ದಕ್ಷಿಣ ಕನ್ನಡ ಜಿಲ್ಲೆ: ಕೋವಿಡ್ ಸಾವಿನ ಸಂಖ್ಯೆಯಲ್ಲಿ ಏರಿಕೆ; ಆತಂಕ
Team Udayavani, Jul 20, 2020, 11:59 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ದಿಂದ ಮರಣ ಪ್ರಮಾಣ ಕೂಡ ಏರುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದರೆ ಜಿಲ್ಲೆಯಲ್ಲಿ ಮೃತಪಟ್ಟವರಲ್ಲಿ ಕೋವಿಡ್ ಕ್ಕಿಂತ ಇತರ ಆರೋಗ್ಯ ಸಮಸ್ಯೆಗಳೇ ಅಧಿಕ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜು. 18ರ ರಾಜ್ಯ ಕೋವಿಡ್ ಬುಲೆಟಿನ್ ವರದಿಯ ಪ್ರಕಾರ ದ.ಕ. ಜಿಲ್ಲೆಯಲ್ಲಿ 3,306 ಕೊರೊನಾ ಪ್ರಕರಣಗಳ ಪೈಕಿ ಮೃತಪಟ್ಟವರು ಬರೋಬ್ಬರಿ 60 ಮಂದಿ. ಹೀಗಾಗಿ ರಾಜಧಾನಿ ಬೆಂಗಳೂರು ಮಾದರಿಯಲ್ಲಿ ದ.ಕ. ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿರುವುದು ಜನರನ್ನು ಚಿಂತೆಗೀಡು ಮಾಡಿದೆ. ನೆರೆ ಜಿಲ್ಲೆ ಉಡುಪಿಯಲ್ಲಿ ಒಟ್ಟು 2,089 ಕೋವಿಡ್ ಪ್ರಕರಣಗಳ ಪೈಕಿ ಮೃತಪಟ್ಟವರ ಸಂಖ್ಯೆ 8. ಪಕ್ಕದ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ದಿಂದ ಮೃತಪಟ್ಟವರ ಸಂಖ್ಯೆ ಕೇವಲ 1. ಹೀಗಾಗಿ ಪಕ್ಕದ ಎರಡೂ ಜಿಲ್ಲೆಗಳಲ್ಲಿ ಆಗದಿರುವ ಮರಣ ಪ್ರಮಾಣ ದ.ಕ. ಜಿಲ್ಲೆಯಲ್ಲಿಯೇ ಸಂಭವಿಸಿದ್ದು ಯಾಕೆ? ಎಂಬ ಪ್ರಶ್ನೆ ಜನರದ್ದು. ಆದರೆ ಧಾರವಾಡದಲ್ಲಿ ಒಟ್ಟು 1,917 ಸೋಂಕಿತರ ಪೈಕಿ 58 ಮಂದಿ ಸಾವು, ಮೈಸೂರಿನಲ್ಲಿ 1,514 ಪ್ರಕರಣಗಳ ಪೈಕಿ 59 ಸಾವು, ಬೀದರ್‌ನಲ್ಲಿ 1,332 ಪ್ರಕರಣಗಳಲ್ಲಿ 54 ಸಾವು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ದ.ಕ. ಜಿಲ್ಲೆಗಿಂತ ಕಡಿಮೆ ಕೊರೊನಾ ಪ್ರಕರಣವಿದ್ದರೂ ಅಲ್ಲಿಯೂ ಸಾವಿನ ಪ್ರಮಾಣ ಏರಿಕೆಯಿದೆ ಎಂಬುದು ಉಲ್ಲೇಖನೀಯ.
ಹೊರ ಜಿಲ್ಲೆಯವರ ಸಾವೂ ದ.ಕ.ದ ಪಟ್ಟಿಗೆ!
