ಅರುಣಾಚಲ ಪ್ರದೇಶ; ಅಸ್ಸಾಂ ರೈಫಲ್ಸ್ ಯೋಧರ ಎನ್ ಕೌಂಟರ್-6 ನಾಗಾ ಬಂಡುಕೋರರ ಸಾವು
ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರು ಪ್ರಾಣಾಪಾಯದಿಂದ ಪಾರಾಗಿರುವುದು ವರದಿ ಹೇಳಿದೆ.
Team Udayavani, Jul 11, 2020, 3:25 PM IST
ನವದೆಹಲಿ:ಆರು ಮಂದಿ ನಾಗಾ ಬಂಡುಕೋರರನ್ನು(ಎನ್ ಎಸ್ ಸಿಎನ್-ಐಎಂ) ಭದ್ರತಾ ಪಡೆ ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವ ಘಟನೆ ಶನಿವಾರ ಅರುಣಾಚಲ ಪ್ರದೇಶದ ಖೋನ್ಸಾ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಗುಂಡಿನ ಚಕಮಕಿಯಲ್ಲಿ ಅಸ್ಸಾಂ ರೈಫಲ್ಸ್ ಯೋಧರು ಗಾಯಗೊಂಡಿದ್ದಾರೆ. ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರು ಪ್ರಾಣಾಪಾಯದಿಂದ ಪಾರಾಗಿರುವುದು ವರದಿ ಹೇಳಿದೆ.
ಅರುಣಾಚಲ ಪ್ರದೇಶ ಡಿಜಿಪಿ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ, ನಾಗಾ ಬಂಡುಕೋರರ ವಿರುದ್ಧ ಅಸ್ಸಾಂ ರೈಫಲ್ಸ್ ಮತ್ತು ಅರುಣಾಚಲ ಪ್ರದೇಶ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
ಅರುಣಾಚಲ ಪ್ರದೇಶದ ನಿಗ್ನು ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರು ಮಂದಿ ನಾಗಾ ಬಂಡುಕೋರರನ್ನುಹತ್ಯೆಗೈಯಲಾಗಿದೆ. ಅಸ್ಸಾಂ ರೈಫಲ್ಸ್ ನ ಕೆಲವು ಯೋಧರು ಈ ಸಂದರ್ಭದಲ್ಲಿ ಗಾಯಗೊಂಡಿದ್ದು, ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೇ ಅಲ್ಲ ನಾಲ್ಕು ಎಕೆ 47, 2 ಚೀನಾ ನಿರ್ಮಿತ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.