ಪ್ರವಾಸೋದ್ಯಮ: ಆದ್ಯತೆಯಾಗಿ ಪರಿಗಣಿಸಿ, ಅಭಿವೃದ್ಧಿಪಡಿಸಿ


Team Udayavani, Jul 13, 2020, 12:01 PM IST

ಪ್ರವಾಸೋದ್ಯಮ: ಆದ್ಯತೆಯಾಗಿ ಪರಿಗಣಿಸಿ, ಅಭಿವೃದ್ಧಿಪಡಿಸಿ

ಅರಬಿ ಸಮುದ್ರ ಮತ್ತು ಪಶ್ಚಿಮ ಘಟ್ಟ ಶ್ರೇಣಿಯ ನಡುವೆ ಚಾಚಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸದ್ಯ ಮತ್ತು ಭವಿಷ್ಯದಲ್ಲಿ ವಿಪುಲ ಅವಕಾಶಗಳಿರುವ ಕ್ಷೇತ್ರ. ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದ ಕ್ಷೇತ್ರ ಎಂದರೂ ತಪ್ಪಲ್ಲ. ಸದ್ಯ ಎದುರಾ ಗಿರುವ ಕೋವಿಡ್ ಹಾವಳಿ ಈ ಕ್ಷೇತ್ರಕ್ಕೆ ಉಂಟುಮಾಡಿರುವ ಹಿನ್ನಡೆಯನ್ನು ಮೆಟ್ಟಿನಿಂತು ದೂರಗಾಮಿ ನೆಲೆಯಲ್ಲಿ ಮುನ್ನೆಲೆಗೆ ಕೊಂಡೊಯ್ಯುವ ಚಿಂತನೆ ಮತ್ತು ಆ ನಿಟ್ಟಿನಲ್ಲಿ ಯೋಜಿತ ಕ್ರಮಗಳೂ ಅವಶ್ಯ.

ಮಂಗಳೂರು: ಡಿಸೆಂಬರ್‌ನಿಂದ ಮೇ ಅಂತ್ಯದವರೆಗೆ ಕರಾವಳಿಯಲ್ಲಿ ಪ್ರವಾಸೋದ್ಯಮ ಕಾಲ. ಬೇಸಗೆಯ ಈ ಅವಧಿಯಲ್ಲಿ ಕರಾವಳಿಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿರುತ್ತವೆ. ಪ್ರವಾಸೋದ್ಯಮವನ್ನು ಅವಲಂಬಿಸಿರುವ ಕ್ಷೇತ್ರಗಳಿಗೆ ಹೆಚ್ಚು ಆದಾಯ ತರುವ ಸಮಯವೂ ಹೌದು. ಈ ಬಾರಿ ಕೋವಿಡ್ ಕರಿಛಾಯೆ ಪ್ರವಾಸೋದ್ಯಮಕ್ಕೆ ಬಹುದೊಡ್ಡ ಹೊಡೆತ ನೀಡಿದೆ. ಆದರೆ ಸದ್ಯದ ಲೆಕ್ಕಾಚಾರದಂತೆ ಪರಿಸ್ಥಿತಿ ಮುಂದಿನ ಬೇಸಗೆ ವೇಳೆಗೆ ಸುಧಾರಿಸಲಿದ್ದು, ಮುಂದಿನ ದಿನಗ ಳಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಸಿ ಕೊಳ್ಳಲಿದೆ. ಇದಕ್ಕೆ ಪೂರಕವಾಗಿ ಪ್ರವಾಸೋದ್ಯ ಮವನ್ನು ಮುಂಚೂಣಿಗೆ ತರಲು ಕೆಲವಾರು ಉಪಕ್ರಮಗಳು, ಉತ್ತೇಜನಗಳು ಅವಶ್ಯ.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಏರುಗತಿಯಲ್ಲಿತ್ತು. 2016-17ರಲ್ಲಿ 1 ಕೋಟಿ, 2017-18ರಲ್ಲಿ 1.2 ಕೋಟಿ, 2018-19ರಲ್ಲಿ 1.4 ಕೋಟಿ ಮತ್ತು 2019-20ರಲ್ಲಿ ಸುಮಾರು 2 ಕೋಟಿಗೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದರು. ವಾರ್ಷಿಕವಾಗಿ ಸುಮಾರು 1.75 ಕೋಟಿ ಮಂದಿ ಜಿಲ್ಲೆಗೆ ಧಾರ್ಮಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕಳೆದ ವರ್ಷ ಮೇಯಲ್ಲಿ 22,01,377 ಮಂದಿ ಪ್ರವಾಸಿಗರು ಆಗಮಿಸಿದ್ದರು. ಆದರೆ ಈ ಬಾರಿ ಮಾರ್ಚ್‌ ನಲ್ಲಿ ಲಾಕ್‌ಡೌನ್‌ ಬಳಿಕ ಈ ಸಂಖ್ಯೆ ತೀರಾ ಕುಸಿದಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಧಾರ್ಮಿಕ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದೆ. ಉಳಿದ ವಿಭಾಗಗಳು ನವೆಂಬರ್‌ ವೇಳೆಗೆ ಚೇತರಿಸುವ ನಿರೀಕ್ಷೆ ಇದೆ.

