ಕೋವಿಡ್ ಕಾಲದಲ್ಲೊಂದು ವಿಶೇಷ ಘಟನೆ : ಸಾವಿನಲ್ಲೂ ಒಂದಾದ ವೃದ್ಧ ದಂಪತಿ
ಪತಿಯ ಸಾವಿನ ಬೆನ್ನಲ್ಲೇ ಪತ್ನಿ ಸಾವು
Team Udayavani, Jul 12, 2020, 9:39 PM IST
ಬೆಂಗಳೂರು: ನಗರದಲ್ಲಿ ಇದೀಗ ಎಲ್ಲೆಂದರಲ್ಲಿ ಕೋವಿಡ್ 19 ಸೋಂಕಿನದ್ದೇ ಸುದ್ದಿ.
ಕೋವಿಡ್ 19 ಸೋಂಕು ಹರಡುವುದರಲ್ಲಿ ರಾಜ್ಯದ ಹಾಟ್ ಸ್ಪಾಟ್ ಆಗಿ ಪರಿಣಮಿಸಿರುವ ಬೆಂಗಳೂರಿನಲ್ಲಿ ದಿನಂಪ್ರತಿ ಸಾವಿರಾರು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುತ್ತವೆ ಮತ್ತು 30 ರಿಂದ 40 ಸಾವುಗಳು ದಿನಂಪ್ರತಿ ಸಂಭವಿಸುತ್ತಲೇ ಇರುತ್ತದೆ.
ಹೀಗೆ ಕೋವಿಡ್ 19 ಸೋಂಕು ಮತ್ತು ಅದಕ್ಕೆ ಸಂಬಂಧಪಟ್ಟ ಸಾವಿನ ಸುದ್ದಿಗಳ ನಡುವೆ ಉದ್ಯಾನ ನಗರಿಯಲ್ಲೊಂದು ಅಪರೂಪದ ಸಾವಿನ ಪ್ರಕರಣ ವರದಿಯಾಗಿದೆ.
ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿರುವ ಘಟನೆ ಇದಾಗಿದ್ದು, ಜೆ.ಸಿ.ನಗರದ ಕುರುಬರ ಹಳ್ಳಿಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಜೆ.ಸಿ.ನಗರದ ಕುರುಬರಹಳ್ಳಿಯ ನಿವಾಸಿ ಚಂದ್ರಶೇಖರ್ (75) ಹಾಗೂ ಸುಶೀಲಮ್ಮ (65) ಮೃತ ದಂಪತಿ. ಚಂದ್ರಶೇಖರ್ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿದ್ದರು. ನಂತರ ನಗರದ HALನಲ್ಲಿ ಭದ್ರತಾ ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಕುರುಬರಹಳ್ಳಿಯ ತಮ್ಮ ಪುತ್ರಿಯ ನಿವಾಸದಲ್ಲಿ ದಂಪತಿ ನೆಲೆಸಿದ್ದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಚಂದ್ರಶೇಖರ್ ಅವರಿಗೆ ಭಾನುವಾರ ಬೆಳಗ್ಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ಪತಿ ಮೃಪತಪಟ್ಟಿರುವುದು ಖಚಿತವಾಗುತ್ತಲೇ ಪತ್ನಿ ಸುಶೀಲಮ್ಮ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಸುಶೀಲಮ್ಮ ಅವರನ್ನು ಆಸ್ಪತ್ರೆಗೆ ಸೇರಿಸಲು ಕುಟುಂಬದವರು ಮುಂದಾಗುವ ವೇಳೆಗೆ ಅವರೂ ಮೃತಪಟ್ಟಿದ್ದಾರೆ. ಪತಿ ಸಾವಿನ 15 ನಿಮಿಷಗಳ ಅಂತರದಲ್ಲಿ ಸುಶೀಲಮ್ಮ ಸಹ ಮೃತಪಟ್ಟಿದ್ದಾರೆ. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಜೊತೆಯಾಗಿದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ದಂಪತಿಗೆ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಪಾರ್ಥಿವ ಶರೀರವನ್ನು ನಗರದ ಸುಮ್ಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ದಂಪತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಬ್ಬರಿಗೂ ಕೋವಿಡ್ 19 ಸೋಂಕು ಇರಲಿಲ್ಲ ಎಂದು ಶಂಕರಮಠ ವಾರ್ಡ್‍ನ ಪಾಲಿಕೆ ಸದಸ್ಯ ಎಂ.ಶಿವರಾಜು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.