ತಂದೆ ಕಲಿಸಿದ ಪಾಠ ; ಮಗಳ ಬದುಕಿನಲ್ಲಿ ಬೆಳಕು
Team Udayavani, Jul 21, 2020, 2:00 PM IST
ಸಾಂದರ್ಭಿಕ ಚಿತ್ರ
ಹೆಣ್ಣು ಮಕ್ಕಳಿಗೆ ಅಪ್ಪನೇ ಪ್ರಪಂಚ. ನಿಜಕ್ಕೂ ಅಪ್ಪನದು ಹೋರಾಟದ ಬದುಕು. ತಮ್ಮ ಬದು ಕಿನ ಕೊನೆಯ ದಿನದವರೆಗೂ ಬೆವರು ಹರಿಸಿ ದುಡಿ ಯುತ್ತಾನೆ. ತನ್ನ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅಪ್ಪ ನಿರಂತರವಾಗಿ ಪ್ರಯತ್ನ ಪಡುತ್ತಿರುತ್ತಾನೆ. ಅದರಲ್ಲಿ ಶಂಕರಪ್ಪನು ಕೂಡ ಒಬ್ಬ. ಅರಕೆರೆ ಎಂಬ ಊರಲ್ಲಿ ಶಂಕರಪ್ಪ ಮತ್ತು ರಾಜಮ್ಮ ಎಂಬ ದಂಪತಿ ಇದ್ದರು. ವೃತ್ತಿಯಲ್ಲಿ ಶಂಕರಪ್ಪ ಸರಕಾರಿ ಶಾಲಾ ಶಿಕ್ಷಕ. ದಂಪ ತಿಗೆ ಒಬ್ಬಳೇ ಮಗಳು ವಿದ್ಯಾ.
ಚೆನ್ನಾಗಿಯೇ ಓದುತ್ತಿದ್ದ ವಿದ್ಯಾ ಕಾಲಕ್ರಮೇಣ ಗೆಳೆಯರ ಸಹವಾಸದಿಂದ ಓದಿನ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಳು. ಅವಳ ವಿದ್ಯಾಭ್ಯಾಸದ ಬಗ್ಗೆ ತಂದೆ-ತಾಯಿ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು. ಹೀಗಿರಬೇಕಾದರೆ ವಿದ್ಯಾ ಎಸೆಸೆಲ್ಸಿ ಪರೀಕ್ಷೆಯಲ್ಲಿ ಒಂದು ಸಲ ಫೇಲ್ ಆಗು ತ್ತಾಳೆ. ಶಂಕರಪ್ಪ ತಮ್ಮ ಮಗಳ ಬಗ್ಗೆ ಯಾವುದೇ ಬೇಜಾರು ಮಾಡಿಕೊಳ್ಳದೆ, ಒಮ್ಮೆ ಫೇಲ್ ಆದರೆ ಅದೇ ಅಂತಿಮವಲ್ಲ. ಸೋಲೇ ಗೆಲುವಿನ ಮೆಟ್ಟಿಲು ನೀನು ಶ್ರದ್ಧೆಯಿಂದ ಓದಿದರೆ ಇನ್ನೊಂದು ಸಲ ಪರೀಕ್ಷೆಯಲ್ಲಿ ಪಾಸಾಗಬಹುದು ಎಂದು ಮಗಳಿಗೆ ಹುರಿದುಂಬಿಸಿದರು.
ನೂರಾರು ಮಕ್ಕಳಿಗೆ ವಿದ್ಯೆ ನೀಡಿ ಅವರ ಬದುಕಿಗೆ ಬೆಳಕು ತೋರಿಸಿದ ನನಗೆ ಮಗಳನ್ನು ತಿದ್ದಲು ಸಾಧ್ಯವಾಗಲಿಲ್ಲವಲ್ಲ ಎಂದು ಶಂಕರಪ್ಪ ಕೊರಗತೊಡಗಿದ್ದರು. ವೃತ್ತಿಯಿಂದ ನಿವೃತ್ತಿ ಹೊಂದಿದ ಶಂಕರಪ್ಪ ಹೃದಯಾಘಾತದಿಂದ ತನ್ನ ಮಡದಿಯನ್ನು ಕಳೆದುಕೊಂಡು ಮಗಳ ಭವಿಷ್ಯದ ಚಿಂತನೆಯಲ್ಲಿ ಹಾಸಿಗೆ ಹಿಡಿದರು. ವಿದ್ಯಾಳ ಗೆಳೆಯರು “ನಿನ್ನ ಅಪ್ಪ ಈಗ ಸಾಯುವ ಸ್ಥಿತಿಯಲ್ಲಿದ್ದಾರೆ. ಸಾಯುವ ಮುನ್ನ ನಿನಗಾಗಿ ಹಣ, ಸಂಪತ್ತನ್ನು ಏನಾದರೂ ಇಟ್ಟಿದ್ದಾರಾ ನೋಡಿಕೋ’ ಎಂದು ದುಬೋಧನೆ ಮಾಡಿದರು. ಸಾವು ಬದುಕಿನ ನಡುವೆ ಹೋರಾಡುತ್ತಾ ಮಲಗಿದ್ದ ಶಂಕರಪ್ಪ ತಮ್ಮ ಎದುರಿನಲ್ಲಿ ಕುಳಿತಿದ್ದ ವಿದ್ಯಾಳಿಗೆ ತಾನು ಮಲಗಿದ್ದ ಹಾಸಿಗೆಯ ಅಡಿಯಿಂದ ಬೀಗದ ಕೈಯೊಂದನ್ನು ತೆಗೆದುಕೊಟ್ಟು, ಈ ಕೋಣೆಯೊಳಗೆ ನಿನ್ನ ಬದುಕಿಗೆ ದಾರಿ ಹುಡುಕಿಕೋ ಎಂದು ಹೇಳಿ ಕಣ್ಣು ಮುಚ್ಚಿದರು.
