‘ಸಿಡ್ನಿ ಟೆಸ್ಟ್‌ನಲ್ಲಿ ಎರಡು ಎಡವಟ್ಟು ಮಾಡಿದ್ದೆ’: ಸ್ಟೀವ್ ಬಕ್ನರ್
Team Udayavani, Jul 20, 2020, 6:55 AM IST
ಅಂಪಾಯರ್ ಸ್ಟೀವ್ ಬಕ್ನರ್.
ಹೊಸದಿಲ್ಲಿ: ಭಾರತ-ಆಸ್ಟ್ರೇಲಿಯ ನಡುವಿನ 2008ರ ಸಿಡ್ನಿ ಟೆಸ್ಟ್ ಪಂದ್ಯ ಹಗರಣಗಳಿಂದಲೇ ಸುದ್ದಿಯಾಗಿತ್ತು.
ಅಂಪಾಯರ್‌ಗಳಾದ ಸ್ಟೀವ್ ಬಕ್ನರ್ ಮತ್ತು ಮಾರ್ಕ್ ಬೆನ್ಸನ್ ಮಾಡಿದ ಎಡವಟ್ಟುಗಳು, ಸೈಮಂಡ್ಸ್-ಹರ್ಭಜನ್ ಒಳಗೊಂಡ ‘ಮಂಕಿಗೇಟ್’ ಪ್ರಕರಣವೆಲ್ಲ ಈ ಪಂದ್ಯಕ್ಕಷ್ಟೇ ಅಲ್ಲ, ಕ್ರಿಕೆಟಿಗೇ ಕಳಂಕವಾಗಿ ಉಳಿದಿದೆ.
12 ವರ್ಷಗಳ ಹಿಂದಿನ ಈ ಪಂದ್ಯವನ್ನು ಆಸ್ಟ್ರೇಲಿಯ ನಾಟಕೀಯ ರೀತಿಯಲ್ಲಿ ಜಯಿಸಿತ್ತು. ಈ ಸಂದರ್ಭದಲ್ಲಿ ತಾನು ನೀಡಿದ ಎರಡು ತಪ್ಪು ತೀರ್ಪುಗಳನ್ನು ಸ್ಟೀವ್ ಬಕ್ನರ್ ಒಪ್ಪಿಕೊಂಡಿದ್ದಾರೆ.
‘ಮೊದಲ ತಪ್ಪು, ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದಾಗ ಸಂಭವಿಸಿತು. ಎರಡನೇ ತಪ್ಪು, ಪಂದ್ಯದ 5ನೇ ದಿನ ಕಂಡುಬಂತು. ಇದರಿಂದ ಭಾರತಕ್ಕೆ ಬಹಳ ನಷ್ಟವಾಯಿತು. ಆದರೆ ಟೆಸ್ಟ್ ಪಂದ್ಯವೊಂದರಲ್ಲಿ ಎರಡು ತಪ್ಪು ಮಾಡಿದ ಅಂಪಾಯರ್ ನಾನೊಬ್ಬನೆಯೇ ಎಂದು ಕೇಳಿಕೊಂಡರೂ ಇವು ಈಗಲೂ ನನ್ನನ್ನು ಕಾಡುತ್ತಿವೆ’ ಎಂದು ಬಕ್ನರ್ ಹೇಳಿದ್ದಾರೆ.
ಸೈಮಂಡ್ಸ್‌ಗೆ ಜೀವದಾನ
ಪಂದ್ಯದ ಮೊದಲ ದಿನದಾಟದಲ್ಲಿ ಬಕ್ನರ್ ನೀಡಿದ ತೀರ್ಪಿನಿಂದ ಸೈಮಂಡ್ಸ್ ಸ್ಟಂಪ್ಡ್ ಆಗುವುದರಿಂದ ಬಚಾವಾಗಿದ್ದರು. 6ಕ್ಕೆ 135ರಲ್ಲಿದ್ದ ಆಸೀಸ್, ಸೈಮಂಡ್ಸ್ ಅವರ 160 ರನ್ ಸಾಹಸದಿಂದ 463ರ ತನಕ ಸಾಗಿತ್ತು. 5ನೇ ದಿನ 333 ರನ್ ಗುರಿ ಪಡೆದಿದ್ದ ಭಾರತ ಉತ್ತಮ ಸ್ಥಿತಿಯಲ್ಲಿತ್ತು.
ಆಗ ದ್ರಾವಿಡ್ ವಿರುದ್ಧ ಕಾಟ್ ಬಿಹೈಂಡ್ ತೀರ್ಪು ಬಂತು. ಆದರೆ ಚೆಂಡು ದ್ರಾವಿಡ್ ಪ್ಯಾಡ್ ಸವರಿ ಹೋಗಿತ್ತು. ಪಂದ್ಯ ಭಾರತದ ಕೈಜಾರಿತು. ‘ಬಲವಾದ ಗಾಳಿ ಬೀಸುವಾಗ, ವೀಕ್ಷಕರ ಕೂಗು ವಿರೀತವಾಗಿರುವಾಗ ಇಂಥ ತಪ್ಪು ಸಂಭವಿಸುವುದು ಸಹಜ. ಆದರೆ ಇದು ಸಮರ್ಥನೆ ಅಲ್ಲ’ ಎಂಬುದಾಗಿ ಸ್ಟೀವ್ ಬಕ್ನರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
ICC ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.