ಉದ್ದೇಶ-ಸಂಕಲ್ಪ ಯಶಸ್ವಿ ಜೀವನದ ಮೂಲ ತತ್ತ್ವ
Team Udayavani, Jul 10, 2020, 11:30 AM IST
ಜೀವನದ ಅರ್ಥವೇನು? ಜೀವನದ ನಿಜ ಶ್ರೀಮಂತಿಕೆ ಯಾವುದು? ಇವು ಮಾನವ ತನ್ನ ಆರಂಭ ಕಾಲದಿಂದಲೂ ತನ್ನನ್ನು ತಾನೇ ಕೇಳಿಕೊಂಡ ಕುತೂಹ ಲಕಾರಿ ಪ್ರಶ್ನೆಗಳು. ಅನೇಕ ಮಹಾಪುರುಷರು ಜೀವನ ದಲ್ಲಿ ಮನುಷ್ಯನ ಉದ್ದೇಶಕ್ಕೆ ಸಂಬಂಧಿಸಿದಂತೆ ತಾತ್ತ್ವಿಕ ದೃಷ್ಟಿಕೋನದಿಂದ ಉತ್ತರ ನೀಡಿ ಪ್ರೇರೇಪಿಸಿದ್ದಾರೆ. ನಾವು ಯಾಕಾಗಿ ಹುಟ್ಟಿದ್ದೇವೆ? ಹುಟ್ಟಿನ ಉದ್ದೇಶವೇನು? ಕೇವಲ ನಮಗಾಗಿ ಮತ್ತು ನಮ್ಮ ಪ್ರೀತಿ ಪಾತ್ರರಿಗೆ ಹೇಗೆ ನೆರವಾಗಬಹುದು? ಸಾರ್ಥಕ ಜೀವನಕ್ಕೆ ನಾವು ಕಂಡುಕೊಳ್ಳಬೇಕಾದ ಮಾರ್ಗವೇನು ಎಂಬುದರ ಬಗ್ಗೆ ನಾವು ಆಲೋಚಿಸುತ್ತಿರುತ್ತೇವೆ.
ಈ ಹಿನ್ನೆಲೆಯಲ್ಲಿ ಮನುಷ್ಯನು ನಿಸ್ಸಂದೇಹವಾಗಿ ಸಾಧನೆ ಮಾಡಲೆಂದೇ ಜನಿಸಿದ್ದಾನೆ ಎಂಬುದನ್ನು ನಾವು ಅರಿಯಬೇಕಿದೆ. ಯಶಸ್ಸು ಎನ್ನುವುದು ಹಾಗೆಯೇ ಅಥವಾ ಅನುವಂಶಿಕವಾಗಿ ಸಿದ್ಧಿಸುವುದಲ್ಲ. ಅದಕ್ಕೆ ಬೇಕಾದ ತಯಾರಿ, ಸತತ ಪ್ರಯತ್ನ, ಸ್ವ -ಸಾಮರ್ಥ್ಯ, ದೃಢ ಸಂಕಲ್ಪ ಮುಖ್ಯ. ಇದಕ್ಕೆ ನಾವು ಹಲವಾರು ಉದಾಹರಣೆಗಳ ಸಹಿತ ವಿವರಿಸಬಹುದು. ಇವರಲ್ಲಿ ಹಲವಾರು ಕೊರತೆಗಳು ಇದ್ದರೂ ಕೂಡ ಅವುಗಳನ್ನು ಮೆಟ್ಟಿನಿಂತು ಜಗತ್ತಿಗೆ ಮನುಷ್ಯನ ಉದ್ದೇಶವೇನು ಎಂದು ಸಾರಿ ದ್ದಾರೆ? ಅವರಲ್ಲಿ ವಿಶೇಷವಾಗಿ ತನ್ನ ಎರಡನೇ ವಯಸ್ಸಿಗೆ ಕುರುಡ ಹಾಗೂ ಕಿವುಡಳಾಗಿದ್ದ ಹೆಲೆನ್ ಕೆಲರ್ ತಮ್ಮ ಕೊರತೆಗಳನ್ನು ಮೀರಿ ಹಲವು ಮಹತ್ವದ ಪುಸ್ತಕಗಳನ್ನು ಬರೆದರು. ಯಶಸ್ವಿ ಅಧ್ಯಾಪಕಿ ಯಾಗಿ ಶಿಷ್ಯರನ್ನು ಜಗತ್ತಿಗೆ ನೀಡಿದರು.
