ಜೋಗದ ಗುಂಡಿಯಲ್ಲಿ ಈಜಿನ ಮೋಜು

ಜೋಗದ ಗುಂಡಿಯಲ್ಲಿ ಈಜಿನ ಮೋಜು

Team Udayavani, Jul 21, 2020, 12:51 PM IST

ಜೋಗದ ಗುಂಡಿಯಲ್ಲಿ ಈಜಿನ ಮೋಜು

ಸಾಂದರ್ಭಿಕ ಚಿತ್ರ

ಸಹೋದ್ಯೋಗಿಗಳೊಂದಿಗೆ ಜೋಗಕ್ಕೆ ಪ್ರವಾಸ ಹೊರಡುವು ದೆಂದು ತೀರ್ಮಾನವಾಯಿತು. ಇದಕ್ಕಾಗಿ ರವಿವಾರದ ಆಚೀಚೆ ಬರುವ ಸಾರ್ವಜನಿಕ ರಜೆಗಳನ್ನು ಹೊಂದಿಸಿ ಕೊಂಡು ಹೊರಡುವ ದಿನವನ್ನೂ ಗೊತ್ತುಮಾಡಿ ದೆವು. ಬಾಡಿಗೆ ಕಾರೊಂದರಲ್ಲಿ ಹೊರಟ ನಮಗೆ, ಜೋಗದ ಸಿರಿ ಬೆಳಕನ್ನು ಕಾಣುವ ತವಕ; ಸಂಭ್ರಮ. ಜೋಗ ತಲುಪಿದಾಗ ಸೂರ್ಯ ನಡುನೆತ್ತಿಯನ್ನು ಏರಿರಲಿಲ್ಲ. ಹೀಗಾಗಿ ಬಿಸಿಲಿನ ತಾಪ ಕಡಿಮೆಯಿತ್ತು. ಸೆಕೆಗಾಲದ ಆರಂಭವಾ ದರೂ ಜೋಗದಲ್ಲಿ ನೀರಿತ್ತು. ನಾವು ನಿಂತ ಮಟ್ಟದಿಂದ ಪ್ರಪಾತಕ್ಕೆ ಧುಮ್ಮಿಕ್ಕುವ ಜಲಧಾರೆಗಳನ್ನು ನೋಡಿ ಮೂಕವಿಸ್ಮಿತರಾದೆವು.

ಜೋಗದ ಸಿರಿಯನ್ನು ಮೇಲಿನಿಂದ ನೋಡುವುದೇನು… ಕೆಳಗಿಳಿದು ಕಾಣೋಣ ಎನ್ನುವ ಹುಚ್ಚು ಹುರುಪಿನಲ್ಲಿ ನಾವು ಕೆಳಗಿಳಿಯಲು ಆರಂಭಿಸಿದೆವು. ಕಲ್ಲು, ಮಣ್ಣು, ಎತ್ತರ, ತಗ್ಗಿನ ಆ ಕಾಲುಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ. ಉಮೇದಿನಿಂದ ಇಳಿಯುವುದೇನೋ ಇಳಿದೆವು. ಅಲ್ಲಿ ಆಳದಿಂದ ಕತ್ತೆತ್ತಿ ನೋಡಿದರೆ ಮೇಲಿದ್ದವರು ಚಿಕ್ಕ ಚಿಕ್ಕ ಆಕೃತಿಗಳಲ್ಲಿ ಲಿಲ್ಲಿಪುಟ್‌ನಂತೆ ಕಾಣುತ್ತಿದ್ದರು. ನದಿಪಾತ್ರದಲ್ಲಿ ನಡೆದ ನಾವು ಜೋಗದ ಗುಂಡಿಯ ಹತ್ತಿರ ತಲುಪಿದೆವು.
ಜಲಪಾತದ ರಭಸಕ್ಕೆ ನೀರಧಾರೆಯ ತುಂತುರುಗಳು ಗಾಳಿಗೆ ತೂರಾಡಿ ನಮ್ಮನ್ನೆಲ್ಲ ತೋಯಿಸಿದವು. ಅಷ್ಟು ದೂರ ಹೋದ ನಂತರ ನೀರು ಕಂಡ ನಮಗೆ ಸ್ನಾನ
ಮಾಡದೆ ಬರಲು ಮನಸ್ಸಾಗಲಿಲ್ಲ. ಹೀಗಾಗಿ ಈಜು ಗೊತ್ತಿದ್ದ ನಾನು ಮೊದಲು ನೀರಿಗಿಳಿದೆ. ಉಳಿದವರು ನನ್ನನ್ನು ಹಿಂಬಾಲಿಸಿದರು. ಜೋಗದ ಗುಂಡಿಯ
ಒಂದಷ್ಟು ದೂರ ಈಜಿದ್ದೂ ಆಯಿತು. ಬಳಿಕ ಸುಸ್ತಾಗಿ ಮೇಲೆ ಬಂದ ನಾವು ನದಿಪಾತ್ರದಲ್ಲಿರುವ ಕೋಡುಗಲ್ಲನ್ನೇರಿ ಫೋಟೊ ಕ್ಲಿಕ್ಕಿಸಿಕೊಂಡೆವು.

