ಸವಾಲಿನ ಸಮಯ ಇದು ತ್ವರಿತ ಪರೀಕ್ಷಾ ಕಾಲ


Team Udayavani, Jul 13, 2020, 8:48 AM IST

bng-tdy-1

ಸಾಂದರ್ಭಿಕ ಚಿತ್ರ

ಇಂದಿನಿಂದ ನಗರದ ಜ್ವರ ತಪಾಸಣಾ ಕೇಂದ್ರಗಳಲ್ಲಿ “ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ’ ಆರಂಭಗೊಳ್ಳಲಿದೆ. ಪರೀಕ್ಷೆಗೊಳಪಟ್ಟು ಮನೆ ಸೇರುವ ಮೊದಲೇ ವರದಿ ಕೈಸೇರುವ ವ್ಯವಸ್ಥೆ ಇದಾಗಿದೆ. ಸೋಂಕಿತರ ತ್ವರಿತ ಪತ್ತೆಗೆ ಇದು ಸಹಕಾರಿ ಕೂಡ. ಆದರೆ, ಈಗಾಗಲೇ ಕೇಂದ್ರಗಳಲ್ಲಿ ಶಂಕಿತರ ಪರೀಕ್ಷೆ ಮತ್ತು ಸಾಮಾನ್ಯ ರೋಗಿಗಳ ಚಿಕಿತ್ಸೆ ನಡೆಯುತ್ತಿದೆ. ಈ ಮಧ್ಯೆ ಸೋಂಕಿತರೊಂದಿಗೆ ಪ್ರಾಥಮಿಕ- ದ್ವಿತೀಯ ಸಂಪರ್ಕಿತರ ಪರೀಕ್ಷೆ ಎಷ್ಟು ಸುರಕ್ಷಿತವಾಗಿ ನಡೆಯಲಿದೆ? ಐಸೋಲೇಷನ್‌ ಹೇಗೆ? ಯಾಮಾರಿದರೆ ಇದು ಇನ್ನಷ್ಟು ಸೋಂಕಿಗೆ ಎಡೆಮಾಡಿಕೊಡಲಿದೆಯೇ? ಇದೆಲ್ಲದರ ಸುತ್ತ ಈ ಬಾರಿಯ ಸುದ್ದಿ ಸುತ್ತಾಟ…

ನಗರದಲ್ಲಿ ಸೋಮವಾರದಿಂದ ಅಧಿಕೃತವಾಗಿ ಜ್ವರ ತಪಾಸಣಾ ಕೇಂದ್ರಗಳಲ್ಲಿ “ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ’ಗೆ ಚಾಲನೆ ದೊರೆಯಲಿದೆ. ಇದರಿಂದ ಮಾದರಿ ನೀಡಿದ ವ್ಯಕ್ತಿ ಮನೆ ಸೇರುವ ಮೊದಲೇ ಪರೀಕ್ಷಾ ವರದಿ ಬರಲಿದೆ. ಇದು ತ್ವರಿತವಾಗಿ ಪತ್ತೆಹಚ್ಚಲು ಸರಳ ವಿಧಾನ ಆಗಿರಬಹುದು; ನಿರ್ವಹಣೆ ಸವಾಲಿನದ್ದಾಗಲಿದೆ! ಏಕೆಂದರೆ, ಒಂದೇ ಕೇಂದ್ರದಲ್ಲಿ ಇನ್ಮುಂದೆ 3 ವರ್ಗಗಳು ಆಗಮಿಸಲಿವೆ. ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದವರ ಪರೀಕ್ಷೆ ಒಂದೆಡೆಯಾದರೆ, ಮತ್ತೂಂದೆಡೆ ಜ್ವರ ತಪಾಸಣೆಗೆ ಬರುವವರು ಹಾಗೂ ಇನ್ನೊಂದೆಡೆ ಉಸಿರಾಟದ ತೊಂದರೆ ಒಳಗೊಂಡಂತೆ ಇತರೆ ರೋಗಗಳ ಚಿಕಿತ್ಸೆಗೆ ಆಗಮಿಸುವ ವರ್ಗ. ಇವರೆಲ್ಲರ ನಡುವೆ ಸಾಮಾಜಿಕ ಅಂತರ, ಸೋಂಕು ಹರಡದಂತೆ ನಿರ್ವಹಣೆ ಮಾಡುವುದೇ ದೊಡ್ಡ ಜವಾಬ್ದಾರಿ ವಾರಿಯರ್ಸ್‌ ಮುಂದಿದೆ.

ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ ಕೆಲವೇ ನಿಮಿಷಗಳಲ್ಲಿ ವರದಿ ನೀಡಬಹುದು. ಆದರೆ, ಪ್ರಕ್ರಿಯೆಗೆ ಹೆಚ್ಚು ಸಮಯ ಹಿಡಿಯುತ್ತದೆ. ಈ ನಡುವೆ ಎಲ್ಲಾ 178 ಆರೋಗ್ಯ ಕೇಂದ್ರಗಳಲ್ಲೂ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಸೋಂಕಿತ ರೊಂದಿಗೆ ನೇರ ಸಂಪರ್ಕ ಹೊಂದಿದವರು ಇಲ್ಲಿ ಪರೀಕ್ಷೆಗೆ ಬರಲಿದ್ದು, ಅಧಿಕ ಹೊತ್ತು ಇಲ್ಲಿ ಕಳೆಯಬೇಕಾಗುತ್ತದೆ. ಒಂದು ಪಾಸಿಟಿವ್‌ ಬಂದರೂ ಅವರ ಐಸೋಲೇಷನ್‌ ಹೇಗೆ ಎಂಬುದಕ್ಕೆ ತಕ್ಷಣಕ್ಕೆ ಇಲಾಖೆ ಹಾಗೂ ಬಿಬಿಎಂಪಿ ಬಳಿ ಉತ್ತರ ಇಲ್ಲ. ಜವಾಬ್ದಾರಿ ಹೆಚ್ಚು; ಸಿಬ್ಬಂದಿ ಕಡಿಮೆ: ನಗರದಲ್ಲಿ ಸೋಂಕು ತೀವ್ರಗೊಂಡ ಹಿನ್ನೆಲೆ ನಗರದ ವಾರ್ಡ್‌ಗಳ ಆರೋಗ್ಯ ಸಿಬ್ಬಂದಿ ಸೋಂಕಿತರ ಐಸೋಲೇಷನ್‌, ಪ್ರಾಥಮಿಕ ಸಂಪರ್ಕಿತರ ಕ್ವಾರಂಟೈನ್‌, ಏರಿಯಾ ಸೀಲ್‌ಡೌನ್‌ಗಳಲ್ಲಿ ನಿರತರಾಗಿದ್ದಾರೆ. ಜ್ವರ ತಪಾಸಣೆಗೂ ಪ್ರತ್ಯೇಕ ವೈದ್ಯರು ಮತ್ತು ಶುಶ್ರೂಷಕಿಯರನ್ನು ನಿಯೋಜಿಸಲಾಗಿದೆ. ಅಲ್ಲದೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ಬಹುತೇಕ ವಾರ್ಡ್‌ಗಳ ಆರೋಗ್ಯ ಕೇಂದ್ರಗಳು ಈಗಾಗಲೇ ಸಿಬ್ಬಂದಿ-ತಂತ್ರಜ್ಞರ ಕೊರತೆ ಎದುರಿಸುತ್ತಿವೆ. ಈಗ ರ್ಯಾಪಿಡ್‌ ಟೆಸ್ಟ್‌ಗೆ ಹೆಚ್ಚುವರಿ ಟೆಕ್ನೀಷಿಯನ್‌, ಸೋಂಕು ಪರೀಕ್ಷೆ ಮಾಹಿತಿ ಸಂಗ್ರಹಕ್ಕೆ ಸಹಾಯಕ ಸಿಬ್ಬಂದಿ ಅವಶ್ಯವಿದೆ. ಐಸೋಲೇಷನ್‌ ಮತ್ತು ಸಂಪರ್ಕಿತ ಕ್ವಾರಂಟೈನ್‌ಗೂ ಸಿಬ್ಬಂದಿ ಬೇಕಾಗುತ್ತದೆ.

