ಅಳಿಯನನ್ನು ಮದುವೆಯಾದ ಅತ್ತೆಗೆ ಮಗಳೇ ವಿಲನ್: ಸಿನಿಮಾ ಕಥೆಯನ್ನು ಮೀರಿಸುವಂತಿದೆ ಈ ಸುದ್ದಿ !


Team Udayavani, Jul 19, 2020, 9:14 AM IST

marrige

ಸಾಂಧರ್ಭಿಕ ಚಿತ್ರ ಬಳಸಲಾಗಿದೆ. ಕೃಪೆ-google

ರಷ್ಯಾ: ಕೆಲದಿನಗಳ ಹಿಂದೆ ಮಾವನೇ ಸೊಸೆಯನ್ನು ಮದುವೆಯಾದ ಸುದ್ದಿಯನ್ನು ಓದಿರುವಿರಿ. ಇದೀಗ ಅತ್ತೆ ತನ್ನ ಅಳಿಯನನ್ನೇ ವಿವಾಹವಾಗಿರುವ ಘಟನೆಯೊಂದು ನಡೆದಿದೆ. ಆದರೆ ಇಲ್ಲಿ ಹಲವು ಟ್ವಿಸ್ಟ್ ಗಳಿದ್ದು ಸುದ್ದಿಯನ್ನು ಸಂಪೂರ್ಣ ಓದಿ.

ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನೆಲೆಸಿರುವ 75 ವರ್ಷದ ಗಲಿನಾ ಝೂಕೋವಸ್ಕಯ ಎಂಬ ವೃದ್ಧೆ ವ್ಯಾಚೆಸ್ಲಾವ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದರು. ಆದರೇ ಟ್ವಿಸ್ಸ್ ಎಂದರೇ ವ್ಯಾಚೆಸ್ಲಾವ್ ಸ್ವತಃ ಗಲಿನಾ ಅವರ ಮಗಳ ಪತಿಯಾಗಿದ್ದ.

ಗಲಿನಾ ಅವರ ಮಗಳು ಎಲಿನಾರನ್ನು ವ್ಯಾಚೆಸ್ಲಾವ್ 2007ರಲ್ಲಿ ಮದುವೆಯಾಗಿದ್ದ. ಆದರೆ ಸಂಸಾರದಲ್ಲಿ ವಿರಸವುಂಟಾಗಿ ಇಬ್ಬರು 2010ರಲ್ಲಿ ಬೇರೆಬೇರೆಯಾದರು. ಮಾತ್ರವಲ್ಲದೆ ಎಲಿನಾ ಸ್ವತಃ ತನ್ನ ಗಂಡನನ್ನೆ ಮನೆಯಿಂದ ಹೊರದಬ್ಬುತ್ತಾಳೆ. ಇತ್ತ ಮನೆಯೂ ಇಲ್ಲದೆ, ಹೆಂಡತಿಯೂ ಇಲ್ಲದೆ ವ್ಯಾಚೆಸ್ಲಾವ್ ಅತ್ತೆ ಗಲಿನಾ ಮನೆಗೆ ತೆರಳಿ ಘಟನೆಯನ್ನು ವಿವರಿಸುತ್ತಾನೆ, ಅದರ ಜೊತೆಗೆ ಅಲ್ಲಿಯೇ ಆಶ್ರಯ ಪಡೆಯುತ್ತಾನೆ.

ಈ ನಡುವೆ ಅತ್ತೆ ಗಲಿನಾಗೆ ವ್ಯಾಚೆಸ್ಲಾವ್ ಮೇಲೆ ಪ್ರೇಮಾಂಕುರವಾಗುತ್ತದೆ. ಇದನ್ನು ನಿವೇದಿಸಿಕೊಂಡಾಗ ವ್ಯಾಚೆಸ್ಲಾವ್ ಒಪ್ಪಿಕೊಂಡು ಮದುವೆಯಾಗುತ್ತಾರೆ.  ಈ ನಡುವೆ ಕಥೆಯಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗುತ್ತದೆ. ಅದು ಕೂಡ ಮದುವೆಯಾದ 10 ವರ್ಷದ ನಂತರ.

