ಕೋವಿಡ್‌ – 19 ಸಮಯದಲ್ಲಿ ದಂತ ಆರೋಗ್ಯ


Team Udayavani, Jul 19, 2020, 3:17 PM IST

edition-tdy-3

ನೊವೆಲ್‌ ಕೋವಿಡ್ ವೈರಲ್‌ ಡಿಸೀಸ್‌ (ಕೋವಿಡ್‌ – 19) ಜಗತ್ತನ್ನೇ ತಲ್ಲಣಗೊಳಿಸಿರುವ ಒಂದು ಮಾರಕ ಸಾಂಕ್ರಾಮಿಕ ಕಾಯಿಲೆ. ಕೋವಿಡ್ ವೈರಾಣು ಒಂದು ಆರ್‌ಎನ್‌ಎ ವೈರಾಣುವಾಗಿದೆ. ಮನುಷ್ಯನಲ್ಲಿ ಈ ಕೊರೊನಾ ಗುಂಪಿನ ಸುಮಾರು ಏಳು ಬಗೆಯ ವೈರಾಣುಗಳು ಸೋಂಕು ಉಂಟು ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಸಾಂಕ್ರಾಮಿಕ ಪಿಡುಗಿಗೆ ಜಾಗತಿಕ ಮಟ್ಟದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ದಂತ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರಲ್ಲೂ ಅರಿವು ಮೂಡಿಸುವುದೇ ಈ ಲೇಖನದ ಉದ್ದೇಶ.

ಪ್ರಸ್ತುತ ಪರಿಸ್ಥಿತಿಯಲ್ಲಿ ದಂತ ಚಿಕಿತ್ಸೆ : ಕೋವಿಡ್ ಸೋಂಕು ಮುಖ್ಯವಾಗಿ ಉಗುಳು, ಶಾರೀರಿಕ ದ್ರವ, ಕೆಮ್ಮುವುದರಿಂದ ಹೊರಹೊಮ್ಮುವ ಹನಿಗಳಿಂದ ಹರಡುತ್ತದೆ. ದಂತ ಚಿಕಿತ್ಸೆಯಲ್ಲಿ ಬಳಸುವ ಹಲವು ಪರಿಕರಗಳು ನೀರನ್ನು ಚಿಮ್ಮಿಸುತ್ತವೆ. ಇದರಿಂದ ಬಾಯಿಯಲ್ಲಿರುವ ದ್ರವ ಆಚೆ ಸಿಡಿಯುವುದು ಸಹಜ. ಇದರಿಂದ ಸುತ್ತಮುತ್ತಲಿನ ವಾತಾವರಣವು ದ್ರವದ ಹನಿ (ಡ್ರಾಪ್ಲೆಟ್ಸ್‌)ಗಳಿಂದ ಕಲುಷಿತವಾಗುವ ಸಂಭವ ಹೆಚ್ಚು. ಇಂತಹ ಹನಿಗಳಿಂದ ಅಥವಾ ಹನಿಗಳಿಂದ ಕೂಡಿದ ವಸ್ತುಗಳ ಮೇಲ್ಮೆ„ ಸಂಪರ್ಕದಿಂದ ಸೋಂಕು ಹರಡುತ್ತದೆ.

ದ್ರವದ ಹನಿಗಳಿಂದ ಸೋಂಕು ಹರಡಬಹುದು : ಹೀಗಾಗಿ ದಂತ ವೈದ್ಯರು, ಚಿಕಿತ್ಸೆ ಪಡೆದುಕೊಳ್ಳುವ ವ್ಯಕ್ತಿ, ದಾದಿಯರು, ವೈದ್ಯರು ಸಹಾಯಕ ಸಿಬಂದಿ ಅತ್ಯಂತ ಜಾಗರೂಕತೆಯಿಂದ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ. ವೈದ್ಯರು ಮತ್ತು ಸಹಾಯಕ ಸಿಬಂದಿಗಳು ವೈಯಕ್ತಿಕ ಸುರಕ್ಷತಾ ಸಲಕರಣೆ (ಪಿಪಿಇ)ಗಳನ್ನು ಬಳಸಬೇಕಾಗುತ್ತದೆ. ಕಟ್ಟುನಿಟ್ಟಾದ ಸೋಂಕು ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.

