ಶಬರಿಮಲೆ: ಭೂಮಿ ಸ್ವಾಧೀನಕ್ಕೆ ಚಿಂತನೆ
Team Udayavani, Jul 20, 2020, 12:17 PM IST
ತಿರುವನಂತಪುರ: ಶಬರಿಮಲೆ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಚೆರುವಾಲಿ ಎಸ್ಟೇಟ್ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ರಾಜ್ಯ ಸರಕಾರ ಹೊಸ ಕಾನೂನಿನ ಪ್ರಕಾರ, ಮಾಲಕತ್ವ ವಿವಾದದಲ್ಲಿದ್ದರೂ ಪರಿಹಾರ ಪಾವತಿಸುವ ಮೂಲಕ ಭೂಮಿಯನ್ನು ವಶ ಪಡಿಸಿಕೊಳ್ಳಲು ಮುಂದಾಗಿದೆ.
ಚೆರುವಾಲಿ ಎಸ್ಟೇಟ್ ದೃಷ್ಟಿಯಿಂದ ಕಾನೂನು ರೂಪಿಸಲಾಗಿದ್ದರೂ, ಈ ಹಿಂದೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಸರಕಾರ ಪರಿಹಾರ ಪಾವತಿಸಬೇಕಾಗ ಬಹುದು. ಭೂ ಸುಧಾರಣ ಕಾಯ್ದೆ ಪ್ರಕಾರ, 15 ಎಕರೆಗೂ ಹೆಚ್ಚು ಭೂಮಿಯನ್ನು ತೋಟವಾಗಿ ಪರಿಗಣಿಸಬಹುದು.
ಭೂಮಿಯನ್ನು ಇತರ ಉದ್ದೇಶಗಳಿ ಗಾಗಿ ಬಳಸಿದರೆ, 15 ಎಕರೆ ಮಿತಿಯನ್ನು ಮೀರಿದ ಭೂಮಿಯನ್ನು “ಮೈಚಾ ಭೂಮಿ’ (ಹೆಚ್ಚುವರಿ ಭೂಮಿ) ಎಂದು ಪರಿಗಣಿಸಲಾಗುತ್ತದೆ. ಭೂಮಿಗೆ ಮತ್ತು ನಿರ್ಮಾಣಗಳಿಗೆ ಪರಿಹಾರ ನೀಡಲು ಕಾನೂನು ಪ್ರಸ್ತಾವಿ ಸಿದೆ. ಸೀಮಿತ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದರೂ ಮಾಲಕತ್ವಕ್ಕೆ ಸಂಬಂಧಿಸಿದ ಒಪ್ಪಂದ ಇಡೀ ಭೂಮಿಗೆ ಅನ್ವಯವಾಗುತ್ತದೆ ಎಂದು ಕಾನೂನು ಹೇಳುತ್ತದೆ.ಸ್ವಾಧೀನಪಡಿಸಿಕೊಂಡ ಭೂಮಿ ಸೇರಿದಂತೆ ಉಳಿದ ಜಮೀನಿನ ಮಾಲಕತ್ವವೂ ಆ ವ್ಯಕ್ತಿಯದ್ದಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಸಾರಾಂಗೆ ರಾಜಸ್ಥಾನ ಹೈಕೋರ್ಟ್ ಜಾಮೀನು
House arrest: ಮಾರಾಮಾರಿ ಪ್ರಕರಣ; ಕೆಟಿಆರ್ ಸೇರಿ ಬಿಆರೆಸ್ ಪ್ರಮುಖರ ಗೃಹ ಬಂಧನ
Pathanamthitta: ದಲಿತ ಬಾಲಕಿಯ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 44 ಜನರ ಬಂಧನ
MVA: ಏಕಾಂಗಿ ಸ್ಪರ್ಧೆ ಮಾತು: ಅಘಾಡಿ ಬಿರುಕು ವದಂತಿಗೆ ಪುಷ್ಟಿ ನೀಡಿದ ಪವಾರ್
ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.