ ಭಾಗದಿಂದ ದಿನಕ್ಕೆ 40 ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಂಗಳೂರಿಗೆ ಸಂಚರಿಸುತ್ತಿದ್ದವು. ಸಡಿಲಿಕೆ ಆದ ಅನಂತರ 25 ಬಸ್‌ಗಳು ಸಂಚಾರವನ್ನು ಆರಂಭಿಸಿದವು. ಆದರೆ ಕಳೆದ ವಾರದಿಂದ ಕೋವಿಡ್‌ ಜಾಸ್ತಿಯಾಗುತ್ತಿದ್ದು, ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿದೆ. ಇದರಿಂದ ಪ್ರಸ್ತುತ 7-8 ಬಸ್‌ಗಳಷ್ಟೇ ಸಂಚರಿಸುತ್ತಿವೆ.
-ಉದಯ ಕುಮಾರ್‌ ಶೆಟ್ಟಿ, ,
ಘಟಕ ವ್ಯವಸ್ಥಾಪಕರು ಉಡುಪಿ ವಿಭಾಗ, ಕೆಎಸ್‌ಆರ್‌ಟಿಸಿ

ಸೀಮಿತ ಬಸ್‌ ಸಂಚಾರ
ನಾವು ಜನರ ಪ್ರಯೋಜನಕ್ಕಾಗಿ ಲಾಕ್‌ಡೌನ್‌ ಸಡಿಲಿಕೆಯಾದಾಗ ಬಸ್‌ ಸಂಚಾರ ಆರಂಭಿಸಿದ್ದೆವು. ಆದರೆ ಜನರೇ ಸಂಚರಿಸಲು ಹಿಂದೇಟು ಹಾಕುತ್ತಿರುವುದರಿಂದ, ಕೆಲ ಬಸ್‌ಗಳು ನಷ್ಟದಲ್ಲಿಯೇ ಸಂಚರಿಸಬೇಕಾಗುವುದರಿಂದ ಕೆಲವು ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದೇವೆ. ಆದರೆ ಸಂಪೂರ್ಣ ಬಸ್‌ ಸಂಚಾರ ಸ್ಥಗಿತ ಮಾಡಿಲ್ಲ. ಸೀಮಿತ ಸಂಖ್ಯೆ ಬಸ್‌ಗಳು ಪ್ರತಿ ನಿತ್ಯ ಸಂಚರಿಸುತ್ತವೆ.
-ಅನಿಲ್‌ ಚಾತ್ರ,
ಮಾಲಕರು ಶ್ರೀ ದುರ್ಗಾಂಬಾ ಬಸ್‌, ಕುಂದಾಪುರ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.