ಚಿಕ್ಕಬಳ್ಳಾಪುರದಲ್ಲಿ 31 ಕೇಸ್ ಪತ್ತೆ: 608ಕ್ಕೆ ತಲುಪಿದ ಸೋಂಕಿತರು, 22ಮಂದಿ ಡಿಸ್ಚಾರ್ಜ್
Team Udayavani, Jul 17, 2020, 7:29 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ 19 ಅರ್ಭಟ ಮುಂದುವರೆದಿದೆ.
ಶುಕ್ರವಾರ ಮತ್ತೆ 31 ಪಾಸಿಟೀವ್ ಪ್ರಕರಣಗಳು ಕಂಡು ಬರುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 608ಕ್ಕೆ ತಲುಪಿದೆ.
ಗೌರಿಬಿದನೂರಲ್ಲಿ ಸೋಂಕಿತರೊಬ್ಬರು ಚಿಕಿತ್ಸೆ ಫಲಿಸದೇ ಮೃತಪಡುವ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಸಾವಿನ ಸರಣಿ ಮುಂದುವರೆದಿದ್ದು ಈಗಾಗಲೇ ಒಟ್ಟು 18 ಮಂದಿ ಕೋವಿಡ್ 19 ಮಹಾಮಾರಿಗೆ ಬಲಿಯಾಗಿದ್ದಾರೆ.
ಕಳೆದ ಗುರುವಾರ ಬರೋಬ್ಬರಿ 77 ಪಾಸಿಟಿವ್ ಪ್ರಕರಣಗಳು ಕಂಡು ಬಂದು ಸೋಂಕಿತರ ಸಂಖ್ಯೆ 577 ಕ್ಕೆ ಏರಿಕೆ ಕಂಡಿತ್ತು.
ಈಗ ಹೊಸದಾಗಿ 31 ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 608ಕ್ಕೆ ತಲುಪಿದ್ದು ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರು ಸಾವಿರ ಗಡಿ ದಾಟುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿವೆ.
ಜಿಲ್ಲೆಯಲ್ಲಿ 31 ಹೊಸ ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರ ನಗರದಲ್ಲಿ 16, ಬಾಗೇಪಲ್ಲಿ 4, ಚಿಂತಾಮಣಿ 2, ಗುಡಿಬಂಡೆ 2, ಗೌರಿಬಿದನೂರ 6 ಹಾಗೂ ಶಿಡ್ಲಘಟ್ಟದಲ್ಲಿ 1 ಪ್ರಕರಣ ಕಂಡುಬಂದಿದೆ.
ಒಟ್ಟಾರೆ ಪ್ರಕರಣಗಳಲ್ಲಿ ಚಿಕ್ಕಬಳ್ಳಾಪುರ ಮುಂದಿದ್ದು ಇಲ್ಲಿ ಒಟ್ಟು 219 ಪ್ರಕರಣಗಳು ಕಂಡುಬಂದಿವೆ. ಇದರ ನಡುವೆ ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ 22 ಮಂದಿ ಕೋವಿಡ್ 19 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ ಇದುವರೆಗೂ 316 ಮಂದಿ ಡಿಸ್ಚಾರ್ಜ್ ಆಗಿದ್ದು ಜಿಲ್ಲೆಯಲ್ಲಿ ಇನ್ನೂ 273 ಸಕ್ರಿಯ ಪ್ರಕರಣಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.