ವಿದ್ಯಾಳು ಆ ಕೋಣೆಯಲ್ಲಿ ತನ್ನ ಅಪ್ಪ ಹಣವನ್ನು ಅಡಗಿಸಿಟ್ಟಿರಬಹುದೆಂಬ ನಿರೀಕ್ಷೆಯಿಂದ ಬಾಗಿಲು ತೆಗೆಯುತ್ತಾಳೆ. ಆದರೆ ಆ ಕೋಣೆಯ ತುಂಬೆಲ್ಲ ಜೋಡಿಸಿಟ್ಟ ಪುಸ್ತಕಗಳೇ ಕಾಣುತ್ತಿದ್ದವು. ಪುಸ್ತಕಗಳ ಹೊರತಾಗಿ ಅಲ್ಲಿ ಬೇರೇನೂ ಇರಲಿಲ್ಲ. ಈ ಪುಸ್ತಕಗಳ ಹಾಳೆಯ ಯಾವುದಾದರೂ ಅಪ್ಪನ ಆಸ್ತಿಯ ಗುಟ್ಟು ತಿಳಿಯಬಹುದೆಂದು ಒಂದೊಂದೇ ಪುಸ್ತಕವನ್ನು ತೆರೆದು ಶ್ರದ್ಧೆಯಿಂದ ಓದತೊಡಗಿದ್ದಳು. ಹೀಗೆ ಓದುತ್ತಾ ದಿನಗಳು, ತಿಂಗಳುಗಳು, ವರ್ಷಗಳೇ ಉರುಳಿದವು. ಅಷ್ಟರಲ್ಲಿ ಅನೇಕ. ಕಥೆಗಳು, ಮಹಾತ್ಮರ ಜೀವನ ಚರಿತ್ರೆಗಳು, ಮಹಾಕಾವ್ಯಗಳನ್ನೆಲ್ಲ ಓದಿ ಮುಗಿಸಿದ ವಿದ್ಯಾನಿಜವಾಗಿಯೂ ವಿದ್ಯಾವಂತಳಾದಳು.
ಜೀವನದ ನಿಜವಾದ ಅರ್ಥ, ಮಾನವ ಜನ್ಮದ ಮಹತ್ವವನ್ನು ಮನಗಂಡಳು. ಮುಂದೆ ಪ್ರಖ್ಯಾತ ಲೇಖನಗಳನ್ನು ಬರೆಯಲು ಪ್ರಾರಂಭ ಮಾಡಿದಳು. ಶಂಕರಪ್ಪ ಮಗಳಿಗೆ ಕಲಿಸಿದ ಪಾಠ ಕೊನೆಗೂ ಪ್ರತಿಫಲ ನೀಡಿತ್ತು. ಆದರೆ ನೋಡಲು ಶಂಕರಪ್ಪ ಇರಲಿಲ್ಲ. ನಾವು ಕ್ಷಣಿಕ ಸುಖಕ್ಕೆ ಮಾರು ಹೋಗದೆ ನಮ್ಮ ಏಳಿಗೆಗೆ ಕಾರಣವಾಗುವ ಮಾರ್ಗಗಳತ್ತ ನಡೆದಾಗ ಇತರರಿಗೆ ಮಾರ್ಗದರ್ಶಿಯಾಗುತ್ತೇವೆ.
ನಿಸರ್ಗ ಸಿ.ಎ. ಚೀರನಹಳ್ಳಿ ತುಮಕೂರು ವಿಶ್ವವಿದ್ಯಾನಿಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.