ಪಿಎಸ್ಐ ಅಮಾನತಿಗೆ ಆಗ್ರಹ
Team Udayavani, Jul 12, 2020, 10:19 AM IST
ಬಂಗಾರಪೇಟೆ: ತಹಶೀಲ್ದಾರ್ ಚಂದ್ರಮೌಳೇಶ್ವರ್ ಕೊಲೆಗೆ ಪೊಲೀಸರ ವೈಫಲ್ಯವೇ ಕಾರಣ. ಹೀಗಾಗಿ ಕಾಮಸಮುದ್ರ ಪಿಎಸ್ ಐ ದಯಾನಂದ್ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ವಿವಿಧ ದಲಿತ ಪರ ಸಂಘಟನೆಗಳು ಹಾಗೂ ಕರವೇ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟಿಸಿದರು.
ಚಿಕ್ಕಕಳವಂಚಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಉಂಟಾಗಿದ್ದ ಜಮೀನು ವಿವಾದ ಬಗೆಹರಿಸಲು ಸರ್ವೆ ಮಾಡುತ್ತಿದ್ದಾಗ ಏಕಾಏಕಿ ಆರೋಪಿ ವೆಂಕಟಪತಿ ತಹಶೀಲ್ದಾರ್ಗೆ ಚಾಕುನಿಂದ ತಿವಿದು, ಕೊಲೆ ಮಾಡಿರುವುದನ್ನು ನೋಡಿದರೆ ಇದು ಕರ್ನಾಟಕನ ಅಥವಾ ಬಿಹಾರನ ಎಂಬ ಅನುಮಾನ ಮೂಡಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾಮಸಮುದ್ರ ಠಾಣೆ ಪಿಎಸ್ ಐ ಮೂವರು ಪೇದೆಗಳ ಸಮ್ಮುಖದಲ್ಲಿ ಈ ಘಟನೆ ನಡೆದಿರುವ ಕಾರಣ, ಕೆಜಿಎಫ್ ಎಸ್ಪಿ ಘಟನೆ ಹೊಣೆ ಹೊರಬೇಕು, ಆರೋಪಿ ನಿವೃತ್ತ ವೆಂಕಟಪತಿ ಗಲ್ಲಿಗೇರಿಸಿ, ನಿವೃತ್ತಿ ವೇತನ ಸ್ಥಗಿತಗೊಳಿಸಿ, ಅವರ ಆಸ್ತಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡು, ಮೃತರ ಕುಟುಂಬಕ್ಕೆ ಸಾಮಾಜಿಕ ನ್ಯಾಯಕಲ್ಪಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂಘಟನೆಗಳ ಮುಖಂಡ ಹೂವರಸನಹಳ್ಳಿ ರಾಜಪ್ಪ, ಹುಣಸನಹಳ್ಳಿ ವೆಂಕಟೇಶ್, ದಲಿತ ಸಮಾಜ ಸೇನೆ ಅಧ್ಯಕ್ಷ ಸೂಲಿಕುಂಟೆ ಆನಂದ್, ವಿ.ಯಲ್ಲಪ್ಪ, ಜೀವಿಕ ರಾಮಚಂದ್ರ, ಕರವೇ ತಾಲೂಕು ಅಧ್ಯಕ್ಷ ಕಣಿಂಬೆಲೆ ರಾಮಪ್ರಸಾದ್, ನಗರ ಅಧ್ಯಕ್ಷ ಚಲಪತಿ, ಹುಣಸನಹಳ್ಳಿ ರಮೇಶ್, ಸಿ.ವೈ.ಚರಣ್ಬಾಬು, ಪಿ.ಚಂದ್ರಶೇಖರ್, ಎಸ್.ಕೆ.ಜಗದೀಶ್, ಹಿರೇಕರಪನಹಳ್ಳಿ ರಾಮಪ್ಪ, ಸ್ಟಾಂಪ್ ವೆಂಡರ್ ಮಂಜುನಾಥ್, ಮಾರುತಿ ಪ್ರಸಾದ್, ಅಸ್ಗರ್ಇತರಿದ್ದರು.
ಕರ್ತವ್ಯನಿರತ ತಾಲೂಕು ದಂಡಾಧಿಕಾರಿಗಳಿಗೆ ಪೊಲೀಸ್ ಇಲಾಖೆಯು ರಕ್ಷಣೆ ನೀಡುವುದರಲ್ಲಿ ಎಡವಿದೆ. ಘಟನೆ ತಡೆಯುವಲ್ಲಿ ವಿಫಲವಾದ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಇದು ಸರಿಯಲ್ಲ. –ಸೂಲಿಕುಂಟೆ ರಮೇಶ್, ಕದಸಂಸ, ರಾಜ್ಯ ಸಂಘಟನಾ ಸಂಚಾಲಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.