ಪೋರ್ಟಲ್‌ ಲಭ್ಯವಾಗಿಲ್ಲ! : ಆರೋಗ್ಯ ಕೇಂದ್ರಗಳಲ್ಲಿ ರ್ಯಾಪಿಡ್‌ ಪರೀಕ್ಷೆಗೆ ಅಗತ್ಯ ಕಿಟ್‌ ಲಭ್ಯವಾಗಿವೆ. ಆದರೆ, ಪರೀಕ್ಷೆಗೊಳಪಡುವವರ ಮಾಹಿತಿ ದಾಖಲಿಸಲು ಅಗತ್ಯವಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಪೋರ್ಟಲ್‌ ಪ್ರವೇಶ ಲಭ್ಯವಾಗಿಲ್ಲ! ಪರೀಕ್ಷೆಗೊಳಪಡುವ ವ್ಯಕ್ತಿಯ ವಿವರ ಜತೆಗೆ ಮೊಬೈಲ್‌ ನಂಬರ್‌ ಅನ್ನು ವೆಬ್‌ಸೈಟ್‌ಗೆ ಹಾಕಿ, ಬಳಿಕ ಒಟಿಪಿ ಪಡೆದು ನಂತರ ಪರೀಕ್ಷೆ ನಡೆಸಬೇಕಿದೆ. ಇದು ಭಾನುವಾರದವರೆಗೆ ಲಭ್ಯವಾಗಿರಲಿಲ್ಲ. ಮೂಲಗಳ ಪ್ರಕಾರ ಸೋಮವಾರ ಎಲ್ಲಾ ಆರೋಗ್ಯ ಕೇಂದ್ರಗಳಿಗೂ ಬಳಕೆದಾರರ ಐಡಿ, ಪಾಸ್‌ವರ್ಡ್‌ ಲಭ್ಯವಾಗಲಿದೆ.

ಮನೆಯಿಂದಲೇ ಸಂಗ್ರಹ ಸೂಕ್ತ? :  ಕೇಂದ್ರದ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕಿತರು, ಶಂಕಿತರು ಮತ್ತು ಇತರೆ ರೋಗಿಗಳು ಸೇರುವುದರಿಂದ ಸೋಂಕು ಅನೇಕರಿಗೆ ಹರಡುವ ಸಾಧ್ಯತೆ ಇದೆ. ಬುಧವಾರದಿಂದ ನಗರದಲ್ಲಿ ಒಂದು ವಾರ ಲಾಕ್‌ಡೌನ್‌ ಜಾರಿಯಲ್ಲಿದ್ದು, ಈ ವೇಳೆ ಶಂಕಿತರು ಆರೋಗ್ಯ ಕೇಂದ್ರಗಳಿಗೆ ಆಗಮಿಸಿ ಸೋಂಕು ಪರೀಕ್ಷೆಗೆ ಒಳಗಾಗುವುದಕ್ಕೆ ಸಮಸ್ಯೆ ಆಗಲಿದೆ. ಶಂಕಿತರನ್ನು ಕರೆತರಲು ಆ್ಯಂಬುಲೆನ್ಸ್‌ ಕೊರತೆಯೂ ಕಾಡುತ್ತಿದೆ. ಹೀಗಾಗಿ, ಶಂಕಿತರ ಮನೆಗೆ ತೆರಳಿ ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆಗೊಳಪಡಿಸುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದಕ್ಕೆ ಹೆಚ್ಚು ಸಿಬ್ಬಂದಿ ಅವಶ್ಯಕತೆ ಇದ್ದು, ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.

