ಐಟಿ : ಸರಕಾರ ಸ್ಪಂದಿಸಿದರೆ ಆರ್ಥಿಕ ಪ್ರಗತಿ , ಉದ್ಯೋಗ ಸೃಷ್ಟಿ

ಐಟಿ ಕ್ಷೇತ್ರ; ನೆರವಿನ ನಿರೀಕ್ಷೆಯಲ್ಲಿ ದ. ಕ. ಆರ್ಥಿಕತೆ; ಸರಕಾರ ಏನು ಮಾಡಬೇಕು ?

Team Udayavani, Jul 14, 2020, 9:23 AM IST

ಐಟಿ : ಸರಕಾರ ಸ್ಪಂದಿಸಿದರೆ ಆರ್ಥಿಕ ಪ್ರಗತಿ , ಉದ್ಯೋಗ ಸೃಷ್ಟಿ

ಕೋವಿಡ್ ವೈರಸ್‌ ಎಲ್ಲ ಕ್ಷೇತ್ರಗಳ ಮೇಲೆ ತೀವ್ರ ಹೊಡೆತವನ್ನು ನೀಡಿದೆ. ಇದಕ್ಕೆ ಐಟಿ ಕ್ಷೇತ್ರವೂ ಹೊರತಾಗಿಲ್ಲ. ಐಟಿ ಕ್ಷೇತ್ರ ವರ್ಕ್‌ ಫ್ರಂ ಹೋಂ ವ್ಯವಸ್ಥೆ ಕಲ್ಪಿಸಿಕೊಂಡಿದ್ದರಿಂದ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದೆ ಎನ್ನಬಹುದು. ಈ ಕ್ಷೇತ್ರ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಒದಗಿಸುತ್ತಿರುವುದರಿಂದ ವಿದೇಶಿ ವಿನಿಮಯವೂ ದೊಡ್ಡ ಮಟ್ಟದಲ್ಲಿದೆ. ರಾಜ್ಯದ ಎರಡನೇ ಐಟಿ ಹಬ್‌ ಆಗುವ ಎಲ್ಲ ಅರ್ಹತೆ ಮತ್ತು ಅವಕಾಶ ಹೊಂದಿರುವ ಮಂಗಳೂರು ಈ ಕ್ಷೇತ್ರಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಬೇಕಿದೆ.

ಮಂಗಳೂರು: ಕೋವಿಡ್ ವೈರಸ್‌ ಉದ್ಯೋಗಾವಕಾಶಗಳ ಮೇಲೆ ತೀವ್ರ ಹೊಡೆತ ನೀಡಿದೆ. ಆರ್ಥಿಕತೆಯ ಆಧಾರಸ್ತಂಭಗಳು ಹಿನ್ನಡೆ ಅನುಭವಿಸಿವೆ. ಈ ಪರಿಸ್ಥಿತಿಯಲ್ಲಿ ಆರ್ಥಿಕತೆಯ ಸುಧಾರಣೆ ಹಾಗೂ ಉದ್ಯೋಗಾವಕಾಶ ಕ್ಷೇತ್ರಗಳತ್ತ ಒತ್ತು ನೀಡುವುದು ಅವಶ್ಯ. ಐಟಿಬಿಟಿ ಗಣನೀಯ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತಿರುವ ಕ್ಷೇತ್ರ. ದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿದೇಶಿ ವಿನಿಮಯವನ್ನು ತರುತ್ತಿದೆ. ಸದ್ಯಕ್ಕೆ ಸ್ವಲ್ಪ ಸ್ಲೋಡೌನ್‌ ಇದೆಯಾದರೂ ವ್ಯವಹಾರಗಳು ಹೆಚ್ಚು ಡಿಜಿಟಿಲೀಕರಣದತ್ತ ಪರಿವರ್ತನೆಗೊಳ್ಳುವುದು ಅನಿವಾರ್ಯ ಎನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ವೇಗವನ್ನು ಪಡೆದುಕೊಳ್ಳಲಿದೆ.

ಮಂಗಳೂರಿನಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್‌ ಸೇರಿದಂತೆ 30 ರಿಂದ 2,500ರ ವರೆಗೆ ಉದ್ಯೋಗಿಗಳು ಕೆಲಸ ಮಾಡುವ 100 ಕ್ಕೂ ಅಧಿಕ ಐಟಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಸ್ವದೇಶದಲ್ಲದೆ ಅಮೆರಿಕ, ಯರೋಪ್‌, ಮಧ್ಯಪ್ರಾಚ್ಯ ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಪ್ರಸ್ತುತ ಚೀನದಿಂದ ಕೆಲವು ದೇಶಗಳು ಭಾರತದತ್ತ ವಲಸೆ ಬರಲು ಒಲವು ತೋರ್ಪಡಿಸುತ್ತಿವೆ. ಇದು ಸಾಧ್ಯವಾದರೆ ಭಾರತ ಔದ್ಯೋಗಿಕವಾಗಿ ಪ್ರಗತಿ ಸಾಧಿಸಲಿದೆ. ಇವುಗಳಿಗೆ ಪೂರಕವಾಗಿ ಅನೇಕ ಉಪ ಉದ್ದಿಮೆಗಳು ಪ್ರವರ್ಧಮಾನಕ್ಕೆ ಬರಲಿವೆ. ಇದರಲ್ಲಿ ಐಟಿ ಉದ್ಯಮವು ಸೇರಿದೆ. ಇದರ ಲಾಭವನ್ನು ಮಂಗಳೂರು ಕೂಡ ಪಡೆಯಲು ಪೂರಕವಾದ ವ್ಯವಸ್ಥೆ ರೂಪುಗೊಳ್ಳಬೇಕಾಗಿದೆ.

ಕೋವಿಡ್ ಹಾವಳಿ ಕಾಣಿಸಿಕೊಂಡ ಬಳಿಕ ಐಟಿ ಕಂಪೆನಿಗಳು ವರ್ಕ್‌ ಫ್ರಂ ಹೋಂ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಕಂಪೆನಿಗಳು ಈ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲು ಒಲವು ತೋರ್ಪಡಿಸುತ್ತಿವೆ. ಕೊರೊನಾ ಪರಿಣಾಮದಿಂದ ಐಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತಲ್ಲಣ ಕಾಣಿಸಿಕೊಂಡಿವೆ. ಹೆಚ್ಚು ರಾಷ್ಟ್ರಗಳು ಐಟಿ ಬಜೆಟ್‌ಗಳನ್ನು ಕಡಿಮೆ ಮಾಡುತ್ತಿವೆ. ಅಧ್ಯಯನ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ಐಟಿ ಕಂಪೆನಿಗಳು ಶೇ.10 ರಿಂದ 15ರಷ್ಟು ಪ್ರಗತಿ ಸಾಧಿಸುತ್ತಾ ಬಂದಿವೆ. ಆದರೆ ಈ ವರ್ಷ ಕೊರೊನಾದಿಂದಾಗಿ ಇದು ಶೇ. 5 ಅಥವಾ ಶೇ. ಮೈನಸ್‌ 5 ಆಗಬಹುದು ಎಂದು ಅಂದಾಜಿಸಲಾಗಿದೆ.

ಐಟಿ ಬಜೆಟ್‌ಗಳಲ್ಲಿ ಕಡಿಮೆ ಆದರೂ ಮೂಲ ಕೆಲಸಗಳನ್ನು ಮಾಡಲೇಬೇಕಾಗುತ್ತದೆ. ವಿದೇಶಿ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ವೆಚ್ಚ ಇರುವುದರಿಂದ ಇವುಗಳು ಭಾರತದ ಪಾಲಾಗಬಹುದು ಎಂಬ ಲೆಕ್ಕಚಾರವೂ ಇದೆ.