ಯಾವುದು ತುರ್ತು ಪರಿಸ್ಥಿತಿ? :  ತೀವ್ರ ಹಲ್ಲುನೋವು, ಬಾಯಿಯಲ್ಲಿ ನಿಯಂತ್ರಣಕ್ಕೆ ಬಾರದ ರಕ್ತಸ್ರಾವ, ವಸಡಿನಲ್ಲಿ ರಕ್ತಸ್ರಾವ, ಕೀವು, ಬಾಯಿಯ ಅಥವಾ ಮುಖಾಂಗದ ಊತ, ಅಪಘಾತಗಳು ಇವೆಲ್ಲಕ್ಕೂ ಕೂಡಲೇ ಚಿಕಿತ್ಸೆಯ ಅಗತ್ಯವಿದೆ. ಹಾಗೆಯೇ ಗರ್ಭಿಣಿಯರು, ಮಧುಮೇಹಿ ಗಳು ಮತ್ತು ರೋಗ ನಿರೋಧಕ ವ್ಯವಸ್ಥೆ ಹದಗೆಟ್ಟ ರೋಗಿಗಳಲ್ಲಿ ಕೀವು ತುಂಬಿದ ಹಲ್ಲಿನಿಂದ ಮಾರಣಾಂತಿಕ ಸೋಂಕು ಉಂಟಾಗಬಹುದು. ಹಾಗಾಗಿ ಈ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯ ಆವಶ್ಯಕತೆ ಇದೆ.

ದಂತ ಚಿಕಿತ್ಸಾಲಯಕ್ಕೆ ಬರುವಾಗ ಈ ನಿಯಮಗಳನ್ನು ಪಾಲಿಸಿ :

  • ಕಡ್ಡಾಯವಾಗಿ ಫೇಸ್‌ ಮಾಸ್ಕ್ ಧರಿಸಿ ಬನ್ನಿ.
  • ಗುಂಪು ಗುಂಪಾಗಿ ಸೇರಬೇಡಿ. ರೋಗಿಯ ಜತೆಗೆ ಅನಗತ್ಯವಾಗಿ ಇತರ ಕುಟುಂಬ ಸದಸ್ಯರನ್ನು ಕರೆದುಕೊಂಡು ಬರಬೇಡಿ
  • ಹ್ಯಾಂಡ್‌ ಸ್ಯಾನಿಟೈಸರ್‌ ಬಳಸಿ.
  • ಸ್ಮಾರ್ಟ್‌ಫೋನ್‌ ಬಳಸುವ ಪ್ರತಿಯೊಬ್ಬರೂ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು
  • ಪ್ರವೇಶ ದ್ವಾರದಲ್ಲಿ ನಿಮ್ಮ ದೇಹದ ಉಷ್ಣತೆಯನ್ನು ಪರಿಶೀಲಿಸುತ್ತಾರೆ.
  • ಚಿಕಿತ್ಸೆ ಮುಗಿದ ಬಳಿಕ ನೇರ ಮನೆಗೆ ಹೋಗಿ ನಿಮ್ಮ ವೈಯಕ್ತಿಕ ಸ್ವಚ್ಛತೆ ಪಾಲಿಸುವುದು ಅಗತ್ಯ.
  • 6 ಅಡಿ ಅಥವಾ 2 ಮೀಟರ್‌ ಸಾಮಾಜಿಕ ಅಂತರ ಪಾಲಿಸಿ.
  • ಪ್ರವೇಶ ದ್ವಾರದಲ್ಲಿನ ಕೌಂಟರ್‌ನಲ್ಲಿ ವೈದ್ಯರು ಕೆಲವು ಆರೋಗ್ಯ ತಪಾಸಣೆಯ ಪ್ರಶ್ನೆಯನ್ನು ಕೇಳುತ್ತಾರೆ. ನಿಮ್ಮಲ್ಲಿ ಜ್ವರದ ಲಕ್ಷಣಗಳು ಇದ್ದರೆ ಅಥವಾ ಕೋವಿಡ್‌ ರಿಸ್ಕ್ ಜಾಸ್ತಿ ಇದ್ದರೆ ಅಲ್ಲಿಯ ವೈದ್ಯರು ಹೇಳುವ ಸೂಚನೆಯನ್ನು ಪಾಲಿಸಿ.
  • ಚಿಕಿತ್ಸೆಯ ಮುನ್ನ ದಂತವೈದ್ಯರು ಕೊಡುವ ಮೌತ್‌ವಾಶ್‌ನಿಂದ ಬಾಯಿ ಮುಕ್ಕಳಿಸಿ.
  • ಚಿಕಿತ್ಸೆ ಮುಗಿದ ಬಳಿಕ ನೇರ ಮನೆಗೆ ಹೋಗಿ ನಿಮ್ಮ ವೈಯಕ್ತಿಕ ಸ್ವಚ್ಛತೆ ಪಾಲಿಸುವುದು ಅಗತ್ಯ.

