ಪುತ್ತೂರು: ಕ್ರಿಕೆಟ್ ವಿಚಾರಕ್ಕೆ ಹೊಡೆದಾಟ-ಚಾಕುವಿನಿಂದ ಇರಿತ, ಹಲವರು ಆಸ್ಪತ್ರೆಗೆ ದಾಖಲು
Team Udayavani, Jul 15, 2020, 10:14 AM IST
ಪುತ್ತೂರು: ಕ್ರಿಕೆಟ್ ಆಡುತ್ತಿದ್ದ ಎರಡು ತಂಡಗಳ ನಡುವೆ ಮೈದಾನದ ನಡುವೆ ಆರಂಭವಾದ ಮಾತಿನ ಚಕಮಕಿ ತಾರಕಕ್ಕೇರಿ, ಅಂಗಡಿಯೊಂದರ ಬಳಿ ಹೊಡೆದಾಟಕ್ಕೆ ತಿರುಗಿ ವ್ಯಕ್ತಿಯೊಬ್ಬರು ಕೋಳಿ ಚಾಕುವಿನಿಂದ ಇರಿದ ಘಟನೆ ಜು.13 ರ ತಡರಾತ್ರಿ ಬಲ್ನಾಡಿನಲ್ಲಿ ನಡೆದಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ನಾಡುವಿನ ಸಮೀಪ ಸುಲ್ತಾನ್ ಸ್ಟೋರ್ ಬಳಿ ಪ್ರಕರಣ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇತ್ತಂಡಗಳ ಒಟ್ಟು ಐವರು ಪುತ್ತೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಲ್ನಾಡು ಜನತಾ ಕಾಲನಿ ನಿವಾಸಿ ಸವಾದ್ ಅವರು ಇರಿತಕ್ಕೆ ಒಳಗಾಗಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮನ್ಸೂರ್, ಮುಸ್ತಾಫ, ಅಬ್ಬಾಸ್, ಸೈಯದ್ ಎಮಬುವವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬಲ್ನಾಡು ನಿವಾಸಿಯಾಗಿರುವ ದಿನೇಶ್, ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಲ್ನಾಡು ಸಮೀಪ ಪ್ರತಿ ರವಿವಾರ ಕ್ರಿಕೆಟ್ ಆಡಲಾಗುತ್ತಿತ್ತು. ಜು.12ರ ಭಾನುವಾರದಂದು ಅಲ್ಲಿ ಒಂದು ಸಮುದಾಯಕ್ಕೆ ಸೇರಿದ ಯುವಕರು ಕ್ರಿಕೆಟ್ ಆಡುತಿದ್ದರು ಎನ್ನಲಾಗಿದೆ. ಸಂಜೆ ವೇಳೆ ಮತ್ತೊಂದು ಸಮುದಾಯಕ್ಕೆ ಸೇರಿದ ಯುವಕರ ತಂಡವೂ ಅಲ್ಲಿ ಕ್ರಿಕೆಟ್ ಆಡಲು ಬಂದಿದೆ. ಆಟದ ಮಧ್ಯೆ ಇತ್ತಂಡಗಳ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮೈದಾನದಲ್ಲಿ ನಡೆಯುತ್ತಿದ್ದ ಚಕಮಕಿ ತಾರಕಕ್ಕೇರಿದ ಕಾರಣ ಘಟನೆ ಸ್ಥಳೀಯ ನಿವಾಸಿಗಳ ಗಮನಕ್ಕೂ ಬಂದಿದೆ. ಸ್ವಲ್ಪ ಸಮಯದ ಬಳಿಕ ಗಲಾಟೆ ತಹಬದಿಗೆ ಬಂದು ಎರಡು ತಂಡದ ಸದಸ್ಯರು ಅಲ್ಲಿಂದ ತೆರಳಿದ್ದರು.
ಜು.13ರಂದು ರಾತ್ರಿ ವೇಳೆ ಈ ಎರಡೂ ತಂಡಗಳ ಕೆಲ ಆಟಗಾರರ ಮಧ್ಯೆ ಹಾಗೂ ಅವರ ಪರವಾಗಿ ಸೇರಿದ ಎರಡು ತಂಡದ ಕೆಲ ಯುವಕರ ನಡುವೆ ಅಲ್ಲಿನ ಸುಲ್ತಾನ್ ಸ್ಟೋರ್ ಸಮೀಪ ವಾಗ್ವಾದ ನಡೆದಿದೆ. ಅದು ತಾರಕಕ್ಕೇರಿ ಹೊಡೆದಾಟಕ್ಕೆ ತಿರುಗಿದೆ.
ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.