ವೃದ್ಧೆ ಮೇಲೆ ಮಗ, ಮೊಮ್ಮಗನ ಅಮಾನುಷ ಹಲ್ಲೆ: ಆರೋಪಿಗಳು ವಶಕ್ಕೆ ; ಸ್ವಯಂಪ್ರೇರಿತ ದೂರು ದಾಖಲು
Team Udayavani, Jul 17, 2020, 9:07 PM IST
ಮಗ ಮತ್ತು ಮೊಮ್ಮಗನಿಂದ ಹಲ್ಲೆಗೊಳಗಾದ ಅಜ್ಜಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಸ್ಥಳಿಯರು.
ಬೆಳ್ತಂಗಡಿ: ಅನಾರೋಗ್ಯ ಪೀಡಿತ ವಯೋವೃದ್ಧೆ ಮೇಲೆ ಮಗ ಮತ್ತು ಮೊಮ್ಮಗ ಹಿಂಸಾತ್ಮಕವಾಗಿ ಹಲ್ಲೆ ನಡೆಸಿರುವ ವಿಡಿಯೋವೊಂದು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಈ ವಿಚಾರವಾಗಿ ಆರೋಪಿಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ಸವಣಾಲು ಗ್ರಾಮದ ಹಲಸಿನಕಟ್ಟೆ 5 ಸೆನ್ಸ್ ನಿವಾಸಿ ವಯೋವೃದ್ಧೆ ಅಪ್ಪಿ ಶೆಡ್ತಿ (70) ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಾದ ಮಗ ಶ್ರೀನಿವಾಸ ಶೆಟ್ಟಿ, ಮೊಮ್ಮಗ ಪ್ರದೀಪ ಶೆಟ್ಟಿ ಅವರನ್ನು ಬಂಧಿಸಲಾಗಿದೆ.
ಘಟನೆ ವಿವರ
ಸೂಲಗಿತ್ತಿಯಾಗಿದ್ದ ವಯೋವೃದ್ಧೆ ಅಪ್ಪಿ ಶೆಡ್ತಿ ಸವಣಾಲು ಗ್ರಾಮದಲ್ಲಿ ಚಿರಪರಿಚಿತೆ. ಸುತ್ತಮುತ್ತ ಹಳ್ಳಿಯಲ್ಲಿ ಸೀಮಿತ ಆಸ್ಪತ್ರೆಗಳಿದ್ದ ಕಾಲದಿಂದ ಹೆರಿಗೆಗೆ ಪ್ರಕ್ರಿಯೆ ನಡೆಸುತ್ತಿದ್ದರು. ಸುಮಾರು 500ಕ್ಕೂ ಮಿಕ್ಕಿ ಹೆರಿಗೆ ಮಾಡಿಸಿದ ಈ ಅಜ್ಜಿಗೆ ಕಳೆದ 3 ವರ್ಷಗಳಿಂದ ಮೈ ಹುಷಾರಿಲ್ಲದ ಕಾರಣದಿಂದ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದಾರೆ.
ಮಲಗಿದ್ದ ಅಜ್ಜಿಗೆ ಮಗ ಹಾಗೂ ಮೊಮ್ಮಗ ಮದ್ಯ ಸೇವಿಸಿ ಕಳೆದ ಮೂರು ದಿನಗಳ ಹಿಂದೆ ಹಲ್ಲೆ ನಡೆಸಿದ್ದಲ್ಲದೆ ಎಳೆದೊಯ್ದು ಎತ್ತಿ ನೆಲಕ್ಕೆ ಅಪ್ಪಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವಿಚಾರವಾಗಿ ಖಂಡನೆಗಳು ಬಂದಿದ್ದು, ಪೊಲೀಸರಿಗೂ ಮಾಹಿತಿ ತಿಳಿದ ತತ್‌ಕ್ಷಣ ಬೆಳ್ತಂಗಡಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ. ಹಾಗೂ ಎಸ್.ಐ. ನಂದಕುಮಾರ್ ಆರೋಪಿಗಳನ್ನು ಬಂಧಿಸಿ ಕಲಂ: 323, 504 ಐಪಿಸಿ ಮತ್ತು 24 ಕಾಯ್ದೆ 2007ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಅಜ್ಜಿ ಆಸ್ಪತ್ರೆಗೆ
ಮಗ ಮತ್ತು ಮೊಮ್ಮಗನಿಂದ ಹಲ್ಲೆಗೊಳಗಾದ ಅಜ್ಜಿಯನ್ನು ಪೊಲೀಸರ ಸೂಚನೆಯಂತೆ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.