ದೂರವಾಣಿ ಸಮಾಲೋಚನೆ (ಟೆಲಿಡೆಂಟಿಸ್ಟ್ರಿ) :  ದಂತ ವೈದ್ಯರೊಂದಿಗೆ ಸಮಾಲೋಚನೆ ಅಗತ್ಯವಾದಾಗ, ಹಲ್ಲು ನೋವು ಬಂದಾಗ ಸ್ವಯಂ ಔಷಧ ಮಾಡಿಕೊಂಡು ನೋವು ನಿವಾರಕ ಔಷಧಗಳನ್ನು ತೆಗೆದುಕೊಳ್ಳುವುದು ಬಹಳ ಅಪಾಯಕಾರಿ. ಆ್ಯಂಟಿಬಯೋಟಿಕ್‌ ಔಷಧಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಿ. ಇಲ್ಲದಿದ್ದರೆ ಆ್ಯಂಟಿಬಯೋಟಿಕ್‌ ರೆಸಿಸ್ಟೆನ್ಸ್‌ ಆಗುವ ಸಾಧ್ಯತೆ ಇದೆ. ಉಳಿದೆಲ್ಲ ಸಣ್ಣಪುಟ್ಟ ತೊಂದರೆಗಳಿಗೆ, ಔಷಧಗಳ ಮಾಹಿತಿಗೆ ದಂತವೈದ್ಯರ ಬಳಿ ಮಾಹಿತಿ ಪಡೆಯಬಹುದು.

ಹಲ್ಲಿನ ಆರೋಗ್ಯಕ್ಕೆ ಹತ್ತು ಸರಳ ಸೂತ್ರಗಳು :

ನಿಯಮಿತವಾಗಿ ಹಲ್ಲುಜ್ಜುವುದು :  ದಿನವೂ ಎರಡು ಬಾರಿ ಹಲ್ಲುಜ್ಜಬೇಕು. ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವುದು ಅವಶ್ಯ. ರಾತ್ರಿ ಮಲಗುವ ಮುನ್ನ ಹಲ್ಲುಜ್ಜಿ ಮಲಗಿ. ಮೃದುವಾದ ಬ್ರಶ್‌ನಿಂದ ನಿಧಾನವಾಗಿ ಮೇಲೆ ಕೆಳಗೆ ಸರಿಯಾದ ಕ್ರಮದಲ್ಲಿ ಕನಿಷ್ಠ ಎರಡು ನಿಮಿಷಗಳ ಕಾಲ ಹಲ್ಲುಜ್ಜಬೇಕು.

ಸೂಕ್ತವಾದ ಬ್ರಶ್‌ ಬಳಕೆ :  ಬ್ರಶ್‌ಗಳಲ್ಲಿ ಮೂರು ವಿಧಗಳಿವೆ. ಮೃದು (ಸಾಫ್ಟ್), ಮೀಡಿಯಂ ಮತ್ತು ಹಾರ್ಡ್‌. ಮೃದು ಅಥವಾ ಮಿಡಿಯಮ್‌ ಬ್ರಶ್‌ಗಳನ್ನೇ ಉಪಯೋಗಿಸಿ. ಹಾರ್ಡ್‌ ಬ್ರಶ್‌ಗಳಿಂದ ಹಲ್ಲು ಸವೆಯುವುದು ಖಚಿತ. ಕನಿಷ್ಠ ಮೂರು ತಿಂಗಳಿಗೊಮ್ಮೆ ಬ್ರಶ್‌ ಬದಲಾಯಿಸಿ. ಹಲ್ಲುಜ್ಜಿದ ಅನಂತರ ಬ್ರಶ್‌ ಅನ್ನು ಶುಚಿಯಾಗಿಟ್ಟುಕೊಳ್ಳುವುದು ಅಗತ್ಯ.

ಫ್ಲೋರೈಡ್‌ಯುಕ್ತ ಪೇಸ್ಟ್‌ ಬಳಸಿ :  ಮಾರುಕಟ್ಟೆಯಲ್ಲಿ ಪೇಸ್ಟ್‌ ಖರೀದಿಸುವಾಗ “ಫ್ಲೋರೈಡ್‌’ ಅಂಶ ಇದೆಯೇ ಎಂದು ಪರಿಶೀಲಿಸಿ ತೆಗೆದುಕೊಳ್ಳಿ. ಫ್ಲೋರೈಡ್‌ ನಿಮ್ಮ ಹಲ್ಲು ಹುಳುಕಾಗದಂತೆ ಕಾಪಾಡಿ ಹಲ್ಲುಗಳು ಆರೋಗ್ಯವಾಗಿರುವಂತೆ ಸಹಾಯ ಮಾಡುತ್ತದೆ.

ದಂತದಾರ (ಡೆಂಟಲ್‌ ಫ್ಲೋಸ್‌) ಬಳಸಿ :  ಹಲ್ಲುಗಳ ಸಂಧಿಗಳನ್ನು ಡೆಂಟಲ್‌ ಫ್ಲೋಸ್‌ ಬಳಕೆಯಿಂದ ಶುಚಿಗೊಳಿಸಿ.

ನಾಲಗೆ ಶುಚಿಗೊಳಿಸಿ :  ಟಂಗ್‌ ಕ್ಲೀನರ್‌ ಅಥವಾ ಬ್ರಷ್‌ನ ಹಿಂಬದಿಯಿಂದ ನಾಲಗೆಯನ್ನು ಶುಚಿಗೊಳಿಸಿಕೊಳ್ಳಿ

ವಸಡುಗಳ ಆರೈಕೆ :  ಹಲ್ಲುಜ್ಜಿದ ಅನಂತರ ಬೆರಳಿಗೆ ಸ್ವಲ್ಪ ಪೇಸ್ಟ್‌ ಹಾಕಿಕೊಂಡು ವಸಡನ್ನು ನಯವಾಗಿ ಮಸಾಜ್‌ ಮಾಡಿ. ಇದರಿಂದ ರಕ್ತಪರಿಚಲನೆ ಹೆಚ್ಚಾಗಿ ವಸಡಿನ ಆರೋಗ್ಯ ವೃದ್ಧಿಸುತ್ತದೆ.