ತಾಣಗಳಿವೆ, ಉತ್ತೇಜನ ಬೇಕು
ಜಿಲ್ಲೆಯಲ್ಲಿ ಧಾರ್ಮಿಕ ಪ್ರವಾಸೋದ್ಯಮ, ಬೀಚ್‌ ಟೂರಿಸಂ, ನಿಸರ್ಗ ಪ್ರವಾಸೋದ್ಯಮ ಪ್ರಮುಖ. ಇಲ್ಲಿ ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ತಾಣ ಸೇರಿ 18 ಪ್ರಮುಖ ತಾಣಗಳಿವೆ. ಧಾರ್ಮಿಕ ಕ್ಷೇತ್ರಗಳಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಮಂಗಳಾದೇವಿ, ಕದ್ರಿ, ಕುದ್ರೋಳಿ, ಪೊಳಲಿ, ಮೂಡುಬಿದಿರೆ ಸಾವಿರಕಂಬ ಬಸದಿ, ಮೂಲ್ಕಿ -ಬಪ್ಪನಾಡು, ಸೈಂಟ್‌ ಅಲೋಶಿಯಸ್‌ ಚಾಪೆಲ್‌, ಉಳ್ಳಾಲದ ಸಯ್ಯದ್‌ ಮದನಿ ದರ್ಗಾ ಪ್ರಮುಖ. ಸೋಮೇಶ್ವರದಿಂದ ಮೂಲ್ಕಿಯ ವರೆಗೆ 42 ಕಿ.ಮೀ. ಸಮುದ್ರ ತೀರವಿದೆ.

ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಸಸಿಹಿತ್ಲು, ಸುರತ್ಕಲ್‌ ಪ್ರಮುಖ ಬೀಚ್‌ಗಳು. ಪಿಲಿಕುಳ ನಿಸರ್ಗಧಾಮ ಪ್ರಧಾನ ಸ್ಥಾನ ಪಡೆದಿದೆ. ಸಮುದ್ರತೀರ ಪ್ರವಾಸೋದ್ಯಮದಲ್ಲಿ ಬೀಚ್‌ಗಳು, ಸಮುದ್ರ ಕ್ರೀಡೆಗಳು, ಹೋಂ ಸ್ಟೇಗಳು, ಬೀಚ್‌ ಉತ್ಸವಗಳು ಅವಕಾಶ ಇರುವ ಕ್ಷೇತ್ರಗಳು. ಇದಲ್ಲದೆ ಒಳನಾಡಿನಲ್ಲೂ ಅನೇಕ ರಮಣೀಯ ಹಿನ್ನೀರು ತಾಣಗಳಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಹಿನ್ನೀರು ಪ್ರವಾಸೋದ್ಯಮದಲ್ಲಿ ಬೋಟ್‌ ಹೌಸ್‌, ತೇಲುವ ರೆಸ್ಟೋರೆಂಟ್‌, ರೆಸಾರ್ಟ್‌ಗಳಿಗೆ ಅವಕಾಶಗಳಿವೆ. ಈಗಾಗಲೇ ಕೆಲವು ಹೋಂ ಸ್ಟೇಗಳು ಕಾರ್ಯಾಚರಿಸುತ್ತಿವೆ.