ವಿಲ್ಮಾ ರುಡಾಲ್ಫ್ ಎಂಬಾಕೆ ನಾಲ್ಕನೇ ವಯಸ್ಸಿನಲ್ಲಿ ನ್ಯುಮೋನಿಯ ಕಾಯಿಲೆಯಿಂದಾಗಿ ಎಡಗಾಲನ್ನು ಕಳೆದುಕೊಳ್ಳುತ್ತಾಳೆ. ಮುಂದೆ 7ನೇ ವಯಸ್ಸಿಗೆ ನಡೆಯುವುದನ್ನು ಕಲಿತು 1960ರ ಒಲಿಂಪಿಕ್ಸ್‌ನಲ್ಲಿ ಮೂರು ಬಂಗಾರ ಪದಕಗಳನ್ನು ಗೆದ್ದು ಜಗತ್ತನ್ನು ನಿಬ್ಬೆರಗಾಗಿಸಿದ್ದಳು. ಸಾಮಾನ್ಯ ಅಬ್ರಾಹಂ ಲಿಂಕನ್ ಅಮೆರಿಕ ಅಧ್ಯಕ್ಷರಾದರು, ಹುಟ್ಟು ಕುರುಡನಾಗಿದ್ದ ಸ್ಟೀವ್ ವಂಡರ್ ಜಗತ್ತಿನ ಅತ್ಯುನ್ನತ ಸಂಗೀತ ನಿರ್ದೇಶಕನಾದ. ಇವರೆಲ್ಲ ತಮ್ಮಲ್ಲಿರುವ ಇತಿಮಿತಿಗಳು, ಅಡೆತಡೆಗಳನ್ನು ಮೀರಿ ಸಾಧಕರಾಗಿದ್ದಾರೆ.
ಉದ್ದೇಶ ಮತ್ತು ಸಂಕಲ್ಪ. ಇವೆರಡು ನಮ್ಮಲ್ಲಿದ್ದರೆ ಸುಲಭವಾಗಿ ಸಾಧನೆಗೈಯಬಹುದು.ಸ್ಫೂರ್ತಿ ಎಂಬುವುದು ಹರಿಯುವ ನೀರಿನಂತೆ. ಅಂತೆಯೇ ಹರಿಯುವ ನೀರು ಕೂಡ ನಮಗೆ ಯಾವುದೋ ಒಂದು ವಿಧದಲ್ಲಿ ಸ್ಫೂರ್ತಿಯಾಗಬಲ್ಲುದು. ಬದಲಾವಣೆಗೆ ಮುನ್ನುಡಿಯಾಗುವುದು. ಜವಾಬ್ದಾರಿಗಳನ್ನು ಸ್ವೀಕರಿಸಿ, ಇತರರಿಗಿಂತ ಭಿನ್ನವಾಗಿ ಕಾರ್ಯ ಮಾಡಿದಾಗ ನಾವು ಯಶಸ್ವಿಯಾಗಬಹುದು. ಉದ್ದೇಶವಿಲ್ಲದ ನಮ್ಮ ಜೀವನ ನಾವಿಕನಿಲ್ಲದ ಹಡಗಿನಂತೆಯೇ ಯಶಸ್ಸಿನ ರಹಸ್ಯ ಸ್ಥಿರವಾದ ಸಂಕಲ್ಪವಾಗಿರುತ್ತದೆ.
ಭ್ರಮರಾಂಬಿಕಾ ದೇವಿ ಕೆ.ಎಂ., ಬಾಪೂಜಿ ಬಿ. ಸ್ಕೂಲ್, ದಾವಣಗೆರೆ (ಎಂಬಿಎ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.