![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 11, 2020, 6:41 AM IST
ತುಮಕೂರು: ನಗರದಲ್ಲಿ ನಿವೇಶನ, ವಸತಿ ಇಲ್ಲದವರಿಗೆ ಸರ್ವರಿಗೂ ಸೂರು ಯೋಜನೆಯಲ್ಲಿ ವಸತಿ ನೀಡಲು ಅಗತ್ಯ ಕ್ರಮಗಳನ್ನು ಕೈಗೊಂಡು ಶೀಘ್ರದಲ್ಲೇ ಸುದ್ದಿ ನೀಡಲಾಗು ವುದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಇಲ್ಲಿಯ ನಗರ ವಂಚಿತ ಯುವ ಜನ ಸಂಪನ್ಮೂಲ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾ ಕೊಳಗೇರಿ ನಿವಾಸಿಗಳ ಸಮಿತಿ ಮತ್ತು ನಮ್ಮ ಮನೆ ಹಕ್ಕು ಹೋರಾಟ ಸಮಿತಿ ಪದಾಧಿಕಾರಿ ಗಳೊಂದಿಗೆ ನಿವೇಶನ, ವಸತಿ ರಹಿತರ ಬೇಡಿಕೆಗಳ ಕುರಿತು ನಡೆದ ಸಭೆಯಲ್ಲಿ ಮಾತ ನಾಡಿ, ನಗರದಲ್ಲಿ ನಡೆದಿರುವ 2018ರ ಬೇಡಿಕೆ ಸಮೀಕ್ಷೆಯನ್ವಯ 22 ಸಾವಿರ ವಸತಿ ರಹಿತರು ಇದ್ದಾರೆ, ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ ವಸತಿ ರಹಿತರು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಭೂಮಿ ಗುರುತಿಸಿ: ನಗರದಲ್ಲಿ 1994ರಲ್ಲಿ ನಿವೇಶನ ಹಂಚಿಕೆ ಮಾಡಿದ್ದು ಬಿಟ್ಟರೆ, ನಂತರ ನಗರದಲ್ಲಿ ಯಾವುದೇ ನಿವೇಶನಗಳ ಹಂಚಿಕೆ ಸಾಧ್ಯವಾಗಿಲ್ಲ, ಹಾಗಾಗಿ ಇಲ್ಲಿಯ ಉಪ ವಿಭಾ ಗಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಸರ್ಕಾರಿ ಭೂಮಿಗಳನ್ನು ಗುರುತಿಸಿ ನೀಡುವಂತೆ ಸೂಚಿಸ ಲಾಗಿದೆ ಭೂಮಿಯನ್ನು ಗುರುತಿಸಿದ ಮೇಲೆ ನಿವೇಶನ, ವಸತಿ ರಹಿತರಿಗೆ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮನೆಗಳ ಮಂಜೂರಾತಿ: ವಸತಿ ಇಲ್ಲದವರೊಂದಿಗೆ ಶಾಸಕರು ಸಮಾಲೋಚನೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾಗ ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ನಗರಕ್ಕೆ ಸೇರಿರುವ ವಿವಿಧ ಕಸಬಾ ಸರ್ವೆ ನಂಬರ್ ಗಳಲ್ಲಿ ಲಭ್ಯವಿರುವ ಸರ್ಕಾರಿ ಭೂ ಮಿಗಳ ವಿವಿರದ ಬಗ್ಗೆ ತಿಳಿಸಿ, ತಮ್ಮ ಅಧಿಕಾರವಧಿ ಯಲ್ಲಿ 5 ಸಾವಿರ ನಿವೇಶನ ರಹಿತರಿಗೆ ಸೈಟು ಮತ್ತು ವಸತಿಗಳಿಲ್ಲದ 10 ಸಾವಿರ ಬಡಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆಗಳ ಮಂಜೂರಾತಿ ಪಡೆಯುವಂತೆ ಕೋರಿದ್ದರು.
ಶೀಘ್ರದಲ್ಲೇ ಸಿಹಿ ಸುದ್ದಿ: ಇದಕ್ಕೆ ಪ್ರತಿಕ್ರಿಯಿಸಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಈ ಸಂಬಂಧ ವಾಗಿ ಈಗಾಗಲೇ ವಸತಿ ಸಚಿವ ವಿ. ಸೋಮಣ್ಣರೊಂದಿಗೆ ಸಮಾಲೋಚಿಸಿದ್ದು ಶೀಘ್ರದಲ್ಲಿ ನಗರದ ವಸತಿ ರಹಿತರಿಗೆ ಸಿಹಿ ಸುದ್ದಿ ನೀಡಲಾಗುವುದು ಎಂದರು.
ಪ್ರತಿಯೊಬ್ಬರಿಗೂ ಸೂರು: ಈ ಹಿಂದೆ ನಡೆಸಿರುವ ಸಮೀಕ್ಷೆಯಲ್ಲಿ ಮತ್ತು ಅರ್ಜಿ ಸಲ್ಲಿಸಿರುವವರಲ್ಲಿ ಮನೆ ಇರುವವರು ಅರ್ಜಿ ಸಲ್ಲಿಸಿರುವ ಗುಮಾನಿ ಇದ್ದು ಪುನರ್ ಸಮೀಕ್ಷೆಗೆ ಸರ್ಕಾರವನ್ನು ಕೋರಲಾಗಿದೆ, ಸೂರು ಇಲ್ಲದ ಪ್ರತಿಯೊಬ್ಬರಿಗೂ ಸೂರು ದೊರಕಬೇಕು ಎನ್ನುವುದೇ ಸರ್ಕಾರದ ಆಶಯ ಎಂದರು. ಜಿಲ್ಲಾ ಕೊಳಗೇರಿ ನಿವಾಸಿಗಳ ಸಂಘದ ಪದಾಧಿಕಾರಿಗಳಾದ ದೀಪಿಕಾ, ಕಣ್ಣನ್, ಅರುಣ್, ಚಕ್ರಪಾಣಿ, ಶಂಕರಯ್ಯ, ಮಂಜಮ್ಮ, ಮೊಹಮ್ಮದ್ ಹಯತ್, ರಂಗನಾಥ್, ರಜಿಯಾಬಿ, ತಿರುಮಲಯ್ಯ, ಗಂಗಮ್ಮ, ಮಾರಿಮುತ್ತು, ಕೃಷ್ಣ, ವಿಶ್ವನಾಥ್ ಉಪಸ್ಥಿತರಿದ್ದರು.
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್; ಓರ್ವ ಆರೋಪಿ ಬಂಧನ
You seem to have an Ad Blocker on.
To continue reading, please turn it off or whitelist Udayavani.