O2 ಎಂಬ ಮೆಡಿಕಲ್ ಥ್ರಿಲ್ಲರ್ ಚಿತ್ರ
Team Udayavani, Jul 10, 2020, 4:49 AM IST
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಡೆತನದ ಪಿ. ಆರ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈಗಾಗಲೇ “ಕವಲುದಾರಿ’, “ಮಾಯಾಬಜಾರ್’ ಚಿತ್ರಗಳು ತೆರೆಕಂಡು ಪ್ರೇಕ್ಷಕರನ್ನು ರಂಜಿಸಿದ್ದವರು. ಸದ್ಯ ಪುನೀತ್ ರಾಜಕುಮಾರ್ ಬ್ಯಾನರ್‌ನಲ್ಲಿ “ಲಾ’ ಮತ್ತು “ಫ್ರೆಂಚ್ ಬಿರಿಯಾನಿ’ ಚಿತ್ರಗಳು ಕೂಡ ತೆರೆಗೆ ಬರೋದಕ್ಕೆ ರೆಡಿಯಾಗಿವೆ. ಇದರ ನಡುವೆ ಪಿಆರ್‌ಕೆ ಪ್ರೊಡಕ್ಷನ್ಸ್ ಈಗ ಮೆಡಿಕಲ್ ಥ್ರಿಲ್ಲರ್ ಕಥಾಹಂದರದ ಚಿತ್ರವೊಂದನ್ನು ತೆರೆಗೆ ತರುವ ತಯಾರಿಯಲ್ಲಿದೆ.
ಈಗಾಗಲೇ ಚಿತ್ರಕ್ಕೆ “02′ ಎಂದು ಹೆಸರಿಡಲಾಗಿದ್ದು, “ಮಾಯಾ ಬಜಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಾಕೃಷ್ಣ ರೆಡ್ಡಿ, ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಪಿಆರ್‌ಕೆ ಪ್ರೊಡಕ್ಷನ್ ಜೊತೆಗೆ ಕೈ ಜೋಡಿಸಲಿದ್ದಾರೆ. ಇನ್ನು ಪ್ರಶಾಂತ್ ರಾಜ್ ಮತ್ತು ರಾಘವ್ ಎಂಬ ನವ ನಿರ್ದೇಶಕರೂ ಈ ತಂಡದಲ್ಲಿದ್ದು, ಇದರಲ್ಲಿ ರಾಘವ್ ಟ್ಯಾಟೂ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾತನಾಡುವ ರಾಧಾಕೃಷ್ಣ ರೆಡ್ಡಿ, ಇಬ್ಬರು ಯುವ ನಿರ್ದೇಶಕರ ಪರಿಶ್ರಮದಿಂದ ಈ ಸಿನಿಮಾ ಸಿದಟಛಿವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್ ತಯಾರಿ ನಡೆದಿದೆ. ಕಥೆ ಮತು ಇಷ್ಟವಾಗಿದ್ದು, ತೆರೆಗೆ ತರುವುದಕ್ಕೆ ಅನುಕೂಲವಾಗಿದೆ ಎಂದು ನನಗೆ ಅನಿಸಿದ್ದರಿಂದ, ನಾನು ಯೋಜನೆಯ ಭಾಗವಾಗಲು ನಿರ್ಧರಿಸಿದೆ. ನನ್ನ ಆಲೋಚನೆಯನ್ನು ಪುನೀತ್ ರಾಜ ಕುಮಾರ್ ಅವರೊಂದಿಗೆ ಹಂಚಿಕೊಂಡೆ’ ಎಂದು ವಿವರಿಸುತ್ತಾರೆ.
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ರಾಧಾಕೃಷ್ಣ ರೆಡ್ಡಿ, “ಇದೊಂದು ಮೆಡಿಕಲ್ ಹಿನ್ನೆಲೆಯ ಕಥೆಯಾಗಿರುವ ಕಾರಣ ಅಪ ರೂಪದ ವಿಷಯ ಇದರಲ್ಲಿದೆ. ಈಗಾಗಲೇ ಸ್ಕ್ರಿಪ್ಟ್ ಅನ್ನು ರಾಜ್ ಬಿ ಶೆಟ್ಟಿ ಸೇರಿ ಒಂದೆರಡು ನಿರ್ದೇಶಕರಿಗೆ ಪರಿಚಯಿಸಿ ದ್ದೇವೆ. ಲಾಕ್‌ಡೌನ್ ವೇಳೆ ಆನ್‌ಲೈನ್‌ನಲ್ಲಿ ನಡೆದ ಆಡಿಷನ್ ಪೂರ್ಣಗೊಳಿಸ ಲಾಗಿದೆ. ಈ ಸಿನಿಮಾದ ಭಾಗವಾಗಲು ಸಾಕಷ್ಟು ಯುವಕರು ಆಸಕ್ತಿ ಹೊಂದಿದ್ದಾರೆ.
ನಮ್ಮ ತಂಡವು ಕೆಲವು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದರೂ ಫೈನಲ್ ರೌಂಡ್ ಆಡಿಷನ್ ಮುಗಿದ ನಂತರ ಅಂತಿಮ ತೀರ್ಮಾನಕ್ಕೆ ಬರುವುದಾಗಿ’ ಹೇಳಿದ್ದಾರೆ. ಒಟ್ಟಾರೆ ಈ ಹೊಸಚಿತ್ರದ ಕೆಲಸಗಳಿಗೆ ತೆರೆಮರೆಯಲ್ಲಿ ಚಾಲನೆ ಸಿಕ್ಕಿದ್ದು, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.