ಬೆಂಗಳೂರು ಬಿಟ್ಟರೆ ರಾಜ್ಯದ 2ನೇ ಐಟಿ ಹಬ್‌ ಆಗುವ ಎಲ್ಲ ಅರ್ಹತೆ ಮತ್ತು ಅವಕಾಶಗಳನ್ನು ಮಂಗಳೂರು ಹೊಂದಿದೆ. ಇನ್ಫೋಸಿಸ್‌, ಕಾಗ್‌°ನಿಜೆಂಟ್‌ ಗ್ಲೋಬಲ್‌ ಸರ್ವಿಸಸ್‌ ಪ್ರೈ.ಲಿ., ದಿಯಾ ಸಿಸ್ಟಮ್ಸ್‌ ಪ್ರೈ.ಲಿ., ಎಂಸೋರ್ಸ್‌ ಲಿ., ಎಂಪಾಸಿಸ್‌, ಇನ್‌ವೆಂಜರ್‌ ಟೆಕ್ನಾಲಜೀಸ್‌ ಪ್ರೈ.ಲಿ., ಬೋಳಾಸ್‌ ಇಂಟೆಲ್ಲಿ ಸೊಲ್ಯೂಶನ್‌ ಪ್ರೈ.ಲಿ., ಅಟ್ಲಾಂಟಿಕ್‌ ಡಾಟಾ ಬ್ಯೂರೋ ಸರ್ವಿಸಸ್‌ ಪ್ರೈ.ಲಿ. ಮುಂತಾದವುಗಳು ಮಂಗಳೂರಿನ ಪ್ರಮುಖ ಐಟಿ ರಫ್ತು ಕಂಪೆನಿಗಳಾಗಿವೆ. ಮುಡಿಪು ಪ್ರದೇಶದಲ್ಲಿ ಇನ್ಫೋಸಿಸ್‌ ವಿಶಾಲ ಮತ್ತು ಸುಸಜ್ಜಿತ ಘಟಕವನ್ನು ಹೊಂದಿದೆ.

ಬೆಂಗಳೂರಿಗೆ ಹೋಲಿಸಿದರೆ ಮಂಗಳೂರಿ ನಲ್ಲಿ ಮಾನವ ಸಂಪನ್ಮೂಲ ವೆಚ್ಚ ( ವೇತನ ಹಾಗೂ ಇತರ ಸವಲತ್ತುಗಳು) ಶೇ.30ರಷ್ಟು ಕಡಿಮೆ. ಉತ್ತಮ ಟೆಲಿಕಾಂ ಸೌಲಭ್ಯಗಳು, ಡಾಟಾ ಕಮ್ಯೂನಿಕೇಶನ್‌ ಸೌಲಭ್ಯಗಳಿವೆ. ವಿಮಾನ ನಿಲ್ದಾಣ, ರೈಲು ,ರಸ್ತೆ ಸೇರಿದಂತೆ ಉತ್ತಮ ಸಂಚಾರ ಸೌಕರ್ಯಗಳಿವೆ. ಐಟಿ ಉದ್ಯಮಗಳಿಗೆ ಉತ್ತೇಜನ ನೀಡಲು ಸಾಫ್ಟ್‌ವೇರ್‌ ಪಾರ್ಕ್‌ ಟೆಕ್ನಾಲಜಿ ಪಾರ್ಕ್ಸ್ ಆಫ್‌ ಇಂಡಿಯಾ (ಎಸ್‌ಟಿಪಿಐ) ಕೇಂದ್ರ ಕಾರ್ಯಾಚರಿಸುತ್ತಿದೆ.

