![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 20, 2020, 5:54 PM IST
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೋವಿಡ್ -19 ಸೋಮಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ತ್ರಿಶತಕದ ಗಡಿ ದಾಟಿದೆ.
ಜಿಲ್ಲೆಯಲ್ಲಿ ಇಂದು ಒಂದೇ ದಿನ 43 ಮಂದಿಗೆ ಕೋವಿಡ್-19 ಸೋಂಕು ಪಾಸಿಟಿವ್ ಆಗಿದೆ.
ಜಿಲ್ಲೆಯ ಕೊಪ್ಪದಲ್ಲಿ 17 ಜನರಿಗೆ, ಚಿಕ್ಕಮಗಳೂರಿನಲ್ಲಿ12 ಜನರಿಗೆ, ತರೀಕೆರೆಯಲ್ಲಿ ಐವರಿಗೆ, ಕಡೂರಿನಲ್ಲಿ ನಾಲ್ಕು ಮಂದಿಗೆ, ಶೃಂಗೇರಿಯಲ್ಲಿ ಮೂವರಿಗೆ, ಎನ್.ಆರ್ ಪುರದಲ್ಲಿ ಇಬ್ಬರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.
ಇಂದಿನ 43 ಹೊಸ ಕೋವಿಡ್ ಪ್ರಕರಣಗಳಿಂದ ಜಿಲ್ಲೆಯ ಸೋಂಕಿತರ ಸಂಖ್ಯೆ 334ಕ್ಕೆ ಏರಿಕೆಯಾಗಿದೆ. ಇವರಲ್ಲಿ 171 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಜಿಲ್ಲೆಯ ಒಂಬತ್ತು ಮಂದಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.