ಸೋಂಕಿತರಿಗೆ ಆಕಾಶ್ ಆಸ್ಪತ್ರೆಯಲ್ಲಿ ಯೋಗಾಭ್ಯಾಸ
Team Udayavani, Jul 18, 2020, 8:32 AM IST
ದೇವನಹಳ್ಳಿ: ನಗರದ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಕೋವಿಡ್ ಸೋಂಕಿತರಿಗೆ ಪ್ರತಿ ನಿತ್ಯ ಆರೋಗ್ಯ ಚೇತರಿಕೆ ಉದ್ದೇಶದಿಂದ ಪತಾಂಜಲಿ ಯೋಗ ಸಮಿತಿಯ ಸತೀಶ್ ಹಾಗೂ ವೈದ್ಯರ ತಂಡದಿಂದ ಕೋವಿಡ್ ಸೋಂಕಿತರಿಗೆ ಯೋಗಾ ಭ್ಯಾಸ ಮಾಡಿಸಲಾಗುತ್ತಿದೆ.
ಆಕಾಶ್ ಆಸ್ಪತ್ರೆಯಲ್ಲಿ ಜೂನ್ 25ರಿಂದ ಜು. 18ರವರೆಗೆ 1,150 ಜನರು ಕೊರೊನಾ ಸೋಂಕಿತರು ದಾಖಲಾಗಿದ್ದರು. ಅದರಲ್ಲಿ 600 ಜನರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. 560 ಮಂದಿಗೆ ಪ್ರತಿದಿನ ಬೆಳಗ್ಗೆ 5 ರಿಂದ 6 ರವರೆಗೆ ವಿವಿಧ ಯೋಗಾಸನದ ಭಂಗಿಗಳು, ಪ್ರಾಣಾಯಾಮಗಳನ್ನು ವೈದ್ಯರು ಮತ್ತು ಪತಾಂಜಲಿ ಯೋಗ ಸಮಿತಿ ಸತೀಶ್ ನೇತೃತ್ವದಲ್ಲಿ ಯೋಗಾ ಭ್ಯಾಸ ಮಾಡಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಆಕಾಶ್ ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ಮುನಿರಾಜು ಮಾತನಾಡಿ, ಕೋವಿಡ್ ಭಯ ಬೇಡ, ಧೈರ್ಯದಿಂದ ಎದುರಿಸಬೇಕು. 560 ಕೊರೊನಾ ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸಿ, ಆತ್ಮಸ್ಥೈರ್ಯ ತುಂಬಿ ವಿವಿಧ ಔಷ ಧೋಪಚಾರ ನೀಡಿ, ಗುಣ ಮುಖರನ್ನಾಗಿಸ ಲಾಗುತ್ತಿದೆ. ವೈದ್ಯರ ತಂಡ ಮತ್ತು ಪತಾಂಜಲಿ ಯೋಗದ ಸತೀಶ್ ಸಮ್ಮುಖದಲ್ಲಿ ಸೋಂಕಿತರಿಗೆ ಯೋಗ ಮಾಡಿಸಿ, ದೈಹಿಕ ಸಾಮರ್ಥ್ಯ ಹೆಚ್ಚಿಸಲು ಸಹಕಾರ ನೀಡಲಾಗಿದೆ.
ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯ ಡಾ.ಬ್ರಿಜೇಶ್, ಡಾ.ಕೈಲಾಶ್, ಡಾ.ಸುನೀಲ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.