ಸಾವಿರ ಗಡಿ ದಾಟಿದ ಸೋಂಕು
Team Udayavani, Jul 13, 2020, 2:11 PM IST
ಬೀದರ: ಹೆಮ್ಮಾರಿ ಕೋವಿಡ್ ಆರ್ಭಟದಿಂದ ಬೀದರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದ್ದರೆ ಸಾವಿನ ಪ್ರಮಾಣ ಅರ್ಧ ಶತಕ ದಾಟಿದೆ. ರವಿವಾರ ಗಡಿ ನಾಡಿನಲ್ಲಿ ಮತ್ತೆ 62 ಕೋವಿಡ್- 19 ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಬೀದರ ನಗರ ಒಂದರಲ್ಲೇ 35ಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗಿವೆ.
ಬೀದರ ತಾಲೂಕಿನಲ್ಲಿ 42, ಭಾಲ್ಕಿ, ಔರಾದ ಮತ್ತು ಹುಮನಾಬಾದ ತಾಲೂಕಿನಲ್ಲಿ ತಲಾ 5 ಮತ್ತು ಬಸವಕಲ್ಯಾಣ ತಾಲೂಕಿನಲ್ಲಿ 4 ಕೇಸ್‌ಗಳು ವರದಿಯಾಗಿವೆ. ಒಟ್ಟಾರೆ ಪ್ರಕರಣಗಳಲ್ಲಿ 15 ವರ್ಷದೊಳಗಿನ 8 ಮಕ್ಕಳು ಇದ್ದಾರೆ. ಸಿದ್ಧಿ ತಾಲೀಮ್ 8, 100 ಹಾಸಿಗೆ ಕ್ವಾಟರ್ 4, ದರ್ಜಿ ಗಲ್ಲಿ, ಲೇಬರ್‌ಕಾಲೋನಿ, ದೇವಿ ಕಾಲೋನಿ, ಬ್ರಿಮ್ಸ್, ದುಲ್ಹನ್ ದರ್ವಾಜಾ ತಲಾ 2, ಚೌಬಾರಾ, ಟ್ರಾμಕ್ ಪೊಲೀಸ್ ಕ್ವಾಟರ್, ಚಿದ್ರಿ, ಮನಿಯಾರ್ ತಾಲೀಮ್, ಆದರ್ಶ ಕಾಲೋನಿ, ಗಾಂಧಿ ನಗರ, ರೋಹೆಲಿ ಗಲ್ಲಿ, ಸಾತೋಳಿ, ಪೊಲೀಸ್ ಕಾಲೋನಿ,ಡಿಎಂಒ ಕಚೇರಿ, ಜೇಲ್ ಕಾಲೋನಿ, ಓಲ್ಡ್ ಸಿಟಿ, ಹಳೆ ಬಸ್ ನಿಲ್ದಾಣ, ಶಿವನಗರ ಉತ್ತರ ಪ್ರದೇಶಗಳಲ್ಲಿ ತಲಾ ಒಂದು, ಅಷ್ಟೂರ -2, ಗುನ್ನಳ್ಳಿ-1, ಚಿದ್ರಿ-1 ಚಿಕ್ಕಪೇಟ 1 ಕೇಸ್ ಪತ್ತೆಯಾಗಿವೆ.
ಹುಮನಾಬಾದ ಪಟ್ಟಣ 4, ಮೀನಕೇರಾದಲ್ಲಿ 1, ಭಾಲ್ಕಿ ತಾಲೂಕಿನ ಹಾಲಹಳ್ಳಿ, ಇಂಚೂರ, ಬ್ಯಾಲಹಳ್ಳಿ, ಧನ್ನೂರ,ನಾವದಗಿಯಲ್ಲಿ ತಲಾ 1 ಕೇಸ್ ಸೇರಿವೆ. ಇಂದಿನ ಸೋಂಕಿತರು ಸೇರಿ ಜಿಲ್ಲೆಯಲ್ಲಿ ಈವರೆಗೆ 1038 ಪಾಸಿಟಿವ್ ಕೇಸ್‌ಗಳು ಆದಂತಾಗಿದ್ದು, ಅದರಲ್ಲಿ 53 ಜನ ಸಾವನ್ನಪ್ಪಿದ್ದರೆ, 613 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಇನ್ನೂ 372 ಕೇಸ್ ಸಕ್ರಿಯವಾಗಿವೆ. ರವಿವಾರದವೆಗೆ 43,180 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 39,304 ಮಂದಿಯದ್ದು ನೆಗೆಟಿವ್ ಇದ್ದರೆ ಇನ್ನೂ 2838 ಜನರ ವರದಿ ಬರುವುದು ಬಾಕಿ ಇದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.