ವಸ್ತುಸ್ಥಿತಿ
ಐಟಿ ಕ್ಷೇತ್ರದ ಪರಿಣಿತರು ಮಂಗಳೂರಿನತ್ತ ಆಕರ್ಷಿಸುವ ನಿಟ್ಟಿನಲ್ಲಿ ಐಟಿ ಇಕೋ ವ್ಯವಸ್ಥೆ ಹಾಗೂ ಐಟಿ ಪಾರ್ಕ್‌ ಸ್ಥಾಪನೆಗೊಳ್ಳಬೇಕಿದೆ. ಮಂಗಳೂರಿನ ಮೇರಿಹಿಲ್‌ ಕಿಯೊನಿಕ್ಸ್‌ಗೆ ಸೇರಿದ ಜಾಗವಿದೆ. ಇಲ್ಲಿ ಐಟಿ ಪಾರ್ಕ್‌ನ್ನು ಸ್ಥಾಪಿಸುವ ಪ್ರಸ್ತಾವ ರೂಪುಗೊಳ್ಳುತ್ತಿದೆ. ನಮ್ಮ ಜಿಲ್ಲೆಯವರಾದ ಹರಿಕೃಷ್ಣ ಬಂಟ್ವಾಳ ಪ್ರಸ್ತುತ ಕಿಯೋನಿಕ್ಸ್‌ ಅಧ್ಯಕ್ಷರಾಗಿದ್ದು, ಈ ಅವಕಾಶವನ್ನು ಬಳಸಿಕೊಳ್ಳಬಹುದು. ಐಟಿ ಪಾರ್ಕ್‌ ಸ್ಥಾಪನೆಯಾದರೆ ಇಲ್ಲಿ ಆನೇಕ ಐಟಿ ಕಂಪೆನಿಗಳಿಗೆ ತಮ್ಮ ಘಟಕಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.

ಆಗಬೇಕಾಗಿರುವುದು
ಮಂಗಳೂರಿನಲ್ಲಿ ಐಟಿ ಇಕೋ ವ್ಯವಸ್ಥೆ ಬೆಳೆದರೆ ಪ್ರಮುಖ ಕಂಪೆನಿಗಳು ಐಟಿ ಉಪಕೇಂದ್ರಗಳಲ್ಲಿ ಇದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಮಂಗಳೂರಿನಲ್ಲಿ ತಮ್ಮ ಉಪಕಚೇರಿಗಳನ್ನು ಸ್ಥಾಪಿಸಿ ಐಟಿ ತಂತ್ರಜ್ಞರನ್ನು ಇಲ್ಲಿ ನಿಯುಕ್ತಿಗೊಳಿಸಲು ಅನುಕೂಲವಾಗುತ್ತದೆ.
ಇದು ಸಾಧ್ಯವಾಗಬೇಕಾದರೆ ಇಲ್ಲಿ ಅತ್ಯುತ್ತಮ ನೆಟ್‌ವರ್ಕ್‌ ಸೌಲಭ್ಯ, ಹೆಚ್ಚು ಸಾಮರ್ಥ್ಯದ ಬ್ಯಾಂಡ್‌ವಿಡ್‌¤ ಸೌಲಭ್ಯ, ಅಡೆತಡೆ ಇಲ್ಲದ ವಿದ್ಯುತ್‌ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಪ್ರಸ್ತುತ ಐಟಿ.ಕಾಂ. ಮುಂತಾದ ಐಟಿ ಸಮಾವೇಶಗಳನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ. ಇವುಗಳನ್ನು ಮಂಗಳೂರಿ ನಲ್ಲೂ ನಡೆಸುವ ಬಗ್ಗೆ ಗಮನ ಹರಿಸಬೇಕು.

ಐಟಿ ಇಕೋ ಸಿಸ್ಟಂ ಅಗತ್ಯ
ಮಂಗಳೂರಿನಲ್ಲಿ ಐಟಿ ಉದ್ಯಮಗಳಿಗೆ ಪೂರಕ ವಾತಾವರಣವಿದೆ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದಕ್ಕೆ ಜಿಲ್ಲೆಯಲ್ಲಿ ಐಟಿ ಇಕೋ ಸಿಸ್ಟಂ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಐಟಿ ಪಾರ್ಕ್‌ ಸ್ಥಾಪನೆ ಮಾಡಬೇಕು ಎಂಬುದಾಗಿ ಹಲವು ವರ್ಷಗಳಿಂದ ಬೇಡಿಕೆ. ಇದೆ. ಇದು ಸ್ಥಾಪನೆಯಾದರೆ ಐಟಿ ಉದ್ಯಮಗಳಿಗೆ ಅವಶ್ಯವಿರುವ ಮೂಲಸೌಕರ್ಯಗಳು ಬರಲು ಸಾಧ್ಯವಾಗುತ್ತದೆ. ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು.
 – ಕಿರಣ್‌ಚಂದ್‌, ಕೆಸಿಸಿಐ ಐಟಿ ಉಪಸಮಿತಿ ಅಧ್ಯಕ್ಷರು