ಆಗಬೇಕಾಗಿರುವುದು
ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮೂಲಸೌಕರ್ಯಗಳು ಬಹುಮುಖ್ಯ. ಸಂಚಾರ ಸೌಲಭ್ಯ, ಗುಣಮಟ್ಟದ ಹೊಟೇಲ್‌ಗ‌ಳು, ಮಾರ್ಗದರ್ಶನ, ಬೀಚ್‌ಗಳಲ್ಲಿ ಶೌಚಾಲಯ ಸಹಿತ ಮೂಲಸೌಕರ್ಯಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಒಂದಷ್ಟು ಕಾರ್ಯಯೋಜನೆಗಳು ಅಗತ್ಯ. ಪ್ರವಾಸಿಗರು ಹೆಚ್ಚು ತಾಣಗಳನ್ನು ಜೋಡಿಸಿಕೊಂಡು ಪ್ರವಾಸವನ್ನು ಹೆಚ್ಚು ಫಲಪ್ರದ ಮಾಡಿಕೊಳ್ಳುವುದಕ್ಕೆ ಪ್ರವಾಸಿ ತಾಣಗಳ ಕ್ರೋಡೀಕೃತ ಪ್ರವಾಸ ನಕ್ಷೆ ಅಗತ್ಯ. ಇದರಿಂದ ಒಂದು ಪ್ರವಾಸದಲ್ಲಿ ಅನೇಕ ತಾಣಗಳನ್ನು ಜೋಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ ಪ್ರವಾಸೋದ್ಯಮವೂ ವಿಕಸಿಸುತ್ತದೆ. ಈ ಪ್ರವಾಸಿ ನಕ್ಷೆಯನ್ನು ಅಂತರ್ಜಾಲ ತಾಣಗಳಲ್ಲಿ ಪ್ರದರ್ಶಿಸಬೇಕು ಮತ್ತು ಪ್ರತೀ ಪ್ರವಾಸಿ ತಾಣದಲ್ಲೂ ಇದು ಅಗತ್ಯ. ಟೂರಿಸಂ ಸಕೀìಟ್‌ಗಳನ್ನು ರೂಪಿಸು ವುದರಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆ ಯಲ್ಲಿರುವ ಹತ್ತಾರು ಸೌಲಭ್ಯಗಳನ್ನು ಪಡೆ ಯಲು ಪೂರಕವಾಗುತ್ತದೆ.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯವಾಗಿ ಪ್ರವಾಸೋದ್ಯಮ ನಕಾಶೆಯಲ್ಲಿ ಸ್ಥಾನ, ಪ್ರವಾಸಿ ತಾಣಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು, ಮೂಲ ಸೌಕರ್ಯಗಳ ಅಭಿವೃದ್ಧಿ, ಡಿಜಿಟಲ್‌ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿ ವ್ಯಾಪಕ ಪ್ರಚಾರ ನೀಡಿ ಪ್ರವಾಸಿಗರನ್ನು ಆಕರ್ಷಿ ಸುವುದು ಮುಂತಾದವು ಇದರಿಂದ ಸೆಳೆಯಲು ಸಾಧ್ಯ.

ಇನ್ನೊಂದೆಡೆ ಪ್ರವಾಸೋದ್ಯಮಿಗಳನ್ನು ಹೆಚ್ಚು ಆಕರ್ಷಿಸುವುದಕ್ಕಾಗಿ ಪ್ರವಾಸೋದ್ಯಮ ಸ್ನೇಹಿ ನೀತಿ ಅವಶ್ಯವಿದೆ. ಪರವಾನಿಗೆಗಳನ್ನು ಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಪ್ರವಾಸೋದ್ಯಮ ಆರಂಭಿಸಲು ಅನುಮತಿಗಾಗಿ ಹಲವಾರು ಇಲಾಖೆಗಳಿಗೆ ಅಲೆದಾಡಬೇಕಾಗಿದೆ. ಇದನ್ನು ನಿವಾರಿಸಲು ಏಕಗವಾಕ್ಷಿ ವ್ಯವಸ್ಥೆಯನ್ನು ಶೀಘ್ರ ಜಾರಿಗೆ ತರಬೇಕು.

