ಚೀನ ತೊರೆಯುವ ಕಂಪೆನಿಗಳಿಗೆ ಜಪಾನ್ ಪರಿಹಾರ
Team Udayavani, Jul 20, 2020, 11:12 AM IST
ಸಾಂದರ್ಭಿಕ ಚಿತ್ರ
ಟೋಕಿಯೊ: ಚೀನದಲ್ಲಿ ಕೋವಿಡ್ ಸ್ಫೋಟವಾದ ನಂತರ ಅದು ನಡೆದುಕೊಂಡ ರೀತಿಗೆ ವಿಶ್ವಾದ್ಯಂತ ಟೀಕೆಗಳು ವ್ಯಕ್ತವಾಗಿವೆ. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೇ ವಿಶ್ವಕ್ಕೆ ಸರಿಯಾಗಿ ಮಾಹಿತಿ ನೀಡದೇ ವಂಚಿಸಿದ ಅದರ ವಿರುದ್ಧ ಬಹುತೇಕ ದೇಶಗಳು ಸಿಟ್ಟಾಗಿವೆ! ಇತ್ತೀಚೆಗಷ್ಟೇ ಭಾರತ, ಚೀನದ 59 ಆ್ಯಪ್‌ಗ ಳನ್ನು ನಿಷೇಧಿಸಿತ್ತು. ಅಮೆರಿಕವೂ ಇದೇ ದಾರಿ ಹಿಡಿಯಲು ಚಿಂತಿಸುತ್ತಿದೆ. ಇದರ ಬೆನ್ನಲ್ಲೇ ಜಪಾನ್, ಚೀನದಿಂದ ಹೊರಬರುವ ತನ್ನ ಕಂಪೆನಿಗಳಿಗೆ ಪರಿಹಾರ ನೀಡಲು ಚಿಂತಿಸಿದೆ ಎಂದು ಬ್ಲೂಮ್‌ಬರ್ಗ್‌ನಲ್ಲಿ ವರದಿಯಾಗಿದೆ.
ಯಾವ ಕಂಪೆನಿಗಳು ಚೀನದಿಂದ ಮರಳಿ ದೇಶಕ್ಕೆ ಬಂದು ಸಾಮ್ರಾಜ್ಯ ವಿಸ್ತರಿಸುತ್ತವೆಯೋ ಅಥವಾ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ನೆಲೆ ಕಂಡುಕೊಳ್ಳುತ್ತವೆಯೋ ಅವಕ್ಕೆ ಆರ್ಥಿಕ ನೆರವು ನೀಡಲು ಅದು ನಿರ್ಧರಿಸಿದೆ! ಚೀನದ ಉತ್ಪನ್ನಗಳ ಮೇಲೆ ಅವಲಂಬನೆ ತಪ್ಪಿಸಲು ಜಪಾನ್ ಈ ಹೆಜ್ಜೆಯಿಟ್ಟಿದೆ. ಇನ್ನೊಂದು ರೀತಿಯಲ್ಲಿ ತನ್ನ ನೆಲೆಗಳನ್ನು ಆಕ್ರಮಿಸಿಕೊಳ್ಳಲು ಹೊಂಚು ಹಾಕುತ್ತಿರುವ ಚೀನಕ್ಕೆ ಸಡ್ಡು ಹೊಡೆಯುವ ಪ್ರಯತ್ನವೂ ಹೌದು. ಚೀನದ ಉತ್ಪನ್ನಗಳ ಮೇಲಿನ ಅವಲಂಬನೆ ತಪ್ಪಿಸಲು ಜಪಾನ್ 243.5 ಬಿಲಿಯನ್ ಯೆನ್ ಎತ್ತಿಟ್ಟಿದೆ. 70 ಬಿಲಿಯನ್ ಯೆನ್ ಚೀನದಿಂದ ಹೊರಬರುವ ಕಂಪೆನಿಗಳಿಗಾಗಿ ವಿನಿಯೋಗಿಸುತ್ತಿದೆ. ಈಗಾಗಲೇ 57 ಕಂಪೆನಿಗಳಿಗೆ 57.4 ಬಿಲಿಯನ್ ನೀಡಲು ನಿರ್ಧರಿಸಲಾಗಿದೆ. ವಿಯೆಟ್ನಾಮ್, ಮ್ಯಾನ್ಮಾರ್, ಥಾಯ್ಲೆಂಡ್‌ನಂತಹ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ನೆಲೆಯೂರಲು ಬಯಸುವ 30ಕ್ಕೂ ಹೆಚ್ಚು ಕಂಪೆನಿಗಳಿಗೂ ನೆರವು ಸಿಗಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.