ಟೋಕನ್‌ ಸಿಸ್ಟಮ್‌ :  ಆಧಾರ್‌ ಕಾರ್ಡ್‌ ವಿತರಣೆ ಅಥವಾ ತಿದ್ದುಪಡಿಗೆ ಸಂಬಂಧಿಸಿದಂತೆ ಹಾಗೂ ವಿವಿಧ ಸೇವೆ ಕಲ್ಪಿಸುವ ಬೆಂಗಳೂರು ಒನ್‌ನಲ್ಲಿ ನೀಡುವ ಟೋಕನ್‌ ವ್ಯವಸ್ಥೆ ಪ್ರಸ್ತುತ ಕೆಲವು ಜ್ವರ ತಪಾಸಣಾ ಕೇಂದ್ರಗಳಲ್ಲೂ ಇದೆ!. ಅಧಿಕ ದಟ್ಟಣೆ ಇರುವ ಜ್ವರ ತಪಾಸಣಾ ಕೇಂದ್ರಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಟೋಕನ್‌ ವಿತರಣೆ ಮಾಡಲಾಗುತ್ತದೆ. ಮರುದಿನ ಅದನ್ನು ಸಲ್ಲಿಸಿ ಪಾಳಿಯಲ್ಲಿ ಜ್ವರ ತಪಾಸಣೆ ಮಾಡಿಸಿಕೊಳ್ಳಬೇಕು. ಹೀಗೆ ತಪಾಸಣೆಗಾಗಿ ಹಲವು ಬಾರಿ ಕೇಂದ್ರಗಳಿಗೆ ಜನ ಅಲೆದಾಡಬೇಕಾಗಿದೆ. ಈ ವ್ಯವಸ್ಥೆ ಪರೋಕ್ಷವಾಗಿ ಜ್ವರ ತಪಾಸಣೆಗೆ ಜನರನ್ನು ನಿರುತ್ಸಾಹಗೊಳಿಸುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ. ಬೆಳಗ್ಗೆಯೇ ಕೇಂದ್ರಕ್ಕೆ ತೆರಳಿ ಸರದಿಯಲ್ಲಿ ನಿಲ್ಲುವುದು, ಟೋಕನ್‌ ಪಡೆದು ಮರುದಿನ ಮತ್ತೆ ಬರಬೇಕಾಗುತ್ತದೆ. ಆ ಪೈಕಿ ಯಾರಿಗಾದರೂ ಸೋಂಕಿನ ಲಕ್ಷಣ ಅಥವಾ ಸೋಂಕು ದೃಢಪಟ್ಟ ವರದಿ ಬಂದ ನಂತರ ಮತ್ತೆ ಅಲ್ಲಿಂದ ಆಸ್ಪತ್ರೆಗೆ ಅಥವಾ ಕ್ವಾರಂಟೈನ್‌ ಕೇಂದ್ರಕ್ಕೆ ತೆರಳಿ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಆದರೆ, ಹಲವು ಬಾರಿ ಒಬ್ಬ ವ್ಯಕ್ತಿ ಆಟೋ ಅಥವಾ ಸ್ವಂತ ವಾಹನ ಅಥವಾ ಬಸ್‌ ಸೇರಿ ವಿವಿಧ ರೂಪದಲ್ಲಿ ಕೇಂದ್ರಕ್ಕೆ ಆಗಮಿಸುತ್ತಾನೆ. ಸೋಂಕು ತಗುಲಿದ್ದರೆ, ಮನೆಯಿಂದ ಜ್ವರ ತಪಾಸಣಾ ಕೇಂದ್ರಕ್ಕೆ ಹಲವು ಬಾರಿ ಓಡಾಡುವುದರಿಂದ ದಾರಿಯುದ್ದಕ್ಕೂ ಹರಡುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಇದು ವಾಹಕವಾಗಿ ಪರಿಣಮಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. “ನನ್ನ ಸಹೋದ್ಯೋಗಿಯೊಬ್ಬರನ್ನು ಇತ್ತೀಚೆಗೆ ಭೇಟಿಯಾಗಿದ್ದೆ. ಎರಡು ದಿನಗಳ ನಂತರ ಆ ಸಹೋದ್ಯೋಗಿಗೆ ಸೋಂಕು ತಗುಲಿದೆ ಎಂಬುದು ನನಗೆ ಗೊತ್ತಾಯಿತು. ಆಪ್ತಮಿತ್ರಕ್ಕೆ ಕರೆ ಮಾಡಿ, ಸಮಸ್ಯೆ ಹೇಳಿಕೊಂಡೆ. ಆದರೆ, ಜ್ವರ ತಪಾಸಣಾ ಕೇಂದ್ರ ಎಲ್ಲಿದೆ ಎಂಬುದನ್ನು ಅವರು ಹೇಳಲಿಲ್ಲ. ನಾನೇ ಹತ್ತಿರದ ಜೆ.ಪಿ. ನಗರ ಜ್ವರ ತಪಾಸಣಾ ಕೇಂದ್ರಕ್ಕೆ ಮಧ್ಯಾಹ್ನ 12.30ಕ್ಕೆ ಭೇಟಿ ನೀಡಿದೆ. ಆಗ, “ಟೋಕನ್‌ ಪ್ರಕ್ರಿಯೆ ಮುಗಿಯಿತು. ನಾಳೆ ಬನ್ನಿ’ ಎಂದು ಹೇಳಿ ಕಳುಹಿಸಿದರು. ಇನ್ನು ಅಲ್ಲಿನ ಪರೀಕ್ಷಾ

