ಭಾರಿ ಮಳೆಗೆ ಕೆರೆಯಂತಾದ ಬಸವೇಶ್ವರ ವೃತ್ತ
Team Udayavani, Jul 11, 2020, 11:01 AM IST
ಶಹಾಪುರ: ಶುಕ್ರವಾರ ಸತತ ಒಂದು ಗಂಟೆ ಕಾಲ ಧಾರಕಾರ ಮಳೆ ಸುರಿದ ಪರಿಣಾಮ ನಗರದ ಬಸವೇಶ್ವರ ಸರ್ಕಲ್ ಪ್ರದೇಶ ಸಂಪೂರ್ಣ ನೀರು ಆವರಿಸಿ ಕೆರೆಯಂತಾಗಿದ್ದರಿಂದ ಸಂಚಾರಕ್ಕೆ ಜನರು ತೊಂದರೆ ಅನುಭವಿಸಿದರು.
ಪ್ರತಿ ಬಾರಿ ಮಳೆ ಬಂದಾಗ ಬಸವೇಶ್ವರ ವೃತ್ತದಿಂದ ಮಾರುತಿ ರಸ್ತೆ ನೀರು ತುಂಬಿ ಮುಳುಗುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣವೇ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಎನ್ನಲಾಗಿದೆ. ಮತ್ತೆ ಕೆಲವರು ಚರಂಡಿಯನ್ನೆ ಆಕ್ರಮಿಸಿಕೊಂಡು ಅಂಗಡಿ, ಟೇರ್‌ಕೇಸ್ (ಮೆಟ್ಟಿಲು) ನಿರ್ಮಾಣ ಮಾಡಿಕೊಂಡಿದ್ದಾರೆ. ಇದರಿಂದಾಗಿ ಕಡಿಮೆ ಮಳೆ ಬಂದರೂ ವೃತ್ತ ಜಲಮಯವಾಗುತ್ತದೆ. ಹೀಗಾಗಿ ಜನಪ್ರತಿನಿಧಿ ಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಪರಿಶೀಲಿಸಿ ಸಮರ್ಪಕ ಚರಂಡಿ ಕಾರ್ಯ ಕೈಗೊಳ್ಳಬೇಕು. ಆಕ್ರಮಿತ ಚರಂಡಿ ಜಾಗ ತೆರವುಗೊಳಿಸಿ ವೈಜ್ಞಾನಿಕವಾಗಿ ಚರಂಡಿ ದುರಸ್ತಿ ಕಾರ್ಯ ಮಾಡಬೇಕು ಎಂಧು ಕಲ್ಯಾಣ ಕರ್ನಾಟಕ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಭೀಮಾಶಂಕರ ಕಟ್ಟಿಮನಿ ಆಗ್ರಹಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಧಾರಾಕಾರ ಮಳೆ : ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 4:00ರ ಸುಮಾರಿಗೆ ಆರಂಭವಾದ ಮಳೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆ ವರೆಗೆ ಯಾದಗಿರಿ ವ್ಯಾಪ್ತಿಯಲ್ಲಿ 14 ಮಿಮೀ, ಶಹಾಪುರ ವ್ಯಾಪ್ತಿಯಲ್ಲಿ 8 ಮಿಮೀ, ಹುಣಸಗಿಯಲ್ಲಿ ಮತ್ತು ವಡಗೇರಾದಲ್ಲಿ ತಲಾ 1 ಮಿಮೀ, ಸುರಪುರ 4 ಮಿಮೀ ಹಾಗೂ ಗುರುಮಠಕಲ್ ವ್ಯಾಪ್ತಿಯಲ್ಲಿ ಅತಿ ಹೆಚ್ಚು 15 ಮಿಮೀ ಮಳೆಯಾಗಿದೆ. ಹತ್ತಿಕುಣಿ ಹೋಬಳಿಯಲ್ಲಿ 36 ಮಿಮೀ ಮಳೆ ಸುರಿದಿರುವ ಕುರಿತು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.