ಆರೋಗ್ಯ ಇಲಾಖೆಯ ಪ್ರಕಾರ, “ದ.ಕ. ಜಿಲ್ಲೆ ಯಲ್ಲಿ ಸಾವನ್ನಪ್ಪಿದವರ ಪೈಕಿ ಬಹುತೇಕ ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರು. ಜತೆಗೆ ಬೇರೆ
ಕಾಯಿಲೆಯಿಂದ ಬಳಲುತ್ತಿದ್ದು ಅದೇ ಕಾರಣದಿಂದ ಸಾವನ್ನಪ್ಪಿದ ಪ್ರಕರಣಗಳಲ್ಲಿ ಕೊರೊನಾ ಇರುವುದು ದೃಢಪಟ್ಟವರು. ಹೀಗಾಗಿ ಕೊರೊನಾದಿಂದಾಗಿಯೇ ಮೃತಪಟ್ಟ ವರ ಸಂಖ್ಯೆ ಕಡಿಮೆ. ಜತೆಗೆ ಉಳಿದ ಜಿಲ್ಲೆಯಲ್ಲಿಯೂ ಸೋಂಕಿತರ ಪ್ರಮಾಣ ನಮಗಿಂತ ಕಡಿಮೆ ಇದ್ದರೂ ಅಲ್ಲಿ ಮರಣ ಸಂಖ್ಯೆ ನಮ್ಮಷ್ಟೇ ಇದೆ. ಈ ಮಧ್ಯೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ದ.ಕ. ಜಿಲ್ಲೆಯ ಖಾಸಗಿ/ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಇಲ್ಲಿಯವರೆಗೆ ಮರಣ ಹೊಂದಿದ 12 ಪ್ರಕರಣಗಳಲ್ಲಿ ಕೊರೊನಾ ಸೋಂಕು ಇರುವುದು ಕಂಡುಬಂದಿದೆ. ಈ ಪೈಕಿ ಭಟ್ಕಳದ ನಾಲ್ವರು, ಚಿಕ್ಕಮಗಳೂರಿನ ಇಬ್ಬರು, ಶಿರಸಿ, ರಾಮದುರ್ಗಾ, ಸಕಲೇಶಪುರ, ಚೆನ್ನಗಿರಿ, ಕುಂದಾಪುರ, ಮಡಿಕೇರಿಯ ತಲಾ ಓರ್ವರು ಮೃತಪಟ್ಟಿದ್ದಾರೆ. ಒಟ್ಟು ಸಂಖ್ಯೆಯಲ್ಲಿ ಇದೂ ಕೂಡ ಸೇರ್ಪಡೆಯಾಗಿದೆ. ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಣ ಪ್ರಮಾಣ ಏರಿಕೆ ಎನ್ನಲಾಗುವುದು ಎನ್ನುತ್ತಾರೆ.
ದ.ಕ. ಜಿಲ್ಲೆಯಲ್ಲಿ ಕೋವಿಡ್ ದಿಂದಲೇ ಸಾವನ್ನಪ್ಪಿದವರ ಸಂಖ್ಯೆ ಬಹಳಷ್ಟು ಕಡಿಮೆ. ಬದಲಾಗಿ, ಕಿಡ್ನಿ, ಮಧುಮೇಹ, ಕ್ಯಾನ್ಸರ್ ಸೇರಿದಂತೆ ವಿವಿಧ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದವರು ಸಾವನ್ನಪ್ಪಿದ್ದಾರೆ. ಆದರೆ ಅವರ ಗಂಟಲದ್ರವ ಪರಿಶೀಲಿಸಿದಾಗ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಹೀಗಾಗಿ ಬಹಳಷ್ಟು ಪ್ರಕರಣ ಕೊರೊನಾದಿಂದಲೇ ಎಂದು ಹೇಳಲು ಆಗದು.
– ಡಾ| ರತ್ನಾಕರ್, ದ.ಕ. ಡಿಎಚ್‌ಒ (ಪ್ರಭಾರ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.