ಪ್ರಕ್ರಿಯೆ ಬಗ್ಗೆಯೂ ನನಗೆ ಅನುಮಾನ ಬಂತು. ಏಕೆಂದರೆ, ಒಂದು ಅಡಿ ದೂರದಲ್ಲಿ ವ್ಯಕ್ತಿಯ ಗಂಟಲು ಮಾದರಿ ಸಂಗ್ರಹ ಕ್ರಿಯೆ ನಡೆಯುತ್ತಿತ್ತು. ಆದರೆ, ಗಂಟಲುವರೆಗೆ ಆ “ಸ್ಟಿಕ್‌’ ಹೋಗುತ್ತಲೇ ಇರಲಿಲ್ಲ’ ಎಂದು ಜೆ.ಪಿ.ನಗರ ನಿವಾಸಿ ಐಟಿ ಉದ್ಯೋಗಿಯೊಬ್ಬರು ಮಾಹಿತಿ ನೀಡಿದರು. “ಆಪ್ತಮಿತ್ರ ಸಹಾಯವಾಣಿ ಹಾಗೂ ಜ್ವರ ತಪಾಸಣಾ ಕೇಂದ್ರಗಳನ್ನು ಏಕೆ ಇಂಟಿಗ್ರೇಟ್‌ ಮಾಡಬಾರದು? ಆ ಮೂಲಕ ಆಪ್ತಮಿತ್ರಕ್ಕೆ ಕರೆ ಮಾಡಿದ ವ್ಯಕ್ತಿಗೆ ಹತ್ತಿರದ ತಪಾಸಣಾ ಕೇಂದ್ರದ ಮಾಹಿತಿ ನೀಡಬಹುದು. ಜತೆಗೆ ಟೋಕನ್‌ ನಂಬರ್‌ ಕೊಡಬಹುದು. ನಂತರ ಆ ವ್ಯಕ್ತಿಯ ವಿವರವನ್ನು ಜ್ವರ ತಪಾಸಣಾ ಕೇಂದ್ರಕ್ಕೆ ನೀಡಬಹುದು. ಆಗ ನಿಖರ ಮಾಹಿತಿ ದೊರೆಯುತ್ತದೆ. ಇದರಿಂದ ಅಲೆದಾಟವೂ ತಪ್ಪುತ್ತದೆ ಹಾಗೂ ವ್ಯಕ್ತಿಯ ಟ್ರ್ಯಾಕ್‌ ರೆಕಾರ್ಡ್‌ ಕೂಡ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಪ್ಪು ಮಾಹಿತಿಗೆ ಅವಕಾಶವಿಲ್ಲ  ;  ಆಪ್ತಮಿತ್ರಕ್ಕೆ ಯಾವುದೇ ವ್ಯಕ್ತಿ ಕರೆ ಮಾಡಿದರೂ, ಆ ವ್ಯಕ್ತಿ ನೀಡುವ ವಿಳಾಸ ಆಧರಿಸಿ ಹತ್ತಿರದ ಜ್ವರ ತಪಾಸಣಾ ಕೇಂದ್ರದ ಬಗ್ಗೆ ಮೊಬೈಲ್‌ ಸಂದೇಶದ ಮೂಲಕ ಮಾಹಿತಿ ನೀಡಲಾಗುವುದು ಎಂದು “ಆಪ್ತಮಿತ್ರ’ ವಿಶೇಷ ಅಧಿಕಾರಿ ಮೀನಾಕ್ಷಿ ನೇಗಿ ತಿಳಿಸುತ್ತಾರೆ. ನಿತ್ಯ ಆಪ್ತಮಿತ್ರಕ್ಕೆ 4,000-5,000 ಕರೆ ಬರುತ್ತವೆ. ಕರೆ ಮಾಡಿದವರ ವಿಳಾಸ ಮತ್ತು ಮೊಬೈಲ್‌ ಸಂಖ್ಯೆ ದಾಖಲಿಸಿಕೊಳ್ಳಲಾಗುತ್ತದೆ. ನಂತರ ಆ ವಿಳಾಸದಿಂದ ಪಿನ್‌ಕೋಡ್‌ ದೊರೆಯುತ್ತದೆ. ಆ ಮೂಲಕ ಹತ್ತಿರದ ಜ್ವರ ತಪಾಸಣಾ ಕೇಂದ್ರದ ಮಾಹಿತಿಯನ್ನು ಮೊಬೈಲ್‌ ಸಂದೇಶದಲ್ಲಿ ಕಳುಹಿಸಲಾಗುವುದು. ತದ ನಂತರ ಕರೆ ಮಾಡಿದ ವ್ಯಕ್ತಿಗೆ ಆಪ್ತಮಿತ್ರದಿಂದ ಪುನಃ ಕರೆ ಮಾಡಿ, ತಪಾಸಣೆಗೆ ಒಳಪಟ್ಟ ಬಗ್ಗೆ ದೃಢಪಡಿಸಿಕೊಳ್ಳಲಾಗುತ್ತಿದೆ. ಆಪ್ತಮಿತ್ರಕ್ಕೆ ಕರೆ ಮಾಡಿದವರ ಪೈಕಿ ಶೇ.80-85ರಷ್ಟು ಜನ ಜ್ವರ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ ಎಂದು ಮೀನಾಕ್ಷಿ ನೇಗಿ ಸ್ಪಷ್ಟಪಡಿಸಿದರು. ಅಂದಹಾಗೆ, ಆಪ್ತಮಿತ್ರಕ್ಕೆ ಕರೆ ಮಾಡಿದವರ ಮಾಹಿತಿಯನ್ನು ಜ್ವರ ತಪಾಸಣಾ ಕೇಂದ್ರದಲ್ಲಿನ ನೋಡಲ್‌ ಅಧಿಕಾರಿಗೂ ರವಾನಿಸಲಾಗಿರುತ್ತದೆ. ಹೀಗಾಗಿ, ತಪ್ಪು ಮಾಹಿತಿ ನೀಡಲು ಇಲ್ಲಿ ಅವಕಾಶ ಇಲ್ಲ ಎಂದೂ ಹೇಳಿದರು. ಇದಲ್ಲದೆ, ಈಗ ಹೊರಗಡೆಯಿಂದ ಬಂದು ಹೋಂ ಕ್ವಾರಂಟೈನ್‌ ಆದವರು, ಐಎಲ್‌ಐ, ಸಾರಿ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ನಿರಂತರವಾಗಿ ಕರೆ ಮಾಡಿ, ಆರೋಗ್ಯ ವಿಚಾರಿಸಲಾಗುತ್ತಿದೆ. ಒಟ್ಟಾರೆ 25 ಲಕ್ಷ ಕರೆಗಳನ್ನು ನಮ್ಮ ಸಿಬ್ಬಂದಿ ನಿಯಮಿತವಾಗಿ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದರು. “ತಂತ್ರಜ್ಞಾನ ಬಳಸಿ ಆಪ್ತಮಿತ್ರ ಮತ್ತು ಜ್ವರ ತಪಾಸಣಾ ಕೇಂದ್ರವನ್ನು ಇಂಟಿಗ್ರೇಟ್‌ ಮಾಡಬಹುದು. ಆದರೆ, ತಪಾಸಣೆಗೆ ಹೋಗಿ ಬಂದ ನಂತರ ಆ ವ್ಯಕ್ತಿಗೆ ನಾವು ನಿಯಮಿತವಾಗಿ ಕರೆ ಮಾಡಿ, ಆರೋಗ್ಯ ವಿಚಾರಿಸಬೇಕಾಗುತ್ತದೆ’ ಎಂದು ಮೀನಾಕ್ಷಿ ನೇಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

 

 –ವಿಜಯಕುಮಾರ್‌ ಚಂದರಗಿ/ ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್‌ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ

Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್‌ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.