ವೃದ್ಧೆಯ ಸ್ವಿಸ್‌ ಬ್ಯಾಂಕ್‌ ಖಾತೆ ಆದಾಯಕ್ಕೆ ಕೋರ್ಟ್‌ ಲಗಾಮು


Team Udayavani, Jul 20, 2020, 11:05 AM IST

ವೃದ್ಧೆಯ ಸ್ವಿಸ್‌ ಬ್ಯಾಂಕ್‌ ಖಾತೆ ಆದಾಯಕ್ಕೆ ಕೋರ್ಟ್‌ ಲಗಾಮು

ಸಾಂದರ್ಭಿಕ ಚಿತ್ರ

ಸ್ವಿಸ್‌ ಬ್ಯಾಂಕಿನಲ್ಲಿದ್ದ 196 ಕೋಟಿ ರೂ. ಆದಾಯಕ್ಕೆ ತೆರಿಗೆ ಕಟ್ಟುವಂತೆ ಸೂಚನೆ
ತೆರಿಗೆ ರಿಟರ್ನ್ಸ್ ವೇಳೆ ವಿದೇಶಿ ಆದಾಯದ ಮೂಲ ಮುಚ್ಚಿಟ್ಟಿದ್ದ ವೃದ್ಧೆ
ವೃದ್ಧೆಯ ವಾದ ತಳ್ಳಿಹಾಕಿದ ಐಟಿಎಟಿ; ತೆರಿಗೆ, ದಂಡ ಕಟ್ಟುವಂತೆ ಆದೇಶ

ಮುಂಬಯಿ: ಅನಿವಾಸಿ ಭಾರತೀಯಳೆಂಬ ಸೋಗು ಹಾಕಿ ಸ್ವಿಟ್ಸರ್‌ಲೆಂಡ್‌ ಬ್ಯಾಂಕಿನಲ್ಲಿದ್ದ ಹಣವನ್ನು ಪಡೆಯಲು ಮುಂದಾಗಿದ್ದ ರೇಣು ತಾರಣಿ (80) ಎಂಬ ವೃದ್ಧೆಯೊಬ್ಬರಿಗೆ, ತೆರಿಗೆ ಹಾಗೂ ದಂಡ ಕಟ್ಟಿಯೇ ಹಣ ಪಡೆಯುವಂತೆ ಆದಾಯ ತೆರಿಗೆ ವ್ಯಾಜ್ಯ ನ್ಯಾಯಾಧೀಕರಣ (ಐಟಿಎಟಿ) ತೀರ್ಪು ನೀಡಿದೆ.

ರೇಣು ತಾರಣಿ (80 ವರ್ಷ) ಎಂಬವರ ಸಂಬಂಧಿಕರು ಸ್ವಿಟ್ಸರ್‌ಲೆಂಡ್‌ನ‌ಲ್ಲಿ ತಾರಣಿ ಫ್ಯಾಮಿಲಿ ಟ್ರಸ್ಟ್‌ ಎಂಬ ಸಂಸ್ಥೆ ನಡೆಸುತ್ತಿದ್ದು, ಈ ಸಂಸ್ಥೆಯ ವತಿಯಿಂದ 2004ರ ಜುಲೈನಲ್ಲಿ ಜಿನಿವಾದಲ್ಲಿರುವ ಎಚ್‌ಎಸ್‌ಬಿಸಿ ಬ್ಯಾಂಕಿನಲ್ಲಿ ಜಿಡಬ್ಲ್ಯೂಯು ಇನ್ವೆಸ್ಟ್‌ ಮೆಂಟ್ಸ್‌ ಎಂಬ ಕಂಪೆನಿಯ ಹೆಸರಿನಲ್ಲಿ ಖಾತೆ ತೆರೆಯಲಾಗಿತ್ತು. ಆ ಕಂಪೆನಿಯಲ್ಲಿ ರೇಣು ತಾರಣಿ ಅವರು ಷೇರುದಾರರಾಗಿದ್ದರಿಂದ ಅವ ರನ್ನು ಆ ಖಾತೆ ಫ‌ಲಾನುಭವಿ ಮಾಲಕರೆಂದು ಪರಿಗಣಿಸಲಾಗಿತ್ತು. ಇತ್ತೀಚೆಗೆ, ಜಿ.ಡಬ್ಲ್ಯೂ.ಯು ಕಂಪೆನಿಯಿಂದ ರೇಣು ಅವರಿಗೆ 196 ಕೋಟಿ ರೂ. ಹಣ ಹರಿದುಬಂದಿದೆ.

