ಆಂಗ್ಲರ ಹಿಡಿತದಲ್ಲಿ ದ್ವಿತೀಯ ಟೆಸ್ಟ್: ಡ್ರಾ ಸಾಧಿಸಲು ವಿಂಡೀಸ್ ಪ್ರಯತ್ನ
Team Udayavani, Jul 20, 2020, 9:21 AM IST
ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಪಂದ್ಯದ ಅಂತಿಮ ದಿನವಾದ ಇಂದು ಡ್ರಾ ಸಾಧಿಸಲು ವಿಂಡೀಸ್ ಪ್ರಯತ್ನಿಸುವುದು ಬಹುತೇಕ ನಿಶ್ಚಿತವಾಗಿದೆ.
ಒಂದು ವಿಕೆಟ್ ಗೆ 32 ರನ್ ಗಳಿಸಿದ್ದಲ್ಲಿಂದ ನಾಲ್ಕನೇ ದಿನದಾಟ ಆರಂಭಿಸಿದ ವಿಂಡೀಸ್ ಗೆ ಬ್ರಾಥ್ ವೇಟ್ ಮತ್ತು ಜೋಸೆಫ್ ನೆರವಾದರು. ನೈಟ್ ವಾಚಮನ್ ಜೋಸೆಫ್ 32 ರನ್ ಗಳಿಸಿದರೆ, ಬ್ರಾಥ್ ವೇಟ್ 75 ರನ್ ಗಳಿಸಿದರು. ನಂತರ ಬ್ರೂಕ್ಸ್ 68 ರನ್ ಗಳಿಸಿದರೆ, ಚೇಸ್ 51 ರನ್ ಗಳಿಸಿದರು. 242 ರನ್ ಗೆ ಐದನೇ ವಿಕೆಟ್ ಕಳೆದುಕೊಂಡ ವಿಂಡೀಸ್ ನಂತರ ಸತತ ವಿಕೆಟ್ ಕಳೆದುಕೊಂಡಿತು. ಬ್ರಾಡ್ ಮತ್ತು ವೋಕ್ಸ್ ದಾಳಿಗೆ ಬೆಚ್ಚಿದ ಹೋಲ್ಡರ್ ಪಡೆ ಮುಂದೆ 45 ರನ್ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡಿತು.
ಬ್ರಾಡ್ ಮತ್ತು ವೋಕ್ಸ್ ತಲಾ ಮೂರು ವಿಕೆಟ್ ಪಡೆದರೆ, ಕರನ್ ಎರಡು ವಿಕೆಟ್ ಉರುಳಿಸಿದರು. ವಿಂಡೀಸ್ 287 ರನ್ ಗೆ ಆಲ್ ಔಟ್ ಆಯಿತು. ಈ ಮೂಲಕ ಇಂಗ್ಲೆಂಡ್ 182 ರನ್ ಗಳ ಮುನ್ನಡೆ ಸಾಧಿಸಿತು.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಂಗ್ಲರ ಹೊಡಿಬಡಿ ಆಟಗಾರರಾದ ಸ್ಟೋಕ್ಸ್ ಮತ್ತು ಬಟ್ಲರ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಬಟ್ಲರ್ ಮತ್ತು ಕ್ರಾವ್ಲಿಯನ್ನು ರೋಚ್ ಬೌಲ್ಡ್ ಮಾಡಿದರು. ಇಂಗ್ಲೆಂಡ್ ಎರಡು ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ, 219 ರನ್ ಗಳ ಮುನ್ನಡೆಯಲ್ಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.