ಹೊನ್ನಾವರದಲ್ಲಿ ಆರು ಜನರಿಗೆ ಸೋಂಕು
Team Udayavani, Jul 15, 2020, 10:28 AM IST
ಹೊನ್ನಾವರ: ಮಂಗಳವಾರ ದುರ್ಗಾಕೇರಿಯಲ್ಲಿರುವ 29 ಮತ್ತು 27 ವರ್ಷದ ಇಬ್ಬರು ಐಆರ್‌ಬಿ ಕಾರ್ಮಿಕರಿಗೆ ಮತ್ತು ಹಳದೀಪುರ ಕರಿಮೂಲೆಯ 36 ವರ್ಷದ ಮತ್ತು ಚಂಡೇಶ್ವರದ 24 ವರ್ಷದವರಿಗೆ, ಕಮಟೆಹಿತ್ತಲಿನ 34 ಯುವಕ ಮತ್ತು 28 ವರ್ಷದ ಮಹಿಳೆಗೆ ಕೋವಿಡ್ ಸೋಂಕು ಕಂಡುಬಂದಿದೆ.
ತಹಶೀಲ್ದಾರ್ ವಿವೇಕ ಶೇಣ್ವಿ ಪತ್ರಿಕಾ ಹೇಳಿಕೆ ನೀಡಿದ್ದು, ನಿತ್ಯ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದರಿಂದ ಹೊನ್ನಾವರಕ್ಕೆ ಮೂರು ದಿನ ಅಥವಾ ಅದಕ್ಕಿಂತ ಹೆಚ್ಚು ಅವಧಿ ವಾಸ್ತವ್ಯ ಮಾಡಲು ಹೊರ ಜಿಲ್ಲೆಯಿಂದ ಆಗಮಿಸುವ ಎಲ್ಲ ವ್ಯಕ್ತಿಗಳಿಗೆ ಬಂದಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಜ್ವರ ತಪಾಸಣೆ ಮಾಡಲಾಗುವುದು. ಇದನ್ನು ಉಲ್ಲಂಘಿಸಿದವರಿಗೆ 14 ದಿನ ಕಡ್ಡಾಯ ಗೃಹ ಕ್ವಾರಂಟೈನ್ ವಿಧಿಸಲಾಗುವುದಲ್ಲದೇ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು. ಹೊರ ಜಿಲ್ಲೆ ಹಾಗೂ ಹೊರ ದೇಶ, ರಾಜ್ಯಗಳಿಂದ ಬರುವ ವ್ಯಕ್ತಿಗಳು 7 ದಿನ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಬೇಕು. ಗಂಟಲು ದ್ರವ ಪರೀಕ್ಷೆಗೆ ಒಳಪಡುವವರು ವರದಿ ಬರುವವರೆಗೆ ಮನೆಯಲ್ಲಿ ಇರಬೇಕು. ಸಾರ್ವಜನಿಕ ಸ್ಥಳದಲ್ಲಿ ಅವರು ಓಡಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಇಂಥವರನ್ನು ಕಂಡರೆ ಸಾರ್ವಜನಿಕರು 08387-220262ಗೆ ಫೋನ್ ಮಾಡಿ ದೂರು ದಾಖಲಿಸಲು ಕೋರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.