ರಿಲಯನ್ಸ್ ವಿಸ್ತರಣೆ: ಜಾಗತಿಕ ಕಂಪೆನಿಗಳಿಗೆ ನಡುಕ
Team Udayavani, Jul 18, 2020, 8:12 AM IST
ಮುಂಬಯಿ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಜಾಗತಿಕ ಪ್ರಬಲ ಹೂಡಿಕೆದಾ ರರನ್ನು ಆಕರ್ಷಿಸುತ್ತಿದೆ. ದಿನೇ ದಿನೇ ಹಲವಾರು ಮಗ್ಗಲುಗಳಲ್ಲಿ ತನ್ನ ಉದ್ಯಮವನ್ನು ವಿಸ್ತರಿಸುತ್ತಿದೆ. ಮುಖ್ಯವಾಗಿ ಡಿಜಿಟಲ್ ಹಾಗೂ ತಂತ್ರಜ್ಞಾನದಲ್ಲಿ ಅದು ಅತ್ಯಂತ ಪ್ರಬಲವಾಗಿ ಬೆಳೆಯುತ್ತಿದೆ. ಇದು ಜಾಗತಿಕ ಡಿಜಿಟಲ್ ದೈತ್ಯರಾದ ಅಮೆಜಾನ್, ವಾಲ್‌ಮಾರ್ಟ್, ಝೂಮ್‌ಗೆ ಸವಾಲಾಗಿ ಪರಿಣಮಿಸಿದೆ. ರಿಲಯನ್ಸ್‌ಗೆ ಇತ್ತೀಚೆಗೆ ಸಿಕ್ಕಿರುವ ಪ್ರಬಲ ಬೆಂಬಲ ವೆಂದರೆ ಫೇಸ್‌ಬುಕ್ ಹಾಗೂ ಗೂಗಲ್‌ನದ್ದು. ಮಾರುಕಟ್ಟೆ ತಜ್ಞರು ರಿಲಯನ್ಸ್, ಚೀನದ ಅಲಿಬಾಬಾ ಹಾಗೂ ಟೆನ್ಸೆಂಟ್ ರೀತಿ ಬೆಳೆಯುತ್ತಿದೆ ಎಂದು ವಿಶ್ಲೇಷಿಸಿದ್ದಾರೆ. ಮೊನ್ನೆಯಷ್ಟೇ ಮುಗಿದ ವಾರ್ಷಿಕ ಸರ್ವಸದಸ್ಯರ ಸಭೆ ನಂತರ ರಿಲಯನ್ಸ್ ಜಾಗತಿಕವಾಗಿ ಪ್ರಬಲವಾಗುತ್ತಿರುವ ಸುಳಿವು ನೀಡಿದೆ. ಏಷ್ಯಾದ ಅಗ್ರ, ವಿಶ್ವದ 6ನೇ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ದೊಡ್ಡದಾಗಿ ವಿಸ್ತರಿಸುತ್ತಿದೆ. ತೈಲೋತ್ಪನ್ನ, ಚಿಲ್ಲರೆ ವ್ಯಾಪಾರ ಮಳಿಗೆಗಳು, ದೂರಸಂಪರ್ಕ ಸೇವಾ ಸಂಸ್ಥೆ (ಜಿಯೋ), ಅಂತರ್ಜಾಲಾ ಧಾರಿತ ಮಾರಾಟ ತಾಣ (ಜಿಯೋ ಮಾರ್ಟ್), ತಂತ್ರಜ್ಞಾನ ಸೇವೆಗಳು (5ಜಿ ತರಂಗಾಂತರ ಅಭಿವೃದ್ಧಿ, ಜಿಯೋ ಕನ್ನಡಕ, ಜಿಯೋ ಹಾಟ್‌ಸ್ಪಾಟ್, ಜಿಯೋ ಫೈಬರ್, ಜಿಯೋ ಮೀಟ್‌ನಂತಹ ಸಾಧನಗಳು) ಹೀಗೆ ಎಲ್ಲ ಕಡೆಗೆ ಚಾಚಿಕೊಂಡಿದೆ.
ಏರಿಕೆಗೆ ಕಾರಣವೇನು?: ರಿಲಯನ್ಸ್ ಅತಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೇವೆ ನೀಡುವ ಮೂಲಕ ನಾಲ್ಕೇ ವರ್ಷದಲ್ಲಿ ತನ್ನ ದೂರಸಂಪರ್ಕ ಸಂಸ್ಥೆಯನ್ನು ನಂ.1 ಆಗಿಸಿತು. ಇದೇ ರೀತಿ ಹಲವು ಪ್ರಯೋಗಗಳನ್ನು ಅದು ನಿರಂತರವಾಗಿ ಮಾಡುತ್ತಲೇ ಇದೆ. ಹಾಗೆಯೇ ರಿಲಯನ್ಸ್ ನೇತಾರ ಮುಕೇಶ್‌ಗೆ ದೇಶದ ಅಧಿಕಾರ ವರ್ಗದ ನೆರವೂ ಇದೆ. ಸ್ವತಃ ಮೋದಿಯೇ ಬೆನ್ನಿಗೆ ನಿಂತಿದ್ದಾರೆಂದೂ ತಜ್ಞರು ವಿಶ್ಲೇಷಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.