ಕಾನೂನು ಪಾಲನೆ ಸರಕಾರದ ಕರ್ತವ್ಯ; ಉತ್ತರ ಪ್ರದೇಶ ಸರಕಾರಕ್ಕೆ ಸಲಹೆ ನೀಡಿದ ಸುಪ್ರೀಂಕೋರ್ಟ್
ದುಬೆ ವಿರುದ್ಧದ ಆರೋಪಗಳಿದ್ದರೂ ಜಾಮೀನು ಸಿಕಿದ್ದ ಬಗ್ಗೆ ಅಚ್ಚರಿ ಪಟ್ಟ ಕೋರ್ಟ್
Team Udayavani, Jul 21, 2020, 8:20 AM IST
ಹೊಸದಿಲ್ಲಿ/ಕಾನ್ಪುರ/ಲಕ್ನೋ: “ವಿಕಾಸ್ ದುಬೆಯಂಥ ವ್ಯಕ್ತಿ ವಿರುದ್ಧ ಗುರುತರ ಆರೋಪಗಳಿದ್ದರೂ, ಆತ ಬಿಡುಗಡೆಯಾಗಿದ್ದದ್ದು ಆಘಾತ ತಂದಿದೆ. ಇದು ನಿಜಕ್ಕೂ ವ್ಯವಸ್ಥೆಯ ವೈಫಲ್ಯ. ಆತನಿಗೆ ಜಾಮೀನು ನೀಡಿದ ಆದೇಶಗಳಿಗೆ ಸಂಬಂಧಿಸಿ ವರದಿ ನೀಡಬೇಕು. ಕಾನೂನು ಪಾಲನೆ ಸರಕಾರದ ಕರ್ತವ್ಯ’ – ಇದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ದೆ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯ ಪೀಠ ಉತ್ತರ ಪ್ರದೇಶ ಸರಕಾರಕ್ಕೆ ಸಲಹೆ. ರೌಡಿ ವಿರುದ್ಧ ನಡೆದ ಎನ್‌ಕೌಂಟರ್ ಬಗ್ಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ನೇತೃತ್ವದ ಸಮಿತಿ ಮೂಲಕ ತನಿಖೆ ನಡೆಸುವ ಬಗ್ಗೆ ಪರಿಶೀಲನೆ ನಡೆಸ ಬೇಕು ಎಂದೂ ನ್ಯಾಯಪೀಠ ಸರಕಾರಕ್ಕೆ ಸಲಹೆ ಮಾಡಿದೆ.
ವಿಕಾಸ್ ದುಬೆ ವಿರುದ್ಧ ಗುರುತರ ಆರೋಪಗಳಿ ದ್ದರೂ ಕೂಡ ಆತ ಜೈಲಿನಲ್ಲಿ ಇರದೆ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದದ್ದು ಆಘಾತ ತಂದಿದೆ. ಇದು ನಿಜಕ್ಕೂ ವ್ಯವಸ್ಥೆಯ ವೈಫಲ್ಯವಾ ಗಿದೆ. ಸರಕಾರ ಯಾವತ್ತಿದ್ದರೂ ಕಾನೂನನ್ನು ಎತ್ತಿ ಹಿಡಿಯುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಅದು ಅದರ ಕರ್ತವ್ಯವೂ ಆಗಿದೆ ಎಂದು ನ್ಯಾ| ಎ.ಎಸ್. ಬೋಪಣ್ಣ ಮತ್ತು ನ್ಯಾ| ವಿ. ರಾಮ ಸುಬ್ರ ಮಣಿಯನ್ ಅವರನ್ನೊಳಗೊಂಡ ನ್ಯಾಯ ಪೀಠ ಸ್ಪಷ್ಟವಾಗಿ ಹೇಳಿತು. ಅಸುನೀಗಿರುವ ರೌಡಿಗೆ ಜಾಮೀನು ನೀಡಲಾಗಿದ್ದ ಸಂದರ್ಭಗಳ ಬಗ್ಗೆ ವರದಿ ನೀಡಬೇಕು. ತನಿಖೆ ನಡೆಸುವ ಸಮಿತಿಯಲ್ಲಿ ಬದಲು ಮಾಡಬೇಕು. ಅದರ ಕರಡು ನಿಯಮಗಳನ್ನು ಜು. 22ರಂದು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರಕಾರಕ್ಕೆ ರ್ಕೋಟ್ ಸೂಚನೆ ನೀಡಿತು. ಉತ್ತರ ಪ್ರದೇಶ ಸರಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಿವೃತ್ತ ನ್ಯಾಯಮೂರ್ತಿಗಳಾಗಿರುವ ಶಶಿಕಾಂತ್ ಅಗ ರ್ವಾಲ್ ನೇತೃತ್ವದ ಏಕಸದಸ್ಯ ಆಯೋಗದ ಮೂಲಕ ಎನ್‌ಕೌಂಟರ್ ಬಗ್ಗೆ ತನಿಖೆಗೆ ನಡೆಸಲಾ ಗುತ್ತದೆ ಎಂದು ಅಫಿಡವಿಟ್ ಮೂಲಕ ಅರಿಕೆ ಮಾಡಿಕೊಂಡರು.
