ಲಿಂಗಸುಗೂರು: 30 ಗ್ರಾಪಂಗೆ ಆಡಳಿತಾಧಿಕಾರಿಗಳ ನೇಮಕ
Team Udayavani, Jul 10, 2020, 10:13 AM IST
ಲಿಂಗಸುಗೂರು: ತಾಲೂಕಿನ 30 ಗ್ರಾಪಂಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಕಗೊಳಿಸಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಆದೇಶ ಹೊರಡಿಸಿದ್ದಾರೆ.
2015ನೇ ಸಾಲಿನಲ್ಲಿ ನಡೆದ ಗ್ರಾಪಂ ಸಾರ್ವತಿಕ ಚುನಾವಣೆ ಬಳಿಕ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಕ್ತಾಯವಾಗುತ್ತಿದೆ. ಕೋವಿಡ್ ವೈರಸ್‌ನಿಂದಾಗಿ ಚುನಾವಣೆ ಆಯೋಗ ಈ ಭಾರಿ ಗ್ರಾಪಂ ಚುನಾವಣೆಯನ್ನು ತಾತ್ಕಲಿಕವಾಗಿ ಮುಂದೂಡಿದ್ದರಿಂದ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನೀರಲಕೇರಾ, ದೇವರಭೂಪುರ, ಗೆಜ್ಜಲಗಟ್ಟಾ, ಕೋಠಾ, ಈಚನಾಳ ಗ್ರಾಪಂಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ರೋಡಲಬಂಡಾ(ತ), ಆನ್ವರಿ ಗ್ರಾಪಂಗೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ನಾಗರಹಾಳ, ಹಲ್ಕಾವಟಗಿ ಗ್ರಾಪಂಗೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು, ಗುಂತಗೋಳ, ನಾಗಲಾಪುರ ಗ್ರಾಪಂಗೆ ಸಹಾಯಕ ಕೃಷಿ ನಿರ್ದೇಶಕರು, ಗೌಡೂರು ಮತ್ತು ಹೂನೂರು ಗ್ರಾಪಂಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ನರಕಲದಿನ್ನಿ ಮತ್ತು ಆನಾಹೊಸೂರು ಗ್ರಾಪಂಗೆ ಕೆಬಿಜೆಎನ್‌ಎಲ್ ಎಸ್ ಎಲ್‌ಬಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ, ಸರ್ಜಾಪುರ ಮತ್ತು ಬನ್ನಿಗೋಳ ಗ್ರಾಪಂಗೆ ಕೆಬಿಜೆಎನ್ ಎಲ್ ರೋಡಲಬಂಡಾ ಕ್ಯಾಂಪ್ ಎಇಇ, ಮಾವಿನಭಾವಿ ಮತ್ತು ಕಾಚಾಪುರ ಗ್ರಾಪಂಗೆ ಆರ್‌ಡಬ್ಲೂಎಸ್ ಎಇಇಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara ಉಪ ಅರಣ್ಯ ಸಂಕ್ಷಣಾಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ;ರತ್ನಾಕರ ಹೊನಗೋಡು ಎಚ್ಚರಿಕೆ
Uppunda ಜಾತ್ರೆ ಸಂಪನ್ನ: ಓಕುಳಿಯಾಟ, ತೆಪ್ಪೋತ್ಸವ
Ajekar: ಎಣ್ಣೆಹೊಳೆ ಏತ ನೀರಾವರಿ ಪವರ್ ಕಟ್!
Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.