ಸರಕಾರದಿಂದ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಮತ್ತು ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ಯೋಜನೆಗಳು ರೂಪುಗೊಂಡಿವೆ. ಇವುಗಳಲ್ಲಿ ಕೆಲವು ಅನುಷ್ಠಾನಗೊಂಡಿವೆ. ಹಲವು ಮಂಜೂರಾಗಿದ್ದರೂ ಅನುಷ್ಠಾನದ ಹಂತ ತಲುಪಿಲ್ಲ. ಸ್ವದೇಶ ದರ್ಶನ ಕೋಸ್ಟಲ್‌ ಟೂರಿಸಂ ಸರ್ಕಿಟ್‌ ಯೋಜನೆಯಡಿ ಮಂಗಳೂರಿನ ತಣ್ಣೀರುಬಾವಿ ಮತ್ತು ಸಸಿಹಿತ್ಲು ಬೀಚ್‌ಗಳಲ್ಲಿ 25.35 ಕೋ.ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸೌಲಭ್ಯಗಳ ಅಳವಡಿಕೆಗೆ ಅನುಮೋದನೆ ದೊರಕಿದ್ದರೂ ಕಾರ್ಯಗತಗೊಂಡಿಲ್ಲ.

ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?

ಗಣನೀಯ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಮತ್ತು ಆದಾಯ ತರುವ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ ಸರಕಾರದಿಂದ ಸಹಾಯಧನ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಅಗತ್ಯ.
ಪ್ರವಾಸೋದ್ಯಮಿಗಳ ಚಟುವಟಿಕೆಗಳನ್ನು ಉತ್ತೇಜಿಸುವುದಕ್ಕಾಗಿ ಪ್ರಸ್ತುತ ಅನುಮತಿ, ಪರವಾನಿಗೆ ಪ್ರಕ್ರಿಯೆಗಳಲ್ಲಿರುವ ಅಡೆತಡೆಗಳನ್ನು ನಿವಾರಿಸಬೇಕು. ಏಕಗವಾಕ್ಷಿ ವ್ಯವಸ್ಥೆಯ ಶೀಘ್ರ ಅನುಷ್ಠಾನ ಅಗತ್ಯ.

ಹೊಟೇಲ್‌ ಸೇರಿದಂತೆ ಪ್ರವಾಸೋದ್ಯಮವನ್ನು ಹೊಂದಿಕೊಂಡಿರುವ ಕ್ಷೇತ್ರಗಳು ಪ್ರಸ್ತುತ ಕೊರೊನಾದಿಂದಾಗಿ ಅತೀ ಹೆಚ್ಚು ಸಂಕಷ್ಟಕ್ಕೊಳಗಾಗಿವೆ. ಇವು ಚೇತರಿಸಿಕೊಳ್ಳಲು ಪೂರಕವಾಗಿ ಜಿಎಸ್‌ಟಿ ದರ ಇಳಿಕೆ, ಸಾಲದ ಮೇಲಿನ ಬಡ್ಡಿದರದಲ್ಲಿ ರಿಯಾಯಿತಿ ಅಥವಾ ಮನ್ನಾ ಸೌಲಭ್ಯ ನೀಡಬೇಕು.

ಕೊರೊನಾದಿಂದಾಗಿ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಬಹಳಷ್ಟು ಸಂಸ್ಥೆಗಳ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಸಿಬಂದಿಯಿದ್ದು, ಸರಕಾರ ಅವರನ್ನು ಕೂಡ ಪರಿಗಣಿಸಿ ಸಹಾಯಧನ ನೀಡಬೇಕು.

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.