6 ಬಾರಿ ಗುಂಡಿನ ದಾಳಿ: ಎನ್‌ಕೌಂಟರ್‌ನಲ್ಲಿ ಕುಖ್ಯಾತ ಪಾತಕಿ ವಿಕಾಸ್ ದುಬೆಗೆ ಆರು ಬಾರಿ ಗುಂಡು ಹಾರಿಸಲಾಗಿದ್ದು, ಈ ಪೈಕಿ ಮೂರು ಗುಂಡುಗಳು ಆತನ ದೇಹವನ್ನು ಹೊಕ್ಕಿವೆ. ಆರು ಬುಲೆಟ್ ಗಾಯಗಳು ಸೇರಿದಂತೆ 10 ಕಡೆ ಗಾಯವಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ದುಬೆ ದೇಹದ ಎಡಭಾಗದ ಎದೆಯಲ್ಲಿ 2 ಬುಲೆಟ್‌ಗಳು ಹಾಗೂ ಬಲಭಾಗ ಭುಜದಲ್ಲಿ ಒಂದು ಬುಲೆಟ್ ಹೊಕ್ಕಿವೆ. ಪಿಸ್ತೂಲ್ ಗುಂಡಿನ ಗಾಯಗಳು ಹಾಗೂ ರಕ್ತಸ್ರಾವ ದಿಂದ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಉತ್ತರ ಪ್ರದೇಶದಲ್ಲಿ 8 ಪೊಲೀಸರ ಹತ್ಯೆ ಸೇರಿದಂತೆ 60ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಕಾಸ್ ದುಬೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಸೆರೆ ಸಿಕ್ಕಿದ್ದನು. ಅಲ್ಲಿಂದ ಕಾನ್ಪುರಕ್ಕೆ ಕರೆ ತರುವಾಗ ಕಾರು ಅಪಘಾತವಾಗಿತ್ತು. ಈ ವೇಳೆ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿ ದಾಗ ಪೊಲೀಸರು ನಡೆಸಿದ ಗುಂಡಿನ ದಾಳಿಯಿಂದ ಆತ ಮೃತಪಟ್ಟಿದ್ದನು.
ವಿಕಾಸ್ ದುಬೆಗೆ ಶಸ್ತ್ರಾ ಸ್ತ್ರ ಪೂರೈಸಿದ್ದ ಆಪ್ತ ಸೆರೆ
ಪಾತಕಿ ವಿಕಾಸ್ ದುಬೆಗೆ ಹಣಕಾಸಿನ ನೆರವು ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಜೈ ಬಾಜ್‌ಪೇಯಿ, ಆತನ ಸಹಚರನನ್ನು ಪೊಲೀಸರು ಬಂಧಿ ಸಿದ್ದಾರೆ. ಪೊಲೀಸರ ಹತ್ಯೆಗೆ ನೆರವಾಗು ವಂತೆ ಜು.1ರಂದು ಬಾಜ್‌ಪೇಯಿಗೆ ದುಬೆ ಕರೆ ಮಾಡಿದ್ದನು. ಬಳಿಕ ಮರು ದಿನವೇ ಬಾಜ್‌ಪೇಯಿ ತನ್ನ ಆಪ್ತ ಪ್ರಶಾಂತ್ ಶುಕ್ಲ ಜೊತೆ ಬಿಕ್ರು ಹಳ್ಳಿಗೆ ತೆರಳಿ, 2 ಲಕ್ಷ ರೂ.ನಗದು, 22 ನಾಡ ಬಂದೂಕು, 32 ಬೋರ್ ರಿವಾಲ್ವರ್‌ಗಳನ್ನು ವಿಕಾಸ್ ದುಬೆಗೆ ನೀಡಿದ್ದನು. ಜು.3ರಂದು ದುಬೆ ಗ್ಯಾಂಗ್ ಬಿಕ್ರು ಹಳ್ಳಿಯಲ್ಲಿ ಪೊಲೀಸರನ್ನು ಹತ್ಯೆಗೈದಿತ್ತು. ಜು.4ರಂದು ದುಬೆ ಆಪ್ತ ಬಾಜ್‌ಪೇಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಆತನನ್ನು ಬಂಧಿಸಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.