ಬೀದರನಲ್ಲಿ ಮತ್ತೆ 17 ಮಂದಿಗೆ ಸೋಂಕು
Team Udayavani, Jul 14, 2020, 2:12 PM IST
ಬೀದರ: ಬೀದರ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಾರದೇ ಹೆಮ್ಮಾರಿ ಕೋವಿಡ್ ಸೋಂಕು ಹೆಚ್ಚುತ್ತಲೇ ಇದ್ದು, ಸೋಮವಾರ 17 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1055ಕ್ಕೆ ಏರಿಕೆ ಆಗಿದೆ.
ಹೊಸ 17 ಪ್ರಕರಣಗಳಲ್ಲಿ 7 ಪಾಸಿಟಿವ್ ಪ್ರಕರಣಗಳ ಸಂಪರ್ಕವೇ ಇನ್ನೂ ಪತ್ತೆಯಾಗಿಲ್ಲ ಎಂಬುದು ಆತಂಕದ ವಿಷಯ. ಇನ್ನುಳಿದ 4 ಕೇಸ್‌ಗಳು ಸೋಂಕಿತರ ಸಂಪರ್ಕದಿಂದ ಹಾಗೂ 6 ಪ್ರಕರಣಗಳು ತೀವ್ರ ಉಸಿರಾಟದ ತೊಂದರೆಯಿಂದ ಪತ್ತೆಯಾಗಿವೆ. 11 ಜನ ಸೋಂಕಿತರು ಬೀದರ ನಗರದವರೇ ಆಗಿದ್ದಾರೆ. ಬೀದರನ ಜೈಲ್ ಕಾಲೋನಿ 3, ಬೀದರ ನಗರ-2 ವಿದ್ಯಾನಗರ, ಜೈಲ್ ಕಾಲೋನಿ, ಗಾಂಧಿನಗರ, ಗುಂಪಾ, ನೌಬಾದ್, ಬ್ರಿಮ್ಸ್ ಆಸ್ಪತ್ರೆ, ಲಾಡಗೇರಿ ಪ್ರದೇಶದಲ್ಲಿ ತಲಾ 1, ತಾಲೂಕಿನ ಚಾಂಬೋಳ 1, ಮಂದಕನಳ್ಳಿ 1 ಕೇಸ್‌ಗಳು ಪತ್ತೆಯಾಗಿವೆ. ಭಾಲ್ಕಿ ತಾಲೂಕಿನ ವರವಟ್ಟಿ, ಔರಾದ ಪಟ್ಟಣ, ಮುಸ್ತಾಪುರ ಹಾಗೂ ಚಿಟಗುಪ್ಪ ತಾಲೂಕಿನ ಬೇಮಳಖೇಡಾದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ1055 ಆದಂತಾಗಿದ್ದು, ಈ ಪೈಕಿ 53 ಜನರು ಸಾವನ್ನಪ್ಪಿದ್ದರೆ 613 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 389 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಒಟ್ಟಾರೆ 43,487 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 39,304 ಮಂದಿಯದ್ದು ನೆಗೆಟಿವ್ ಬಂದಿದೆ. ಇನ್ನೂ 3128 ಜನರ ವರದಿ ಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.