ಹಿಂತಿರುಗಿ ಬರುವಾಗ ನಾವು ಆ ಗುಂಡಿಯಲ್ಲಿ ಈಜಿದ ಲಕ್ಷಣ ಕಂಡ ಒಬ್ಬರು ಗುಂಡಿಯಲ್ಲಿ ಈಜಿದಿರೇನು….ಅಲ್ಲಿ ಮೊಸಳೆಗಳಿವೆ’ ಎನ್ನಬೇಕೇ? ಮೊಸಳೆಗಳು ಇದ್ದವೋ ಇಲ್ಲವೋ ಆದರೆ ಅವರ ಮಾತು ಮಾತ್ರ ಕ್ಷಣಕಾಲ ನಮ್ಮೆದೆ ಯಲ್ಲಿ ಭಯವನ್ನು ಹುಟ್ಟುಹಾಕಿತು. ಮಾತಿಲ್ಲದೆ, ಬಂದ ದಾರಿಯಲ್ಲಿ ಮೇಲೇರತೊಡಗಿದೆವು. ಮೇಲೆ ಹತ್ತುವ ಕಷ್ಟ, ಬಿಸಿರಕ್ತದ ಯುವಕರಾದ ನಮ್ಮನ್ನೂ ಹೈರಾಣಾಗಿಸಿತು. ಅರ್ಧ ದಾರಿ ಕ್ರಮಿಸಿರ ಬೇಕು. ಏದುಸಿರು ಬಿಡುತ್ತಿದ್ದ ನಾನು ಒಂದಡೆ ಕುಸಿದು ಕುಳಿತೆ. ಜೊತೆಯಲ್ಲಿ ದ್ದವರು ಗಾಬರಿಯಾದರು. ನನಗೆ ಆಯಾಸದಿಂದ ಮಾತೂ ಹೊರಡಲಿಲ್ಲ. ಅವರೆಲ್ಲ ನನ್ನ ಎದೆ, ಬೆನ್ನು
ನೀವತೊಡಗಿದಂತೆ ಕೊಂಚ ಹಾಯೆನಿಸಿತು. ಒಂದಿಷ್ಟು ನೀರನ್ನು ಹೊಟ್ಟೆಗಿಳಿಸಿ ಮತ್ತೆ ಅವರೊಂದಿಗೆ ನಿಧಾನಕ್ಕೆ ಹೆಜ್ಜೆಹಾಕಿದೆ.

ಮೇಲೆ ಬಂದ ನಂತರ ನೆಮ್ಮದಿಯ ನಿಟ್ಟುಸಿರಿಟ್ಟೆ. ಅನಂತರ ಬಹಳಷ್ಟು ಸಲ ನಾನು ಜೋಗಕ್ಕೆ ಹೋಗಿದ್ದೇನೆ. ಹೋದಾಗಲೆಲ್ಲ ಈ ನೆನಪು ಮಾತ್ರ ನನ್ನನ್ನು ಬಿಡದೆ ಕಾಡಿದ್ದಿದೆ. ಮೊದಲ ಸಲ ಸವಿದ ಜೋಗದ ಸೊಬಗನ್ನು ಜೊತೆಯಾದ ಆತಂಕವನ್ನು ಎಂದಿಗಾದರೂ ಮರೆಯು ವುದುಂಟೇ?

ಧರ್ಮಾನಂದ ಶಿರ್ವ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.