ಮೆಟ್ರೋ ಕಾಮಗಾರಿ ವೇಗಕ್ಕೆ ಚೀನಾ ಬ್ರೇಕ್

ಮೆಟ್ರೋ ಉಪಕರಣಗಳ ಆಮದಿಗೆ ತೊಡಕು

Team Udayavani, Jul 21, 2020, 7:15 AM IST

ಮೆಟ್ರೋ ಕಾಮಗಾರಿ ವೇಗಕ್ಕೆ ಚೀನಾ ಬ್ರೇಕ್

ಬೆಂಗಳೂರು: “ನಮ್ಮ ಮೆಟ್ರೋ’ ರೈಲು ಯೋಜನೆಯನ್ನು ಇದುವರೆಗೆ ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂಬ ಧಾವಂತ ಇತ್ತು. ಆದರೆ, ಈಗ ಮಂದಗತಿಯಲ್ಲಿ ಕೊಂಡೊಯ್ಯುವ ಚಿಂತನೆ ನಡೆದಿದೆಯೇ?

–  “ಹೌದು’ ಎನ್ನುತ್ತವೆ ಮೂಲಗಳು. ಯಾಕೆಂದರೆ, ಲಿಫ್ಟ್, ಎಸ್ಕಲೇಟರ್‌, ಸಿಗ್ನಲಿಂಗ್‌ ಒಳಗೊಂಡಂತೆ ಎಲೆಕ್ಟ್ರಿಕಲ್‌ ಮತ್ತು ಮೆಕಾನಿಕಲ್‌ ಉಪಕರಣಗಳು, ಮೆಟ್ರೋ ಬೋಗಿಗಳು ಒಟ್ಟಾರೆ ಯೋಜನೆಯಲ್ಲಿ ಅಗತ್ಯವಿರುವ ಶೇ. 60-70ರಷ್ಟು ಉಪಕರಣಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಚೀನಾದಿಂದಲೇ ಪೂರೈಕೆ ಆಗುತ್ತವೆ. ಆದರೆ, ಕೋವಿಡ್ ಹಾವಳಿ ಬೆನ್ನಲ್ಲೇ ಭಾರತ-ಚೀನಾ ನಡುವಿನ ಸಂಬಂಧ ಪೂರಕವಾಗಿಲ್ಲ. ಇದೆಲ್ಲವೂ ತಿಳಿಯಾಗುವವರೆಗೆ ಕಾಮಗಾರಿಯನ್ನು ನಿಧಾನಗತಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಆಲೋಚನೆ ನಡೆದಿದೆ.

ಕಾರಣ ಏನು?: ಪ್ರಸ್ತುತ ಭಾರತ-ಚೀನಾ ನಡುವಿನ ಬಾಂಧವ್ಯ ಯಥಾಸ್ಥಿತಿಗೆ ಮರಳಬಹುದು ಅಥವಾ ರೈಲು, ಟಿಬಿಎಂನಂತಹ ಉಪಕರಣಗಳನ್ನು ಸ್ಥಳೀಯವಾಗಿ ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಬಹುದು ಅಥವಾ ಇನ್ನೂ ಗುತ್ತಿಗೆ ನೀಡದ  ಹಲವು ಕಾಮಗಾರಿಗಳಿದ್ದು, ಅವುಗಳನ್ನು ಚೀನಾ ಹೊರತಾದ ಕಂಪನಿಗಳಿಗೆ ನೀಡಬಹುದು. ಆದ್ದರಿಂದ “ನಿಧಾನಗತಿ ತಂತ್ರ’ಕ್ಕೆ ಮೊರೆಹೋಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆರ್‌.ವಿ. ರಸ್ತೆ- ಬೊಮ್ಮಸಂದ್ರ ಮಾರ್ಗದ ಸಿಗ್ನಲಿಂಗ್‌ ಗೆ ಟೆಂಡರ್‌ ಪ್ರಕ್ರಿಯೆ ಫೆಬ್ರುವರಿಯಲ್ಲೇ ಪೂರ್ಣಗೊಂಡಿದ್ದು, ಜರ್ಮನಿ ಮೂಲದ ಸೀಮನ್ಸ್‌ ಎಜಿ ಕಂಪನಿ ಅತಿ ಕಡಿಮೆ (251 ಕೋಟಿ ರೂ.) ಬಿಡ್‌ ಮಾಡಿದೆ. ಆದರೆ, ಇದುವರೆಗೆ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಅಂದಹಾಗೆ, ಈ ಕಂಪನಿ ಕೂಡ ಚೀನಾದಿಂದಲೇ ಉಪಕರಣಗಳನ್ನು ತಯಾರಿಸಿ, ಆ ಮೂಲಕ ಪೂರೈಕೆ ಮಾಡುತ್ತದೆ.

