ಮಂಕಿ: 7 ಸೆಂ.ಮೀ. ಮಳೆ: ಕರಾವಳಿಯಲ್ಲಿ ಜು.15ರಿಂದ 18ರವರೆಗೆ ಎಲ್ಲೊ ಅಲರ್ಟ್
Team Udayavani, Jul 15, 2020, 6:12 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಮಂಗಳವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿತ್ತು.
ಕರಾವಳಿಯ ಎಲ್ಲೆಡೆ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 7 ಸೆಂ.ಮೀ. ಮಳೆಯಾಗಿದ್ದು, ಇದು ರಾಜ್ಯದ ಗರಿಷ್ಠವಾಗಿತ್ತು.
ಇದೇ ಅವಧಿಯಲ್ಲಿ ವಿವಿಧೆಡೆ ಸುರಿದ ಮಳೆ ಪ್ರಮಾಣ ಹೀಗಿದೆ (ಸೆಂ.ಮೀ.ಗಳಲ್ಲಿ):
ಉಡುಪಿ 6, ಕೋಟ, ಕಾರ್ಕಳ, ಆಗುಂಬೆ ತಲಾ 5, ಪಣಂಬೂರು, ಸುಬ್ರಹ್ಮಣ್ಯ, ಕೊಲ್ಲೂರು, ಕುಂದಾಪುರ, ಸಿದ್ದಾಪುರ, ಶಿರಾಲಿ, ಹೊನ್ನಾವರ ತಲಾ 4, ಮೂಡುಬಿದಿರೆ, ಮೂಲ್ಕಿ, ಬಜಪೆ, ಬೆಳ್ತಂಗಡಿ, ಮಾಣಿ, ಪುತ್ತೂರು, ಕಾರವಾರ, ಶಿಕಾರಿಪುರ ತಲಾ 3, ಮಂಗಳೂರು, ಸುಳ್ಯ, ಭಟ್ಕಳ, ಗೋಕರ್ಣ, ಕುಮಟಾ, ಅಂಕೋಲಾ, ಭಾಗಮಂಡಲ, ತೀರ್ಥಹಳ್ಳಿ, ಶೃಂಗೇರಿ ತಲಾ 2, ಧರ್ಮಸ್ಥಳ, ಉಪ್ಪಿನಂಗಡಿ, ಮೂರ್ನಾಡು, ಲಿಂಗನಮಕ್ಕಿ, ಸಾಗರ, ಅರಸಾಳು, ಹುಂಚದಕಟ್ಟೆ, ಕಳಸ, ಜಯಪುರ, ಕಮ್ಮರಡಿ, ಕೊಪ್ಪ ತಲಾ 1.
ಗುರುವಾರ ಮುಂಜಾನೆಯವರೆಗಿನ 48 ತಾಸುಗಳ ಅವಧಿಯಲ್ಲಿ ರಾಜ್ಯದ ಎಲ್ಲೆಡೆ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
ಕರಾವಳಿಯಲ್ಲಿ ಜು.15ರಿಂದ 18ರವರೆಗೆ ಎಲ್ಲೊ ಅಲರ್ಟ್ ಹಾಗೂ ಜು. 19ರಂದು ಆರೆಂಜ್ ಅಲರ್ಟ್ ಘೋಷಿಸಿದೆ. ಕಡಲು ಪ್ರಕ್ಷುಬ್ಧವಿರಲಿದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.