ಸೋಂಕು ಬೆಳವಣಿಗೆ: ರಾಜ್ಯ ಮುಂಚೂಣಿ : ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕಕ್ಕೆ 6ನೇ ಸ್ಥಾನ
Team Udayavani, Jul 11, 2020, 9:44 AM IST
ಬೆಂಗಳೂರು: ದೇಶದಲ್ಲಿ ಕೋವಿಡ್ ವೈರಸ್ ಸೋಂಕಿನ ಬೆಳವಣಿಗೆ ದರದಲ್ಲಿ ರಾಜ್ಯವು ಮುಂಚೂಣಿಯಲ್ಲಿದ್ದು, ಗುಣಮುಖ ಪ್ರಮಾಣದಲ್ಲಿ ಹಿಂದುಳಿದಿದೆ. ಪರಿಣಾಮ ರಾಜ್ಯದಲ್ಲಿ ಸೋಂಕಿನ ಸ್ಫೋಟ ನಿತ್ಯ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.
ಸದ್ಯ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ. ಕಳೆದ ಒಂದು ವಾರದ ಸೋಂಕಿನ ಬೆಳವಣಿಗೆ ದರ ನೋಡಿದಾಗ ಎರಡು ಲಕ್ಷಕ್ಕೂ ಅಧಿಕ ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಶೇ.3ರಷ್ಟಿದೆ. ಅನಂತರ ಸ್ಥಾನಗಳಲ್ಲಿರುವ ತಮಿಳುನಾಡಿನಲ್ಲಿ ಶೇ.4, ದಿಲ್ಲಿಯಲ್ಲಿ ಶೇ.4, ಗುಜರಾತ್ ಶೇ.2 ಹಾಗೂ ಉತ್ತರ ಪ್ರದೇಶ ಶೇ.4 ಇದೆ. ಆದರೆ, ಕರ್ನಾಟಕದಲ್ಲಿಯೇ ಅತಿ ಹೆಚ್ಚು ಶೇ.10ರಷ್ಟಿದೆ. ಇದರಿಂದ ಕಳೆದ ವಾರ ಸಾವಿರ ಗಡಿಯಲ್ಲಿದ್ದ ಸೋಂಕು ಪ್ರಕರಣಗಳು, ನಾಲ್ಕು ದಿನದಿಂದ ಏರಿಕೆ ಹಾದಿಯಲ್ಲಿಯೇ ಸಾಗಿ ಸದ್ಯ 2000ಕ್ಕೂ ಅಧಿಕ ವರದಿಯಾಗುತ್ತಿವೆ.
ಕರ್ನಾಟಕ ಗುಣಮುಖ ದರವೂ ಕಡಿಮೆ ಇದೆ. ಒಟ್ಟಾರೆ 33,418 ಸೋಂಕಿತರ ಪೈಕಿ ಈವರೆಗೂ 13,836 ಮಂದಿ ಮಾತ್ರ ಗುಣ ಮುಖ ರಾಗಿದ್ದಾರೆ. ಇನ್ನೂ19,035 ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಈ ಮೂಲಕ ಗುಣಮುಖ ದರ ಶೇ. 41.4ರಷ್ಟಿದೆ. ಆದರೆ, ಟಾಪ್ ಹತ್ತರಲ್ಲಿರುವ ಯಾವ ರಾಜ್ಯವೂ ಶೇ.50ಕ್ಕೂ ಕಡಿಮೆ ಗುಣಮುಖ ದರವಿಲ್ಲ. ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಶೇ. 22ರಷ್ಟಿದೆ.
ಈ ನಡುವೆ ಶುಕ್ರವಾರ ಮೊದಲ ಬಾರಿ ದಿನದ ಗುಣಮುಖದಾದವರ ಸಂಖ್ಯೆ 1,000 ಗಡಿ ದಾಟಿರುವುದು ಆಶಾದಾಯಕವೆನಿಸಿದೆ. ಕರ್ನಾ ಟಕದಲ್ಲಿ ಸೋಂಕಿತರ ಮರಣದರ ಶೇ. 1.6ರಷ್ಟಿದ್ದು ಅತಿ ಹೆಚ್ಚು ಕೊರೊನಾ ಪೀಡಿತ 10 ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.