ಈ ಮಧ್ಯೆ ಬಹುತೇಕ ಪೂರ್ಣಗೊಂಡ ಮೈಸೂರು ರಸ್ತೆ-ಕೆಂಗೇರಿ ಹಾಗೂ ಕನಕಪುರ ರಸ್ತೆಯ ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್‌ ನಡುವಿನ ಮಾರ್ಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಮಧ್ಯೆ ಬೈಯಪ್ಪನಹಳ್ಳಿ- ವೈಟ್‌ ಫೀಲ್ಡ್‌- ಐಟಿಪಿಎಲ್‌, ನಾಗಸಂದ್ರ- ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಹಾಗೂ ಆರ್‌.ವಿ. ರಸ್ತೆ- ಬೊಮ್ಮಸಂದ್ರ ಮಾರ್ಗಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ. ನಿಧಾನಗತಿ ನಿರಾಕರಣೆ: ನಿಧಾನಗತಿ ಧೋರಣೆಯನ್ನು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಳ್ಳಿಹಾಕುತ್ತಾರೆ. “ಯೋಜನೆಗೆ ಸಂಬಂಧಿಸಿದ ಯಂತ್ರೋಪಕರಣಗಳಿಗಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಚೀನಾ ಅವಲಂಬನೆ ಇರುವುದು ನಿಜ. ಹಾಗಂತ, ಯೋಜನೆ ಪ್ರಗತಿಯನ್ನು ನಿಧಾನಗತಿಯಲ್ಲಿ ಅನುಸರಿಸಲಾಗುತ್ತಿಲ್ಲ. ಕೋವಿಡ್‌ -19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಇತ್ತು. ಈ ಮಧ್ಯೆ ಆತಂಕಗೊಂಡ ಕೆಲ ಕಾರ್ಮಿಕರು ಶಿಬಿರಗಳನ್ನು ತೊರೆದು, ತವರಿಗೆ ಮರಳಿದ್ದಾರೆ. ಪರಿಣಾಮ ಕಾಮಗಾರಿಗೆ ತುಸು ಹಿನ್ನಡೆ ಆಗಿದೆ ಅಷ್ಟೇ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸ್ವಾವಲಂಬನೆಗೆ ಸಕಾಲ :  ಒಂದೆಡೆ ಚೀನಾ ಉತ್ಪನ್ನಗಳನ್ನು ತಿರಸ್ಕರಿಸಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಈಹಿನ್ನೆಲೆಯಲ್ಲಿ ಮೆಟ್ರೋ ಯೋಜನೆ ಅನುಷ್ಠಾನದಲ್ಲಿ ತಕ್ಕಮಟ್ಟಿಗೆ ಸ್ವಾವಲಂಬನೆ ಸಾಧಿಸಲೂ ಇದು ಸಕಾಲ. ಈಗಾಗಲೇ ಹಲವು ಕಾಮಗಾರಿಗಳಿಗೆ ಟೆಂಡರ್‌ ನೀಡಿರಬಹುದು. ಆದರೆ, ಇನ್ನೂ ಹಲವು ಮಾರ್ಗಗಳಿಗೆ ಟೆಂಡರ್‌ ಪ್ರಕ್ರಿಯೆ ಆಗಿಲ್ಲ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಇನ್ನೂ ಮೆಟ್ರೋ ಜಾಲ ವಿಸ್ತರಣೆ ಆಗಲಿದೆ. ಅಂತಹ ಕಡೆ ಪರ್ಯಾಯಗಳನ್ನು ಹುಡುಕುವುದರ ಜತೆಗೆ ರೈಲು, ಟಿಬಿಎಂಮತ್ತಿತರ ಯಂತ್ರೋಪಕರಣಗಳನ್ನು ಸ್ಥಳೀಯವಾಗಿಯೇ ತಯಾರಿಸುವ ಬಗ್ಗೆ ಚಿಂತನೆ ನಡೆಯಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಸುರಂಗದ ಮೇಲೂ ಪರಿಣಾಮ :  “ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗ ಮಾರ್ಗ ನಿರ್ಮಾಣದ ಮೇಲೂ ಭಾರತ-ಚೀನಾ ನಡುವಿನ ಸಂಘರ್ಷ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಗುತ್ತಿಗೆ ಪಡೆದ ಚೀನಾ ರೈಲ್ವೆ ಕನ್‌ ಸ್ಟ್ರಕ್ಷನ್‌ ಹೆವಿ ಇಂಡಸ್ಟ್ರಿ (ಸಿಆರ್‌ಸಿಎಚ್‌ಐ) ಸುರಂಗ ಕೊರೆಯಲು ಅಗತ್ಯವಿರುವ ಎರಡು ಟನಲ್‌ ಬೋರಿಂಗ್‌ ಮಷಿನ್‌ (ಟಿಬಿಎಂ)ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಪೈಕಿ ಒಂದನ್ನು ಶಿವಾಜಿನಗರ ನಿಲ್ದಾಣ ಮತ್ತೂಂದು ಕಂಟೋನ್ಮೆಂಟ್‌ ಬಳಿ ಕಾರ್ಯಾಚರಣೆಗೆ ಅಣಿಗೊಳಿಸಲಾಗಿದೆ. ಆದರೆ, ಇನ್ನೂ ಎರಡು ಟಿಬಿಎಂಗಳ ಅವಶ್ಯಕತೆಯಿದ್ದು, ಚೀನಾದಿಂದ ಬರಬೇಕಿದೆ. ಇದರ ಪೂರೈಕೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಅಲ್ಲದೆ, ಕಾರ್ಯಾಚರಣೆ ವೇಳೆ ಯಂತ್ರಗಳಲ್ಲಿನ ಯಾವುದೇ ಉಪಕರಣ ಹಾಳಾದರೂ ಚೀನಾದಿಂದಲೇ ಪೂರೈಕೆ ಆಗಬೇಕು. ಜತೆಗೆ ಈ ಯಂತ್ರವನ್ನು ಮುನ್ನಡೆಸುವ ತಂಡ ಕೂಡ ಅಲ್ಲಿಂದ ಬರಬೇಕಿದ್ದು, ವೀಸಾ ಮತ್ತಿತರ ಅಡ್ಡಿ ಆತಂಕಗಳು ಎದುರಾಗಲಿವೆ.

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

2-bng

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ

Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ

Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್‌ ಸಮಸ್ಯೆ

Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್‌ ಸಮಸ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.