ಐಟಿಯಿಂದ ನೋಟಿಸ್‌: ಇತ್ತ ಭಾರತದ ನಿವಾಸಿಯಾಗಿದ್ದ ರೇಣು, ಹತ್ತಾರು ವರ್ಷಗಳಿಂದ ತೆರಿಗೆ ಪಾವತಿಸುತ್ತಿ ದ್ದರೂ, ಈ ವಿದೇಶಿ ಆದಾಯದ ಮೂಲವನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸಿರಲಿಲ್ಲ. ಇದನ್ನು ಪತ್ತೆ ಹಚ್ಚಿದ್ದ ತೆರಿಗೆ ಅಧಿಕಾರಿಗಳು, ರೇಣು ಅವರಿಗೆ ನೋಟಿಸ್‌ ಜಾರಿಗೊಳಿಸಿ, ತೆರಿಗೆೆ ಪಾವತಿಸಿಯೇ ವಿದೇಶಿ ಹಣ ಪಡೆಯುವಂತೆ ಸೂಚಿಸಿದ್ದರು.

ಇದರ ವಿರುದ್ಧ ಐಟಿಎಟಿ ಮೆಟ್ಟಿಲೇರಿದ್ದ ರೇಣು, ತಾವು ಕಳೆದೊಂದು ವರ್ಷದಿಂದ ಅನಿವಾಸಿ ಭಾರ ತೀ ಯಳಾಗಿರುವುದರಿಂದ, ವಿದೇಶಿ ಮೂಲಗಳಿಂದ ಬರುವ ಆದಾಯದ ಮೇಲೆ ಭಾರತ ಸರಕಾರಕ್ಕೆ ತೆರಿಗೆ ಕಟ್ಟುವ ಆವಶ್ಯಕತೆಯಿಲ್ಲ ಎಂದು ಅಫಿಡವಿಟ್‌ ಸಲ್ಲಿಸಿದ್ದರು. ಆದರೆ ಅದನ್ನು ನ್ಯಾಯಪೀಠ ಒಪ್ಪಲಿಲ್ಲ. 2005-06ರಲ್ಲಿ ರೇಣು ಅವರು ಸಲ್ಲಿಸಿದ್ದ ಆದಾಯ ತೆರಿಗೆ ರಿಟನ್ಸ್ ಗಳಲ್ಲಿ ತಮ್ಮನ್ನು ತಾವು ಬೆಂಗಳೂರಿನ ನಿವಾಸಿಯೆಂದು, ವಾರ್ಷಿಕವಾಗಿ 1.7 ಲಕ್ಷ ರೂ. ಮಾತ್ರವೇ ಆದಾಯ ಇರುವುದಾಗಿ ಘೋಷಿಸಿದ್ದನ್ನು ಪೀಠ ಪರಿಗಣಿಸಿತು. ಅಲ್ಲದೆ, ಕೇವಲ ಒಂದು ವರ್ಷದ ಹಿಂದೆ ಅನಿವಾಸಿ ಭಾರತೀಯರಾಗಿ ಬದಲಾಗಿರುವುದು ಅಚ್ಚರಿ ತರಿಸಿದೆ. ಭಾರತದಲ್ಲಿದ್ದಾಗ ಅವರು ಘೋಷಿಸಿ ರುವ 1.7 ಲಕ್ಷ ರೂ. ಆದಾಯದ ಲೆಕ್ಕದಲ್ಲಿ 196 ಕೋಟಿ ರೂ. ಸಂಪಾದಿಸಲು ರೇಣು ಅವರಿಗೆ 11, 529 ವರ್ಷಗಳೇ ಬೇಕು. ಹಾಗಾಗಿ, ರೇಣು ವಾದವು ವಾಸ್ತವತೆಗೆ ಅನುಗುಣವಾಗಿಲ್ಲ. ಹಾಗಾಗಿ, ಅವರ ವಿದೇಶಿ ಆದಾಯಕ್ಕೆ ಸೂಕ್ತವಾದ ತೆರಿಗೆ, ದಂಡ ಕಟ್ಟಲೇಬೇಕು ಎಂದು ಆದೇಶಿಸಿದೆ.

ಟಾಪ್ ನ್ಯೂಸ್

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.