ಆಂಶಿಕ ಅಂತಾರಾಷ್ಟ್ರೀಯ ಫ್ಲೈಟ್ ಇಂದಿನಿಂದ ಶುರು
Team Udayavani, Jul 17, 2020, 11:54 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೋವಿಡ್ ಹಿನ್ನೆಲೆಯಲ್ಲಿ ಜಾಗತಿಕವಾಗಿ ಪರಿಸ್ಥಿತಿ ಸುಧಾರಿಸುವವರೆಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರ ಇಲ್ಲ. ಆದರೆ, ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಕೆಲವು ದೇಶಗಳ ವಿಮಾನಗಳಿಗೆ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಈ ಮೂಲಕ ಭಾರತದಿಂದ ಆಂಶಿಕವಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ಶುರುವಾದಂತಾಗುತ್ತದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭಾರತ ಈಗಾಗಲೇ ಅಮೆರಿಕ ಹಾಗೂ ಫ್ರಾನ್ಸ್ನೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ವಿಮಾನಯಾನ ಹಾರಾಟ ಒಪ್ಪಂದಕ್ಕೆ ಸಹಿ ಹಾಕಿದೆ. ಇದರನ್ವಯ ಜುಲೈ 18ರಿಂದ ಆಗಸ್ಟ್ 1ರವರೆಗೆ ಏರ್ ಫ್ರಾನ್ಸ್, ದೆಹಲಿ, ಮುಂಬೈ, ಬೆಂಗಳೂರು ಮತ್ತು ಪ್ಯಾರಿಸ್ ನಡುವೆ 28 ವಿಮಾನಗಳ ಹಾರಾಟ ನಡೆಸಲಿದೆ. ಅಮೆರಿಕದ ಯುನೈಟೆಡ್ ಏರ್ಲೈನ್ಸ್, ಜುಲೈ 17ರಿಂದ 31ರವರೆಗೆ ಭಾರತ ಮತ್ತು ಅಮೆರಿಕ ನಡುವೆ 18 ವಿಮಾನಗಳ ಹಾರಾಟ ನಡೆಸಲಿದೆ. ಈ ಅವಧಿಯಲ್ಲಿ ದೆಹಲಿ ಮತ್ತು ನೆವಾರ್ಕ್ (ನ್ಯೂಜೆರ್ಸಿ) ನಡುವೆ ಪ್ರತಿದಿನ ವಿಮಾನ ಹಾರಾಟ ಇರಲಿದೆ. ದೆಹಲಿ ಮತ್ತು ಸ್ಯಾನ್ಫ್ರಾನ್ಸಿಸ್ಕೊ ನಡುವೆ ವಾರಕ್ಕೆ ಮೂರು ಬಾರಿ ವಿಮಾನ ಹಾರಾಟ ನಡೆಸಲಿದೆ. ಏರ್ ಇಂಡಿಯಾ, ಭಾರತದಿಂದ ಫ್ರಾನ್ಸ್ ಮತ್ತು ಅಮೆರಿಕಗಳಿಗೆ ವಿಮಾನ ಹಾರಾಟ ನಡೆಸಲಿದೆ ಎಂದು ಹೇಳಿದರು.
ಶೀಘ್ರವೇ ಜರ್ಮನಿ ಮತ್ತು ಬ್ರಿಟನ್ ಜತೆ ಕೂಡ ದ್ವಿಪಕ್ಷೀಯ ಒಪ್ಪಂದಕ್ಕೆ ಬರಲಾಗು ವುದು. ಇದರನ್ವಯ, ದೆಹಲಿ ಮತ್ತು ಲಂಡನ್ ನಡುವೆ ದಿನಕ್ಕೆ ಎರಡು ವಿಮಾನಗಳು ಹಾರಾಟ ನಡೆಸಲಿವೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.