ಅಂಕಿ ಅಂಶ
ಮಂಗಳೂರಿನಲ್ಲಿ ಐಟಿ ಕಂಪೆನಿ 110
ಉದ್ಯೋಗಿಗಳು (ಅಂದಾಜು) 12,000′
ಐಟಿ ಎಸ್‌ಇಝಡ್‌ 1

ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಟಿ ಉದ್ಯಮಗಳಿಗೆ ಉತ್ತಮ ಅವಕಾಶವಿದೆ. ಇದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಐಟಿ ಸ್ನೇಹಿ ವ್ಯವಸ್ಥೆ ರೂಪುಗೊಳ್ಳಬೇಕು. ಸರಕಾರ ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ಐಟಿ ಪಾರ್ಕ್‌ ಪ್ರಸ್ತಾವ ಮಾಡುತ್ತ ಬಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯ ನಿಟ್ಟಿನಲ್ಲಿ ಈ ಪ್ರಸ್ತಾವವನ್ನು ಕಾರ್ಯಗತಗೊಳಿಸಲು ಕ್ರಮ ವಹಿಸಬೇಕು.

ಮಂಗಳೂರಿನಲ್ಲಿ ಐಟಿ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವುಗಳಿಗೆ ನಿರ್ದಿಷ್ಟ ಅವಧಿಯವರೆಗೆ ತೆರಿಗೆ ರಜೆ ಸೌಲಭ್ಯ ನೀಡಬೇಕು. ಇದರಿಂದ ಹೆಚ್ಚು ಐಟಿ ಉದ್ಯಮಗಳು ಮಂಗಳೂರಿಗೆ ಬರಲು ಸಾಧ್ಯವಾಗುತ್ತದೆ.

ಜಿಲ್ಲೆಯಲ್ಲಿ ಇಂಟರ್‌ನೆಟ್‌ ಬ್ಯಾಂಡ್‌ವಿಡ್‌¤ ಸಾಮರ್ಥ್ಯವನ್ನು ಹೆಚ್ಚಿಸಬೇಕು ಹಾಗೂ ಇನ್ನಷ್ಟು ಸೌಲಭ್ಯವನ್ನು ಅಳವಡಿಸಬೇಕು. ಇದರಿಂದಾಗಿ ಐಟಿ ಕಂಪೆನಿಗಳಿಗೆ ವರ್ಕ್‌ ಫ್ರಂ ಹೋಂ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ವಿದೇಶಗಳಿಗೆ ರಫ್ತು ಮಾಡುವ ಸಣ್ಣ ಐಟಿ ಕಂಪೆನಿಗಳಿಗೆ ಮಾರ್ಗದರ್ಶನ, ಉತ್ತೇಜನ , ವಿದೇಶಿ ಹಣ ವಿನಿಮಯ ಮುಂತಾದುವುಗಳಿಗೆ ನೆರವು ನೀಡಲು ಉಪ ಕಚೇರಿ ಮಂಗಳೂರಿನಲ್ಲಿ ಸ್ಥಾಪನೆಯಾದರೆ ಹೆಚ್ಚು ಸಹಕಾರಿಯಾಗುತ್ತದೆ.

ಮುಂದಿನ ದಿನಗಳಲ್ಲಿ ಮಂಗಳೂರು ನಗರ ಐಟಿ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ನಾಸ್ಕಾಂ ಮಂಗಳೂರಿಗೂ ಆದ್ಯತೆ ನೀಡಬೇಕು. ಐಟಿ.ಕಾಂನಂತಹ ಸಮಾವೇಶಗಳನ್ನು ಮಂಗಳೂರಿನಲ್ಲೂ ಆಯೋಜಿಸಬೇಕು.

 ಉದಯವಾಣಿ ಅಧ್ಯಯನ ತಂಡ

ಟಾಪ್ ನ್ಯೂಸ್

IPL 2024: Pant has the ambition to become India’s cricket captain: Parth Jindal

IPL 2024: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

IPL 2024: Pant has the ambition to become India’s cricket captain: Parth Jindal

IPL 2024: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.