ಮೌತ್‌ವಾಶ್‌ ಬಳಸಿ :  ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಮೌತ್‌ವಾಶ್‌ ಬಳಸಿ ಬಾಯಿ ಮುಕ್ಕಳಿಸಿ ಅಥವಾ ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಆ ದ್ರಾವಣದಿಂದ ಬಾಯಿ ಮುಕ್ಕಳಿಸಿ. ಇದರಿಂದ ಬಾಯಿ ವಾಸನೆ, ವಸಡಿನ ಉರಿಯೂತ, ವಸಡಿನಲ್ಲಿ ರಕ್ತ ಒಸರುವುದನ್ನು ನಿಯಂತ್ರಿಸಬಹುದು.

ಸಮತೋಲಿತ ಆಹಾರ ಸೇವನೆ :  ಹಲ್ಲಿನ ಆರೋಗ್ಯಕ್ಕೆ ಪೂರಕವಾದ ನಾರುಯುಕ್ತ ಪದಾರ್ಥ, ಯಥೇಚ್ಛ ಹಣ್ಣು ಹಂಪಲು, ಹಸಿ ತರಕಾರಿ ಸೇವಿಸಿ.

ಸಿಹಿ ಜಿಗುಟು ಪದಾರ್ಥಗಳ ಸೇವನೆ ಮಿತಗೊಳಿಸಿ : ಸಿಹಿ, ಜಿಗುಟು ಪದಾರ್ಥಗಳನ್ನು ಸೇವಿಸುವುದು ಕಡಿಮೆ ಮಾಡಿ. ಸೇವಿಸಿದರೂ ಅದರ ಬಳಿಕ ನಿಮ್ಮ ಹಲ್ಲನ್ನು ಶುಚಿಯಾಗಿಟ್ಟುಕೊಳ್ಳಲು ಮರೆಯದಿರಿ. ಇಂಗಾಲಯುಕ್ತ, ಆಮ್ಲಯುಕ್ತ ಕೃತಕ ಪೇಯಗಳನ್ನು ಮಿತಿಗೊಳಿಸಿ.

ನಿಯಮಿತವಾಗಿ ನೀರು ಸೇವನೆ :  ಬಾಯಿಯ ಆರೋಗ್ಯಕ್ಕೆ ನೀರು ಸೇವನೆ ಮುಖ್ಯ. ಇಲ್ಲದಿದ್ದರೆ ಒಣ ಬಾಯಿಯ ಸಮಸ್ಯೆ ಉಂಟಾಗಬಹುದು. ದೇಹವು ಸೋಂಕಿನ ವಿರುದ್ಧ ಹೋರಾಡಲು ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ದೇಹವು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ .

ಆರೋಗ್ಯವಂತ ಬಾಯಿ ದೇಹದ ಆರೋಗ್ಯದ ಕೈಗನ್ನಡಿಯಿದ್ದಂತೆ. ಕೋವಿಡ್ ಬಗ್ಗೆ ಅನಗತ್ಯ ಭಯ ಬೇಡ. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು, ಸಮತೋಲನ ಆಹಾರ ಸೇವನೆ, ನಿಮ್ಮ ಹಲ್ಲಿನ ಆರೈಕೆ, ವ್ಯಾಯಾಮ, ನಿದ್ರೆ, ಸಕಾರಾತ್ಮಕ ಯೋಚನೆಗಳು ಮತ್ತು ಸುತ್ತಮುತ್ತಲಿನ ಪರಿಸರದ ಸ್ವತ್ಛತೆ ಇಂದಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ.

 

ಡಾ| ನೀತಾ ಜಿ. ಶೆಣೈ, ಎಂಡಿಎಸ್‌

ಕನ್ಸರ್ವೇಟಿವ್‌ ಡೆಂಟಿಸ್ಟ್ರಿ ಮತ್ತು

ಎಂಡೊಡಾಂಟಿಕ್ಸ್‌, ಮಣಿಪಾಲ ದಂತ

ವೈದ್ಯಕೀಯ ಕಾಲೇಜು, ಮಣಿಪಾಲ

ಟಾಪ್ ನ್ಯೂಸ್

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.