ಬೆತ್ತಲೆಯಾಗಿ ನರಳಾಡಿದ ಕೋವಿಡ್ ಸೋಂಕಿತ ವೃದ್ಧ: ಡಿಸಿಎಂ ತವರೂರಿನ ವೃದ್ಧನ ನರಳಾಟ
Team Udayavani, Jul 17, 2020, 3:17 PM IST
ಬೆಳಗಾವಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ತವರು ತಾಲೂಕಿನ ಕೋವಿಡ್-19 ಸೋಂಕಿತ ವೃದ್ಧನೋರ್ವ ಬಿಮ್ಸ್ ನ ಕೋವಿಡ್ ಆಸ್ಪತ್ರೆಯಲ್ಲಿ ಬೆತ್ತಲಾಗಿ ನರಳಾಡಿರುವ ಮನಕಲುಕುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ 65 ವರ್ಷದ ವೃದ್ಧ ಕೋವಿಡ್-19 ಸೋಂಕಿತನಾಗಿ ಬಿಮ್ಸ್ ನಲ್ಲಿ ದಾಖಲಾಗಿದ್ದಾನೆ. ಆದರೆ ಬೆಡ್ ಸಿಗದೇ ನೆಲದ ಮೇಲೆ ವೃದ್ಧನಿಗೆ ಬೆಡ್ ಹಾಕಿ ಮಲಗಿಸಲಾಗಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧನಿಗೆ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ. ವೃದ್ಧ ನರಳಾಡುತ್ತಿರುವ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಇಷ್ಟೆಲ್ಲ ವೃದ್ಧ ಬೆತ್ತಲೆಯಾಗಿ ಒದ್ದಾಡುತ್ತಿದ್ದರೂ ವೈದ್ಯರು ಇತ್ತ ನೋಡದೇ, ಕನಿಕರ ತೋರದೇ ಅಮಾನವೀಯವಗಿ ವರ್ತಿಸಿದ್ದಾರೆ.
ಜಿಲ್ಲಾಸ್ಪತ್ರೆ ವೈದ್ಯರು ವೃದ್ಧನಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ. ಬೆಡ್ಗಳ ಕೊರತೆಯಿಂದಗಿ ನೆಲದ ಮೇಲೆ ಮಲಗಿಸಲಾಗಿದೆ. ವೃದ್ಧನಿಗೆ ಐದು ಗಂಟೆಗಳ ಕಾಲ ಸೂಕ್ತ ಚಿಕಿತ್ಸೆ ನೀಡಿಲ್ಲ. ವೃದ್ಧನ ಗಂಟಲು ದ್ರವ ಮಾದರಿ ಪಡೆದು ತಪಾಸಣೆ ಮಾಡಿದಾಗ ಕೋವಿಡ್-19 ಸೋಂಕು ದೃಢಪಟ್ಟಿದೆ.
ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ವೃದ್ಧನಿಗೆ ಚಿಕಿತ್ಸೆ ನೀಡದೇ ಅಮಾನವೀಯವಾಗಿ ವರ್ತಿಸಲಾಗಿದೆ ಎಂದು ವೈದ್ಯರ ವಿರುದ್ಧ ವೃದ್ಧನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.