ಇಂಗ್ಲಂಡ್ – ವೆಸ್ಟ್ ವಿಂಡೀಸ್ ಸೆಕೆಂಡ್ ಟೆಸ್ಟ್ : ವಿಂಡೀಸಿಗೆ ಆರಂಭಿಕ ಮೇಲುಗೈ
Team Udayavani, Jul 17, 2020, 6:15 AM IST
ಮ್ಯಾಂಚೆಸ್ಟರ್: ಮಳೆಯಿಂದಾಗಿ ಒಂದೂವರೆ ಗಂಟೆಯಷ್ಟು ಕಾಲ ವಿಳಂಬವಾಗಿ ಆರಂಭಗೊಂಡ ಮ್ಯಾಂಚೆಸ್ಟ್‌ರ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಆರಂಭಿಕ ಮೇಲುಗೈ ಸಾಧಿಸಿದೆ.
ಇಂಗ್ಲೆಂಡ್ ಚಹಾ ವಿರಾಮದ ವೇಳೆ 3 ವಿಕೆಟಿಗೆ 207 ರನ್ ಗಳಿಸಿದೆ.
ಮೊದಲ ಟೆಸ್ಟ್ ಪಂದ್ಯ ಗೆದ್ದ ಖುಷಿಯಲ್ಲಿದ್ದ ವಿಂಡೀಸ್ ನಾಯಕ ಜಾಸನ್ ಹೋಲ್ಡರ್ ಟಾಸ್ ಗೆದ್ದು ಪ್ರತಿಕೂಲ ವಾತಾವರಣದಲ್ಲಿ ಬೌಲಿಂಗ್ ಆಯ್ದುಕೊಂಡರು.
ಮೊದಲ ಅವಧಿಯಲ್ಲಿ ಸಾಗಿದ್ದು 13.2 ಓವರ್‌ಗಳ ಆಟ ಮಾತ್ರ, ಅದೂ ಫ್ಲಡ್ ಲೈಟ್‌ನಲ್ಲಿ. ಆಗ ಇಂಗ್ಲೆಂಡ್ ಒಂದು ವಿಕೆಟಿಗೆ 29 ರನ್ ಮಾಡಿತ್ತು.
ಸ್ಕೋರ್ 29 ರನ್ ಆದಾಗ ಆರಂಭ ಕಾರ ರೋರಿ ಬರ್ನ್ಸ್ (15) ಅವರನ್ನು ಲೆಗ್ ಬಿಫೋರ್ ಬಲೆಗೆ ಕೆಡವಿದ ರೋಸ್ಟನ್ ಚೇಸ್ ವಿಂಡೀಸಿಗೆ ಮೊದಲ ಯಶಸ್ಸು ತಂದಿತ್ತರು. ಅಲ್ಲಿಗೆ ಲಂಚ್ ಬ್ರೇಕ್ ತೆಗೆದುಕೊಳ್ಳಲಾಯಿತು.
ದ್ವಿತೀಯ ಅವಧಿಯ ಪ್ರಥಮ ಎಸೆತದಲ್ಲೇ ಚೇಸ್ ಮತ್ತೊಂದು ಆಘಾತವಿಕ್ಕಿದರು. ಜಾಕ್ ಕ್ರಾಲಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ನಾಯಕ ರೂಟ್ 23 ರನ್ ಮಾಡಿ ಜೋಸೆಫ್ ಗೆ ವಿಕೆಟ್ ಒಪ್ಪಿಸಿದರು.
ಮೂರೂ ವೇಗಿಗಳಿಲ್ಲ!
ಕಳೆದ ಪಂದ್ಯದ ಮೂರೂ ವೇಗಿಗಳನ್ನು ಇಂಗ್ಲೆಂಡ್ ತಂಡದಿಂದ ಹೊರಗಿರಿಸಿದ್ದೊಂದು ಅಚ್ಚರಿ ಎನಿಸಿತು. ಆ್ಯಂಡರ್ಸನ್ ಮತ್ತು ವುಡ್ ಅವರಿಗೆ ವಿಶ್ರಾಂತಿ ನೀಡಿದರೆ, ನಿಯಮ ಉಲ್ಲಂಘಿಸಿದ ಆರ್ಚರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇವರ ಬದಲು ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಮತ್ತು ಸ್ಯಾಮ್ ಕರನ್ ಅವಕಾಶ ಪಡೆದರು. ಜೋ ಡೆನ್ಲಿ ಬದಲು ನಾಯಕ ಜೋ ರೂಟ್ ಬಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.