ವ್ಯಾಚೆಸ್ಲಾವ್ ಮೊದಲ ಪತ್ನಿ ಎಲಿನಾ ಇದೀಗ ಮತ್ತೆ ಬಂದಿದ್ದು ನಮ್ಮ ಸಂಸಾರವನ್ನು ಹಾಳುಗೆಡವಲು ಪ್ರಯತ್ನಿಸುತ್ತಿದ್ದಾಳೆ ಎಂದು ಗಲಿನಾ ಸ್ವತಃ ತನ್ನ ಮಗಳ ಮೇಲೆ ದೂರಿದ್ದಾರೆ. ಮಗಳು ತನ್ನ ಮಾಜಿ ಪತಿಯನ್ನ ತನ್ನತ್ತ ಸೆಳೆಯಲು ಪ್ರಯತ್ನಿಸುವ ಮೂಲಕ ಸಂಸಾರದಲ್ಲಿ ಹುಳಿ ಹಿಂಡುತ್ತಿದ್ದಾಳೆ ಎಂದು ದೂರಿದ್ದಾರೆ. ಇದೀಗ ಈ ವಿಚಾರ ರಷ್ಯಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಗಲಿನಾ ತನ್ನ ಪುತ್ರಿ ಎಲಿನಾ ವಿರುದ್ಧ ಈಗ ಸಿಡಿದೆದ್ದಿದ್ದಾರೆ. `ಒಂದು ದಶಕದ ಹಿಂದೆ ಆಕೆ ಮತ್ತು ವ್ಯಾಚೆಸ್ಲಾವ್ ಬೇರ್ಪಟ್ಟ ಬಳಿಕ ಎಲಿನಾ ಎಲ್ಲಿದ್ದಳು ಎಂದೇ ಗೊತ್ತಿರಲಿಲ್ಲ. ಆದರೆ, ನಮ್ಮ ಸುಖ ಸಂಸಾರ ಕಂಡು ಪುತ್ರಿ ಎಲಿನಾ ಅಸೂಹೆ ಹೊಂದಿದ್ದಾಳೆ. ತನ್ನ ಮಾಜಿ ಪತಿಯೊಂದಿಗೆ ತಾಯಿ ಸುಖವಾಗಿರುವುದನ್ನು ಕಂಡು ಬೇಸರಗೊಂಡಿರುವ ಅವಳು ತನ್ನ ಮಾಜಿ ಪತಿಯನ್ನು ಮತ್ತೆ ತನ್ನತ್ತ ಸೆಳೆಯಲು ಯತ್ನಿಸುತ್ತಿದ್ದಾಳೆ’ ಎಂಬುದು ಗಲಿನಾರ ಆರೋಪ. ಈ ಕಾರ್ಯಕ್ಕೆ ಬೇರೊಬ್ಬ ವ್ಯಕ್ತಿಯಿಂದ ಜನಿಸಿದ ತನ್ನ 30 ವರ್ಷದ ಮಗಳನ್ನು ಎಲಿನಾ ಬಳಸುತ್ತಿದ್ದಾಳೆ ಎಂಬುದು ಗಲಿನಾರ ದೂರು.

ಎಲಿನಾ ಮತ್ತು ವ್ಯಾಚೆಸ್ಲಾವ್ ಪ್ರೇಮಕಥೆ.

ವ್ಯಾಚೆಸ್ಲಾವ್ ಒಮ್ಮೆ ತನ್ನ ಮಾಲಿಕ ಸರಿಯಾಗಿ ವೇತನ ಕೊಡಲಿಲ್ಲ ಎಂಬ ಕಾರಣ ನೀಡಿ ಆತನನ್ನೆ ಕೊಲೆ ಮಾಡಿ ಜೈಲು ಪಾಲಾಗಿದ್ದ. ಜೈಲಿನಲ್ಲಿದ್ದಾಗಲೇ  ಈತ ಸ್ಥಳೀಯ ಪತ್ರಿಕೆಗೆ ಪತ್ರ ಬರೆದು ತಾನು ಪ್ರೀತಿಯ ಹುಡುಕಾಟದಲ್ಲಿದ್ದೇನೆ ಎಂದು ವಿವರಿಸಿದ್ದ. ಇದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆಯೇ ಎಲಿನಾ ಈ ಪತ್ರಕ್ಕೆ ಮನಸೋತಿದ್ದರು. ಅಲ್ಲದೆ, ವ್ಯಾಚೆಸ್ಲಾವ್ ಬಿಡುಗಡೆಗಾಗಿ ಕಾದು 2007ರಲ್ಲಿ ವಿವಾಹವಾದರು. ಆದರೆ, ಇದಾದ ಮೂರು ವರ್ಷಕ್ಕೆ ಈ ದಂಪತಿ ಬೇರ್ಪಟ್ಟಿದ್ದರು…!

ಇದಾದ ಬಳಿಕವೇ ವ್ಯಾಚೆಸ್ಲಾವ್‌ನನ್ನು ಗಲಿನಾ ವರಿಸಿದ್ದು…! ಆದರೆ, ಈಗ ಮತ್ತೆ ಇವರ ಜಗಳ ಆರಂಭವಾಗಿದೆ. ಒಬ್ಬ ವ್ಯಕ್ತಿಗಾಗಿ ತಾಯಿ ಮಗಳು ಇಲ್ಲಿ ಪರಸ್ಪರ ಜಗಳಕ್ಕೆ ನಿಂತ ಕತೆ ಈಗ ರಷ್ಯಾದ ಸುದ್ದಿ ಮಾಧ್ಯಮಗಳಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ.

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.