ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 237 ಮಂದಿಗೆ ಕೋವಿಡ್ ಪಾಸಿಟಿವ್
Team Udayavani, Jul 18, 2020, 8:24 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 237 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದೇ ವೇಳೆ ನಾಲ್ವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಪುತ್ತೂರಿನ 74 ವರ್ಷದ ವೃದ್ಧೆ ಶುಕ್ರವಾರ ಹಾಗೂ ಮಂಗಳೂರಿನ 67 ವರ್ಷದ ವೃದ್ಧ, ಮಂಗಳೂರಿನ 49 ವರ್ಷದ ಮಹಿಳೆ, ಮಂಗಳೂರಿನ 61 ವರ್ಷದ ಮಹಿಳೆ ಶನಿವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 109 ಮಂದಿ ಕೋವಿಡ್ ಮುಕ್ತರಾಗಿ ಶನಿವಾರ ಬಿಡುಗಡೆಗೊಂಡಿದ್ದಾರೆ.
ಸೋಂಕಿತರ ಕುಟುಂಬಕ್ಕೆ ಮಾತ್ರೆ
ಮುಂದಿನ ದಿನಗಳಲ್ಲಿ ಯಾವುದೇ ಆರೋಗ್ಯ ಸಂಸ್ಥೆಯಲ್ಲಿ ಕೋವಿಡ್ ಸಂಶಯಾಸ್ಪದ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ತೆಗೆದ ಸಂದರ್ಭ ಅಂತಹ ವ್ಯಕ್ತಿ ಹಾಗೂ ಆತನ ಮನೆಯಲ್ಲಿರುವ ಇತರರಿಗೆ ಪರೀಕ್ಷೆ ವರದಿ ಪ್ರಕಟವಾಗುವ ತನಕ ವಿಟಮಿನ್ 500 ಎಂಜಿ ಮಾತ್ರೆಗಳು ಬೆಳಗ್ಗೆ, ರಾತ್ರಿ ತಲಾ ಒಂದರಂತೆ ಹಾಗೂ ಝಿಂಕ್ 50ಎಂಜಿ ಮಾತ್ರೆ ಮಧ್ಯಾಹ್ನ 1ರಂತೆ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿಯವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.