ಮಂಡ್ಯ: ಮತ್ತೆ 38 ಮಂದಿಗೆ ಸೋಂಕು
Team Udayavani, Jul 15, 2020, 8:47 AM IST
ಮಂಡ್ಯ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 38 ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 756ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಮಂಡ್ಯ, ಕೆ.ಆರ್.ಪೇಟೆ ತಾಲೂಕಿಗೆ ಬಂದಿದ್ದ 3 ಮಂದಿ, ಬೆಂಗಳೂರಿನಿಂದ ಬಂದಿದ್ದ 7, ಮೈಸೂರು ಜಿಲ್ಲೆಯಿಂದ ಬಂದಿದ್ದ 5 ಮಂದಿ, ರಾಮನಗರದಿಂದ ಮಂಡ್ಯ ತಾಲೂಕಿಗೆ ಬಂದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಮಂಡ್ಯ ತಾಲೂಕಿನಲ್ಲಿ ಪ್ರಥಮ ಸಂಪರ್ಕಿತರಿಂದ 4 ಮಂದಿ, ಮದ್ದೂರು ತಾಲೂಕಿನಲ್ಲಿ ಪ್ರಥಮ ಸಂಪರ್ಕಿತರಿಂದ 5, ಮಳವಳ್ಳಿ, ಪಾಂಡವಪುರ, ನಾಗಮಂಗಲ ತಾಲೂಕಿನ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಮಂಡ್ಯ ತಾಲೂಕಿನ 7 ಮಂದಿ, ಕೆ.ಆರ್. ಪೇಟೆ ತಾಲೂಕಿನ ಒಬ್ಬರು, ಹಾಸನ ಜಿಲ್ಲೆಯ ಇಬ್ಬರು ಸೋಂಕಿತರು ಮಂಡ್ಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ 28 ಮಂದಿ ಬಿಡುಗಡೆಯಾಗಿದ್ದು, ಶ್ರೀರಂಗಪಟ್ಟಣದ 12, ಮಂಡ್ಯ, ಮಳವಳ್ಳಿ= ತಾಲೂಕಿನ ತಲಾ 6 ಮಂದಿ, ಮದ್ದೂರಿನ ಇಬ್ಬರು, ನಾಗಮಂಗಲ, ಮೈಸೂರು ಜಿಲ್ಲೆಯ ತಲಾ ಒಬ್ಬರು ಗುಣಮುಖವಾಗಿದ್ದಾರೆ. 201 ಸೋಂಕಿತರು ಐಸೋಲೇಶನ್‌ನಲ್ಲಿ ಇದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Punjalkatte: ಗುಂಡಿಗಳು ಸಾರ್ ಗುಂಡಿಗಳು
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Ramayana: ಎರಡು ಭಾಗಗಳಾಗಿ ಬರಲಿದೆ ಬಿಗ್ ಬಜೆಟ್ ʼರಾಮಾಯಣʼ; ರಿಲೀಸ್ ಡೇಟ್ ಅನೌನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.